Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
suddi

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲದಿಂದ ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನ, ಎಐ ರಿಸೆಪ್ಷನ್ ರೋಬೋಟ್ ಅನಾವರಣ

UllalaVaniBy UllalaVaniJuly 23, 2026Updated:July 24, 2026No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು,ಜು. 23 :ಶ್ರೀನಿವಾಸ ವಿಶ್ವವಿದ್ಯಾಲಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಾಜಿಯಲ್ಲಿ ವಿದ್ಯಾರ್ಥಿಗಳ ತಾಂತ್ರಿಕ ಪ್ರತಿಭೆ ಮತ್ತು ನವೋದ್ಯಮ ಸಾಮರ್ಥ್ಯಕ್ಕೆ ಮತ್ತೊಂದು ಮಹತ್ವದ ಸಾಕ್ಷಿಯಾಗಿ, ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನ, ಹಾಗೂ ಎಐ ರಿಸೆಪ್ಷನ್ ರೋಬೋಟ್ ಗಳನ್ನು ಗುರುವಾರ, ಜುಲೈ 23ರಂದು ಮುಕ್ಕ ಕ್ಯಾಂಪಸ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಯಿತು.

ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಆರ್ಥಿಕ ಸಹಕಾರದೊಂದಿಗೆ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಧ್ಯಾಪಕರ ಮಾರ್ಗದರ್ಶನದಲ್ಲಿ ಈ ಅತ್ಯಾಧುನಿಕ ತಂತ್ರಜ್ಞಾನ ಯೋಜನೆಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಇವು ವಿಶ್ವವಿದ್ಯಾಲಯದ ಸಂಶೋಧನಾ ಮನೋಭಾವ, ನವೀನ ತಂತ್ರಜ್ಞಾನ, ಸುಸ್ಥಿರ ಅಭಿವೃದ್ಧಿ ಹಾಗೂ ಉದ್ಯಮಾಭಿಮುಖ ಇಂಜಿನಿಯರಿಂಗ್ ಶಿಕ್ಷಣದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಈ ಸಂಶೋಧನೆಗಳು ಶ್ರೀನಿವಾಸ ವಿಶ್ವವಿದ್ಯಾಲಯದ “ಸಂಶೋಧನೆ, ನವೋದ್ಯಮ ಮತ್ತು ತಂತ್ರಜ್ಞಾನಾಧಾರಿತ ಶಿಕ್ಷಣ” ಎಂಬ ಧ್ಯೇಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ವಿದ್ಯಾರ್ಥಿಗಳನ್ನು ಭವಿಷ್ಯದ ಜಾಗತಿಕ ತಾಂತ್ರಿಕ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸುವ ಮಹತ್ವದ ಹೆಜ್ಜೆಯಾಗಿದೆ.