Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
BANTWALA

ಬಂಟ್ವಾಳ: ಇಡ್ಕಿದು ಗ್ರಾಮದಲ್ಲಿ ಸರಣಿ ಕಳ್ಳತನ; ಗ್ರಾಮಸ್ಥರಲ್ಲಿ ಆತಂಕ

UllalaVaniBy UllalaVaniJuly 27, 2026Updated:July 27, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಬಂಟ್ವಾಳ, ಜು. 27 : ಇಡ್ಕಿದು ಗ್ರಾಮದಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ವೃದ್ಧನ ಮೇಲೆ ಹಲ್ಲೆ ನಡೆಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡಿದ್ದು, ಸಮೀಪದ ಮತ್ತೊಂದು ಮನೆಯಿಂದ ದ್ವಿಚಕ್ರ ವಾಹನವನ್ನು ಕಳವು ಮಾಡಿದ್ದಾರೆ. ಗ್ರಾಮದಲ್ಲಿನ ನಡೆದ ಸರಣಿ ಕಳ್ಳತನ ಘಟನೆಯು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ.

ಇಡ್ಕಿದು ಗ್ರಾಮದ ನಿವಾಸಿ ಹಾಗೂ ನಿವೃತ್ತ ವೈದ್ಯರಾದ ಕೆ. ಸೂರ್ಯನಾರಾಯಣ (79) ಅವರು ಮನೆಯಲ್ಲಿ ಮಲಗಿದ್ದ ವೇಳೆ, ತಡರಾತ್ರಿ ಅಪರಿಚಿತರು ಮನೆಯೊಳಗೆ ನುಗ್ಗಿದ್ದಾರೆ ಎನ್ನಲಾಗಿದೆ.ಶಬ್ದ ಕೇಳಿ ಎಚ್ಚರಗೊಂಡ ಸೂರ್ಯನಾರಾಯಣ ಅವರು ಮನೆಯೊಳಗೆ ಇಬ್ಬರು ಕಳ್ಳರು ಮನೆಗೆ ಪ್ರವೇಶಿಸಿರುವುದನ್ನು ಗಮನಿಸಿದ್ದಾರೆ. ಆರೋಪಿಗಳು ಅವರ ಹೊಟ್ಟೆಗೆ ಬಲವಾಗಿ ಹೊಡೆದು, ಅವರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ, ಅಂದಾಜು 2.60 ರೂ. ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ.

ಮನೆಯ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಗೋಡೆಯಲ್ಲಿ ಬಿಟ್ಟಿದ್ದ ತೆರೆಯ ಮೂಲಕ ಕಳ್ಳರು ಮನೆಯೊಳಗೆ ಪ್ರವೇಶಿಸಿದ್ದಿರಬಹುದು ಎಂದು ಶಂಕಿಸಲಾಗಿದೆ. ಈ ವೇಳೆ ಮನೆಯ ಮೇಲಂತಸ್ತಿನಲ್ಲಿ ಮಲಗಿದ್ದ ಸೂರ್ಯನಾರಾಯಣ ಅವರ ಪುತ್ರ, ಸೊಸೆ ಹಾಗೂ ಮೊಮ್ಮಗನಿಗೆ ಈ ಘಟನೆ ಕುರಿತು ಯಾವುದೇ ಮಾಹಿತಿ ಇರಲಿಲ್ಲ.ಚಿನ್ನದ ಸರ ದರೋಡೆಗೂ ಮುನ್ನ ಅಥವಾ ನಂತರ, ಕಳ್ಳರು ಸಮೀಪದ ಮತ್ತೊಂದು ಮನೆಗೆ ತೆರಳಿ ಅಲ್ಲಿ ಇದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಲು ಯತ್ನಿಸಿದ್ದಾರೆ.

ಆದರೆ ಅದರ ಲಾಕ್ ತೆರೆಯಲು ಸಾಧ್ಯವಾಗದೆ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.ಭಾನುವಾರ ಬೆಳಗ್ಗೆ ಇಡ್ಕಿದು ಗ್ರಾಮದ ಕೊಡಂಚರಪಾಲು ನಿವಾಸಿ ಆನಂದ ಸಾಫಲ್ಯ ಅವರಿಗೆ ಸೇರಿದ ಸುಮಾರು 30,000ರೂ. ಮೌಲ್ಯದ ದ್ವಿಚಕ್ರ ವಾಹನ ಮನೆಯ ಮುಂಭಾಗದ ಅಂಗಳದಿಂದ ಕಳವಾಗಿರುವುದು ಬೆಳಕಿಗೆ ಬಂದಿದೆ.ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳವು ಚಿನ್ನದ ಸರ ಕಳವಾದ ಮನೆಯಿಂದ ಸುಳಿವು ಹಿಡಿದು ಅಂಗಳ, ತೋಟದ ಮೂಲಕ ರಸ್ತೆವರೆಗೆ ತೆರಳಿ, ನಂತರ ಬೈಕ್ ಕಳವಾದ ಸ್ಥಳದ ಸಮೀಪದವರೆಗೂ ಸಾಗಿರುವುದಾಗಿ ತಿಳಿದುಬಂದಿದೆ.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ, ವಿಟ್ಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ಹಾಗೂ ಸಬ್-ಇನ್ಸ್‌ಪೆಕ್ಟರ್ ರಾಮಕೃಷ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಎರಡೂ ಕೃತ್ಯಗಳನ್ನು ಒಂದೇ ಕಳ್ಳರ ತಂಡ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ರೋಹನ್ ಸಿಟಿಯಲ್ಲಿ ರೂಪಶ್ರೀ ವರ್ಕಾಡಿ ಸೇರಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಿಗೆ ಸನ್ಮಾನ