ಎಐ ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನ “ಶ್ರೀ ವಾಹನ್”ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಲಾದ ಎಐ ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನದಲ್ಲಿ ಲಿಡಾರ್, ಎಐ ವಿಷನ್ ಸಿಸ್ಟಮ್, ಜಿಪಿಎಸ್ ಆಧಾರಿತ ಮಾರ್ಗಸಂಚಲನ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಸಿಸ್ಟೆಂಟ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಪ್ರಸ್ತುತ ಈ ವಾಹನ ಪೂರ್ವನಿರ್ಧರಿತ ಮಾರ್ಗದಲ್ಲಿ ಸಂಪೂರ್ಣ ಸ್ವಯಂಚಾಲಿತವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಸುರಕ್ಷತೆ ಮತ್ತು ಕಾರ್ಯಾಚರಣೆಯ ಅನುಕೂಲತೆಗಾಗಿ ರಿಮೋಟ್ ಕಂಟ್ರೋಲ್ ಓವರ್‌ರೈಡ್ ವ್ಯವಸ್ಥೆ ಸಹ ಒದಗಿಸಲಾಗಿದೆ. ಭವಿಷ್ಯದಲ್ಲಿ ಯಾವುದೇ ಪೂರ್ವ ನಕ್ಷೆ ಇಲ್ಲದ ಪ್ರದೇಶಗಳಲ್ಲಿಯೂ ಸಹ ಸ್ವಯಂ ಮಾರ್ಗ ಪತ್ತೆಹಚ್ಚಿ ಸಂಚರಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನೆ ಮುಂದುವರಿದಿದೆ.ಸ್ವಯಂಚಾಲಿತ ವಿದ್ಯುತ್ ವಾಹನವು ಆರು ಆಸನಗಳ ಸಾಮರ್ಥ್ಯ ಹೊಂದಿದ್ದು, ಅಗತ್ಯವಿದ್ದಲ್ಲಿ ರೋಗಿಗಳನ್ನು ಸಾಗಿಸಲು ಅನುಕೂಲವಾಗುವಂತೆ ಪರಿವರ್ತಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ದಟ್ಟ ವಾಹನ ಸಂಚಾರವನ್ನು ತಪ್ಪಿಸಲು ಆಂಬುಲೆನ್ಸ್ ರೀ-ರೌಟಿಂಗ್ ಆಪ್ ಜೊತೆ ಕಾರ್ಯನಿರ್ವಹಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.ಈ ವಾಹನದಲ್ಲಿ 5 ಕಿಲೋವ್ಯಾಟ್ ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿ ಅಳವಡಿಸಲಾಗಿದ್ದು, ಸುಮಾರು ಒಂದೂವರೆ ಗಂಟೆಗಳ ಬ್ಯಾಟರಿ ಬ್ಯಾಕಪ್ ಒದಗಿಸುತ್ತದೆ. ಒಂದೇ ಬಾರಿ ಚಾರ್ಜ್ ಮಾಡಿದರೆ ಸುಮಾರು 20 ಕಿಲೋಮೀಟರ್ ದೂರ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಅಗತ್ಯಕ್ಕೆ ಅನುಗುಣವಾಗಿ ಬ್ಯಾಟರಿಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಬಹುದಾಗಿದೆ. ವಾಹನವು ಮ್ಯಾನುಯಲ್ ಮೋಡ್‌ನಲ್ಲಿ ಗಂಟೆಗೆ ಸುಮಾರು 28 ಕಿ.ಮೀ. ಹಾಗೂ ಸ್ವಯಂಚಾಲಿತ ಮೋಡ್‌ನಲ್ಲಿ ಗಂಟೆಗೆ 5 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ.ಈ ವಾಹನದಲ್ಲಿ ಲಿಡಾರ್, ಅಲ್ಟ್ರಾಸೋನಿಕ್ ಸಂವೇದಕ, ಓಡೊಮೆಟಿರಿ, ವಿಶುವಲ್ ಸ್ಲಾಮ್ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ ಮ್ಯಾಪಿಂಗ್ ಗಣನಾ ಕ್ರಮಾವಳಿಗಳನ್ನು ನಿರ್ವಹಿಸುವ ಸಿಂಗಲ್ ಬೋರ್ಡ್ ಕಂಪ್ಯೂಟರ್ ಸೇರಿದಂತೆ ಅತ್ಯಾಧುನಿಕ ಸಂವೇದಕ ಫ್ಯೂಶನ್ ಟೆಕ್ನಾಲಜಿ ಅಳವಡಿಸಲಾಗಿದೆ.ಈ ಸ್ವಯಂಚಾಲಿತ ವಾಹನವನ್ನು ರಕ್ಷಣಾ ಕ್ಷೇತ್ರದಲ್ಲಿ ದೂರ ನಿಯಂತ್ರಿತ ವಾಹನವಾಗಿ, ಕೈಗಾರಿಕಾ ಬಳಕೆಗಾಗಿ, ಮಾನವರ ಸುರಕ್ಷಿತ ಸಂಚಾರಕ್ಕೆ ಹಾಗೂ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತ್ವರಿತವಾಗಿ ಸಾಗಿಸಲು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ.ಭಾರತೀಯ ರಸ್ತೆ ನಕ್ಷೆಗಳಿಗೆ ಹೊಂದಿಕೊಳ್ಳುವ ಪೂರ್ವ-ಪ್ರಶಿಕ್ಷಿತ (Pre-trained) ಸ್ವಯಂಚಾಲಿತ ವಾಹನಗಳ ಅಭಿವೃದ್ಧಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಬೇಡಿಕೆ ಇರುವುದರಿಂದ, ಈ ಯೋಜನೆ ಭವಿಷ್ಯದ ಸಂಶೋಧನೆ ಹಾಗೂ ವಾಣಿಜ್ಯೀಕರಣಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಈಗಾಗಲೇ ಬಳಕೆಯಲ್ಲಿದ್ದ ವಾಹನವನ್ನು ಮರುರೂಪಾಂತರ ಮಾಡುವ ಮೂಲಕ ಅಭಿವೃದ್ಧಿಪಡಿಸಿರುವ ಈ ಯೋಜನೆಯ ಒಟ್ಟು ವೆಚ್ಚ ಸುಮಾರು 4 ರಿಂದ 5 ಲಕ್ಷ ಆಗಿದ್ದು, ಕೇವಲ ಆರು ತಿಂಗಳ ಅವಧಿಯಲ್ಲಿ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.ಈ ಮಹತ್ವಾಕಾಂಕ್ಷಿ ಯೋಜನೆಗೆ ಪ್ರೊ. ವಿಶ್ವಾಸ್ ಸಿ. ಶೆಟ್ಟಿ ಅವರು ಮಾರ್ಗದರ್ಶನ ನೀಡಿದ್ದು, ರಿಸರ್ಚ್ ಅಸೋಸಿಯೇಟ್ ಶ್ರೀ ವಿಶಾಕ್ ಮೆಂಡನ್ ಅವರು ಸಂಶೋಧನೆ ಮತ್ತು ಅಭಿವೃದ್ಧಿ (ತಾಂತ್ರಿಕ) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳಾದ ಶ್ರೇಯಸ್, ಅದ್ವಿತೀಯ, ಉಜ್ವಲ್, ಅಕ್ಷಯ್, ಮಂಜುನಾಥ್ ಹಾಗೂ ಪ್ರಖ್ಯಾತ್ ಅವರು ಈ ಯೋಜನೆಯ ಯಶಸ್ವಿ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.ಕೃತಕ ಬುದ್ಧಿಮತ್ತೆ ಆಧಾರಿತ ಸ್ವಾಗತ ಮತ್ತು ಮಾಹಿತಿ ಸಹಾಯಕ ರೋಬೋಟ್ –