July 27, 2026

ಬಂಟ್ವಾಳ: ಚಲಿಸುತ್ತಿದ್ದಾಗ ಕಳಚಿದ ಕಂಟೇನರ್ ಲಾರಿಯ ಚಕ್ರ – ಪಾದಚಾರಿಗೆ ಗಾಯ…!

July 27, 2026

ಕಾಸರಗೋಡು: ಮಾದಕ ವಸ್ತು ಸಾಗಾಟ ಪ್ರಕರಣ; ಆರೋಪಿಯ ಬಂಧನ..!

July 25, 2026

Comments are closed.

Advertise
ಸಂಪರ್ಕಿಸಿ

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026
suddi

ರೋಹನ್ ಸಿಟಿಯಲ್ಲಿ ರೂಪಶ್ರೀ ವರ್ಕಾಡಿ ಸೇರಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಿಗೆ ಸನ್ಮಾನ

By UllalaVaniJuly 27, 20260

ಮಂಗಳೂರು; 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಾದ ರೂಪಶ್ರೀ ವರ್ಕಾಡಿ, ಮಾಸ್ಟರ್ ಅತೀಶ್ ಎಸ್ ಶೆಟ್ಟಿ, ಡಾ. ಪ್ರದೀಪ್ ಕೆಂಚನೂರು,…

ಬಂಟ್ವಾಳ: ಇಡ್ಕಿದು ಗ್ರಾಮದಲ್ಲಿ ಸರಣಿ ಕಳ್ಳತನ; ಗ್ರಾಮಸ್ಥರಲ್ಲಿ ಆತಂಕ

July 27, 2026

ಸಚಿವ ಯು.ಟಿ.ಖಾದರ್‌ಗೆ AMEC ಗ್ಲೋಬಲ್ ಸಿಟಿಝನ್ ಲೀಡರ್‌ಶಿಪ್ ಪ್ರಶಸ್ತಿ ಪ್ರದಾನ

July 27, 2026

ಬಂಟ್ವಾಳ: ಚಲಿಸುತ್ತಿದ್ದಾಗ ಕಳಚಿದ ಕಂಟೇನರ್ ಲಾರಿಯ ಚಕ್ರ – ಪಾದಚಾರಿಗೆ ಗಾಯ…!

July 27, 2026
1 2 3 … 2,035 Next
Automatic YouTube Gallery

ದಂತ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಪ್ರೊ.ಎನ್. ಶ್ರೀಧರ್ ಶೆಟ್ಟಿ ಕೊಡುಗೆ ಅಪಾರ

ಪ್ರೊ.ಎನ್. ಶ್ರೀಧರ್ ಶೆಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮ ;ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ.ಯ ಆವಿಷ್ಕಾರ್ ಸಭಾಂಗಣದಲ್ಲಿ ಆಯೋಜನೆ

ದಂತ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಪ್ರೊ.ಎನ್. ಶ್ರೀಧರ್ ಶೆಟ್ಟಿ ಕೊಡುಗೆ ಅಪಾರ

📍 Ullal | Dakshina Kannada | Coastal Karnataka News ...
Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ದಂತ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಪ್ರೊ.ಎನ್. ಶ್ರೀಧರ್ ಶೆಟ್ಟಿ ಕೊಡುಗೆ ಅಪಾರ
Now Playing
ದಂತ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಪ್ರೊ.ಎನ್. ಶ್ರೀಧರ್ ಶೆಟ್ಟಿ ಕೊಡುಗೆ ಅಪಾರ
ಪ್ರೊ.ಎನ್. ಶ್ರೀಧರ್ ಶೆಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮ ;ನಿಟ್ಟೆ ಪರಿಗಣಿಸಲ್ಪಟ್ಟ ...

||CCTV VIDEO|| ರೌ*ಡಿಶೀ*ಟರ್ ವಿಕ್ಕಿ ಬಪ್ಪಲ್ ಮೇಲೆ ದಾ#ಳಿ..!!
Now Playing
||CCTV VIDEO|| ರೌ*ಡಿಶೀ*ಟರ್ ವಿಕ್ಕಿ ಬಪ್ಪಲ್ ಮೇಲೆ ದಾ#ಳಿ..!!
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version