ಶ್ರೀನಿಬೋಟ್ (SRINIBOT)ಶ್ರೀನಿಬೋಟ್, ಶ್ರೀನಿವಾಸ ವಿಶ್ವವಿದ್ಯಾಲಯಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾದ ಕೃತಕ ಬುದ್ಧಿಮತ್ತೆ ಆಧಾರಿತ ಅತ್ಯಾಧುನಿಕ ಸ್ವಾಗತ ಹಾಗೂ ಸಂದರ್ಶಕರ ಸಹಾಯಕ ಎಐ ರಿಸೆಪ್ಷನ್ ರೋಬೋಟ್ ಆಗಿದೆ. ವಿಶ್ವವಿದ್ಯಾಲಯಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು, ಸಿಬ್ಬಂದಿ, ಸಂಶೋಧಕರು ಹಾಗೂ ಅತಿಥಿಗಳನ್ನು ಸೌಹಾರ್ದಯುತವಾಗಿ ಸ್ವಾಗತಿಸಿ, ಅವರ ಪ್ರಶ್ನೆಗಳಿಗೆ ನೈಸರ್ಗಿಕ ಧ್ವನಿ ಸಂವಾದದ ಮೂಲಕ ಉತ್ತರಿಸುವುದರ ಜೊತೆಗೆ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ತ್ವರಿತವಾಗಿ ಒದಗಿಸುವ ಸಾಮರ್ಥ್ಯವನ್ನು ಈ ರೋಬೋಟ್ ಹೊಂದಿದೆ.ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ ವಿಷನ್ ಹಾಗೂ ಮಾನವ–ರೋಬೋಟ್ ಸಂವಹನ ತಂತ್ರಜ್ಞಾನಗಳನ್ನು ಸಮನ್ವಯಗೊಳಿಸಿರುವ ಶ್ರೀನಿಬೋಟ್, ಸಂಶೋಧನೆ, ನವೋದ್ಯಮ ಮತ್ತು ಮುಂದಿನ ತಲೆಮಾರಿನ ಸ್ವಯಂಚಾಲಿತ ತಂತ್ರಜ್ಞಾನಗಳ ಅಭಿವೃದ್ಧಿಯತ್ತ ಶ್ರೀನಿವಾಸ್ ವಿಶ್ವವಿದ್ಯಾಲಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.ಪ್ರಮುಖ ತಾಂತ್ರಿಕ ವೈಶಿಷ್ಟ್ಯಗಳು:ಶ್ರೀನಿಬೋಟ್ ಎತ್ತರ 5 ಅಡಿ (152 ಸೆಂ.ಮೀ.) ಇದ್ದು, ಎಐ ಆಧಾರಿತ ನೈಸರ್ಗಿಕ ಧ್ವನಿ ಸಂವಾದದ ಮೂಲಕ ಪ್ರಶ್ನೆಗಳಿಗೆ ಉತ್ತರಿಸುವ ವ್ಯವಸ್ಥೆಯನ್ನು ಹೊಂದಿದೆ. ಸುಮಾರು 8–10 ಗಂಟೆಗಳ ಕಾರ್ಯಾವಧಿಯ ಬ್ಯಾಟರಿಯನ್ನು ಅಳವಡಿಸಲಾಗಿದೆ. ಮಾಹಿತಿ ವೀಕ್ಷಣೆ ಹಾಗೂ ಬಳಕೆದಾರರ ಸಂವಹನಕ್ಕಾಗಿ 11.6 ಇಂಚಿನ ಸಂವಾದಾತ್ಮಕ ಟಚ್ ಡಿಸ್‌ಪ್ಲೇ ಯನ್ನು ಅಳವಡಿಸಲಾಗಿದೆ. ಸಂದರ್ಶಕರ ಮುಖ ಪತ್ತೆ ಮತ್ತು ಮುಖ ಗುರುತಿಸುವಿಕೆಗಾಗಿ ಸಂಯೋಜಿತ ಕ್ಯಾಮೆರಾ ಅಳವಡಿಸಲಾಗಿದೆ.ನೈಸರ್ಗಿಕ ಧ್ವನಿ ಸಂವಾದ ತಂತ್ರಜ್ಞಾನದ ಮೂಲಕ ಸುಲಭ ಮತ್ತು ಸಹಜ ಮಾನವ–ರೋಬೋಟ್ ಸಂವಹನ ಮತ್ತು ವಿವಿಧ ಭಾಷೆಗಳಲ್ಲಿ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದೆ. ಅಗತ್ಯಕ್ಕೆ ಅನುಗುಣವಾಗಿ ರೂಪಿಸಬಹುದಾದ ಬಳಕೆದಾರ ಸಂಪರ್ಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ನಿರಂತರ ಒಳಾಂಗಣ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸೂಕ್ತ ವಿನ್ಯಾಸ ಮಾಡಲಾಗಿದೆ.ಯೋಜನೆಯ ಉದ್ದೇಶಗಳುಶಿಕ್ಷಣ ಸಂಸ್ಥೆಗಳಿಗಾಗಿ ಬುದ್ಧಿವಂತ AI ಆಧಾರಿತ ಸ್ವಾಗತ ರೋಬೋಟ್ ಅಭಿವೃದ್ಧಿಪಡಿಸುವುದು.
ನೈಸರ್ಗಿಕ ಹಾಗೂ ಸಂವಾದಾತ್ಮಕ ಸಂವಹನದ ಮೂಲಕ ಸಂದರ್ಶಕರ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವುದು.
ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸೇವೆಗಳನ್ನು ಕ್ಷಣಾರ್ಧದಲ್ಲಿ ಒದಗಿಸುವುದು.ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ ತಂತ್ರಜ್ಞಾನಗಳ ಪ್ರಾಯೋಗಿಕ ಅನುಷ್ಠಾನವನ್ನು ಪ್ರದರ್ಶಿಸುವುದು.ವಿಶ್ವವಿದ್ಯಾಲಯಗಳು, ಕೈಗಾರಿಕೆಗಳು, ಆಸ್ಪತ್ರೆಗಳು, ಹೋಟೆಲ್‌ಗಳು ಹಾಗೂ ಸರ್ಕಾರಿ ಸಂಸ್ಥೆಗಳ ಅಗತ್ಯಗಳಿಗೆ ಅನುಗುಣವಾಗಿ ರೂಪಾಂತರಿಸಬಹುದಾದ ರೋಬೋಟಿಕ್ ವೇದಿಕೆಯನ್ನು ನಿರ್ಮಿಸುವುದು.ಪ್ರಮುಖ ಕಾರ್ಯಕ್ಷಮತೆಗಳು:ಎಐ ಧ್ವನಿ ಸಹಾಯಕ: ಸಂದರ್ಶಕರೊಂದಿಗೆ ಬುದ್ಧಿವಂತ ಧ್ವನಿ ಸಂವಾದ ನಡೆಸಿ, ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸುವುದು, ಅಗತ್ಯ ಮಾಹಿತಿಯನ್ನು ಒದಗಿಸುವುದು ಹಾಗೂ ಸೂಕ್ತ ವಿಭಾಗಗಳಿಗೆ ಮಾರ್ಗದರ್ಶನ ನೀಡುವುದು.
ಮುಖ ಪತ್ತೆ ಮತ್ತು ಗುರುತಿಸುವಿಕೆ: AI ಆಧಾರಿತ ಕ್ಯಾಮೆರಾ ಮೂಲಕ ಸಂದರ್ಶಕರ ಮುಖವನ್ನು ಗುರುತಿಸಿ, ವೈಯಕ್ತಿಕ ಸಂವಹನ ಹಾಗೂ ಪರಿಣಾಮಕಾರಿ ಸಂದರ್ಶಕರ ನಿರ್ವಹಣೆಯನ್ನು ಸಾಧ್ಯವಾಗಿಸುತ್ತದೆ.
ಸಂವಾದಾತ್ಮಕ ಟಚ್ ಇಂಟರ್‌ಫೇಸ್: ವಿಶ್ವವಿದ್ಯಾಲಯದ ವಿಭಾಗಗಳು, ಪ್ರವೇಶಾತಿ ಮಾಹಿತಿ, ಪ್ರಕಟಣೆಗಳು, ಕಾರ್ಯಕ್ರಮಗಳು, ಪ್ರಯೋಗಾಲಯಗಳು ಹಾಗೂ ವಿವಿಧ ಸೇವೆಗಳ ಮಾಹಿತಿಯನ್ನು ಸುಲಭವಾಗಿ ಪಡೆಯಲು ಅನುಕೂಲವಾಗುವ ಬಳಕೆದಾರ ಸ್ನೇಹಿ ಟಚ್ ಡಿಸ್‌ಪ್ಲೇ.ಬಹುಭಾಷಾ ಬೆಂಬಲ: ವಿದ್ಯಾರ್ಥಿಗಳು, ಪೋಷಕರು, ಅಂತರರಾಷ್ಟ್ರೀಯ ಅತಿಥಿಗಳು ಹಾಗೂ ಅಧ್ಯಾಪಕರೊಂದಿಗೆ ವಿವಿಧ ಭಾಷೆಗಳಲ್ಲಿ ಸಂವಹನ ನಡೆಸುವ ಸಾಮರ್ಥ್ಯ.
ಸ್ಮಾರ್ಟ್ ಮಾಹಿತಿ ಸಹಾಯಕ: ಪ್ರವೇಶಾತಿ, ಶೈಕ್ಷಣಿಕ ವಿಭಾಗಗಳು, ಪ್ರಯೋಗಾಲಯಗಳು, ಅಧ್ಯಾಪಕರು, ಕ್ಯಾಂಪಸ್ ಸೌಲಭ್ಯಗಳು, ಕಾರ್ಯಕ್ರಮಗಳು ಹಾಗೂ ಆಡಳಿತಾತ್ಮಕ ಕಚೇರಿಗಳ ಕುರಿತು ತ್ವರಿತ ಮತ್ತು ನಿಖರ ಮಾಹಿತಿಯನ್ನು ಒದಗಿಸುತ್ತದೆ.
ಅಗತ್ಯಕ್ಕೆ ಅನುಗುಣವಾಗಿ ರೂಪಾಂತರಿಸಬಹುದಾದ ವೇದಿಕೆ: ಶೈಕ್ಷಣಿಕ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ಆಸ್ಪತ್ರೆಗಳು, ಹೋಟೆಲ್‌ಗಳು ಹಾಗೂ ಸರ್ಕಾರಿ ಕಚೇರಿಗಳ ಅಗತ್ಯಗಳಿಗೆ ಅನುಗುಣವಾಗಿ ತಂತ್ರಾಂಶ ಮತ್ತು ಕಾರ್ಯವೈಖರಿಯನ್ನು ಸುಲಭವಾಗಿ ಕಸ್ಟಮೈಸ್ ಮಾಡಬಹುದಾಗಿದೆ.ಶ್ರೀನಿಬೋಟ್ ಶ್ರೀನಿವಾಸ ವಿಶ್ವವಿದ್ಯಾಲಯದ ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್ ಮತ್ತು ಸ್ವಯಂಚಾಲಿತ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಸಂಶೋಧನಾ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ನವೀನ ಸಾಧನೆಯಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಡಿಜಿಟಲ್ ಪರಿವರ್ತನೆಗೆ ಹೊಸ ದಿಕ್ಕನ್ನು ತೋರಿಸುವ ಮಹತ್ವದ ಆವಿಷ್ಕಾರವಾಗಿದೆ. ಈ ಅತ್ಯಾಧುನಿಕ AI ಆಧಾರಿತ ಸ್ವಾಗತ ರೋಬೋಟ್ ಅನ್ನು ಸುಮಾರು ₹5 ಲಕ್ಷ ವೆಚ್ಚದಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ವಿನ್ಯಾಸಗೊಳಿಸಿ ಯಶಸ್ವಿಯಾಗಿ ನಿರ್ಮಿಸಲಾಗಿದೆ. ಈ ಯೋಜನೆಗೆ ಅಖಿಲ್ ಕೆ. ಪಿ. ಅವರು ಮಾರ್ಗದರ್ಶನ ನೀಡಿದ್ದು, ರಿಸರ್ಚ್ ಅಸೋಸಿಯೇಟ್‌ಗಳಾದ ನಿಕೇತ್ ಜಾದವ್, ಜೋಯಲ್ ಜೋಸ್ ಹಾಗೂ ಸಮರ್ಥ್ ನಾಗನೂರ್ ಅವರು ಯೋಜನೆಯ ಸಮನ್ವಯ ಹಾಗೂ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.ಸಂಶೋಧನೆ ಮತ್ತು ನವೋದ್ಯಮ ಯೋಜನೆಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾದ ಶ್ರೀಮತಿ. ಎ. ವಿಜಯಲಕ್ಷ್ಮಿ ಆರ್. ರಾವ್, ಉಪಕುಲಪತಿಗಳಾದ ಡಾ. ಸತ್ಯನಾರಾಯಣ ರೆಡ್ಡಿ, ಕುಲಸಚಿವರಾದ ಡಾ. ಅನಿಲ್ ಕುಮಾರ್, ಅಭಿವೃದ್ಧಿ ವಿಭಾಗದ ಕುಲಸಚಿವರಾದ ಡಾ. ಅಜಯ್ ಕುಮಾರ್, ಸಹಾಯಕ ಕುಲಸಚಿವರಾದ ಡಾ. ಜಯಶ್ರೀ ಬೋಳಾರ್, ಶ್ರೀನಿವಾಸ ವಿವಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಮುಖ್ಯಸ್ಥರಾದ ಡಾ. ರಾಮಕೃಷ್ಣ ಎನ್. ಹೆಗಡೆ, ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ. ಎಂ., ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಸಂಶೋಧನಾ ಆವಿಷ್ಕಾರಗಳ ಕಾರ್ಯವೈಖರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಂಗಳೂರು: ರಾತ್ರಿ ವೇಳೆ ರಾ. ಹೆದ್ದಾರಿಗಳಲ್ಲಿ ತೃತೀಯಲಿಂಗಿಗಳು ಗುಂಪು ಸೇರುವುದನ್ನ ತಡೆಯಲು ಡಿಸಿ ಸೂಚನೆ

October 10, 2026

ಕುಂಪಲ ಶಿವಪುರ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ

October 9, 2026

ಮೈತ್ರಿ ಮಲ್ಲಿ ವಿಕಾಸ್: ಮಂಗಳೂರಿನಿಂದ ಪ್ಯಾರಿಸ್ ರನ್‌ವೇವರೆಗೆ— ಸೌಂದರ್ಯ, ಆತ್ಮವಿಶ್ವಾಸ ಮತ್ತು ಹೆಮ್ಮೆಯ ಪಯಣ

October 9, 2026

Comments are closed.

Advertise
ಸಂಪರ್ಕಿಸಿ

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026

ರಾತ್ರಿ ಮಲಗುವಾಗ ಕಾಲುಗಳನ್ನು ಹೊದಿಕೆಯ ಹೊರಗೆ ಇಡುತ್ತೀರಾ?

September 25, 2026

ಇನ್ನುಂದೆ ಕೃತಕ ಪನೀರ್‌ಗೆ ಅನಲಾಗ್ ಪನೀರ್ ಎಂದು ಹೆಸರು ಬದಲಿಸುವಂತೆ ಕೇಂದ್ರ ನೋಟಿಫಿಕೇಷನ್

September 25, 2026
suddi

ಮಂಗಳೂರು: ರಾತ್ರಿ ವೇಳೆ ರಾ. ಹೆದ್ದಾರಿಗಳಲ್ಲಿ ತೃತೀಯಲಿಂಗಿಗಳು ಗುಂಪು ಸೇರುವುದನ್ನ ತಡೆಯಲು ಡಿಸಿ ಸೂಚನೆ

By UllalaVaniOctober 10, 20260

ಮಂಗಳೂರು, ಅ.10: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತೃತೀಯಲಿಂಗಿಗಳು ಗುಂಪು ಸೇರಿ ಸವಾರರಿಗೆ ತೊಂದರೆ ನೀಡುವುದನ್ನು ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ…

ಕುಂಪಲ ಶಿವಪುರ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ

October 9, 2026

ಮೈತ್ರಿ ಮಲ್ಲಿ ವಿಕಾಸ್: ಮಂಗಳೂರಿನಿಂದ ಪ್ಯಾರಿಸ್ ರನ್‌ವೇವರೆಗೆ— ಸೌಂದರ್ಯ, ಆತ್ಮವಿಶ್ವಾಸ ಮತ್ತು ಹೆಮ್ಮೆಯ ಪಯಣ

October 9, 2026

ಹಿದಾಯತ್ ನಗರ SYS ವತಿಯಿಂದ ಮುಹಿಯ್ಯದ್ದೀನ್ ಮಾಲೆ ಆಲಾಪನೆ

October 9, 2026
1 2 3 … 2,129 Next
Automatic YouTube Gallery

||DASARA ELEPHANT|| ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!!

ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!!

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani ...
for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
||DASARA ELEPHANT||  ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!!
Now Playing
||DASARA ELEPHANT|| ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!!
ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!! 📍 Ullal | ...
ಮೈಸೂರು ದಸರಾ ಅಂಬಾರಿ ಸಾರಥಿ ಆಯ್ಕೆಯಲ್ಲಿ ಮಹತ್ವದ ತಿರುವು....!!

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani ...
for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ASSAIGOLI ಅ.11: ಸ್ವದೇಶಿ ಉತ್ಪನ್ನಗಳ ಮೇಳದ  ಡಿಟೇಲ್ಸ್ ಇಲ್ಲಿದೆ....||complete details||
Now Playing
ASSAIGOLI ಅ.11: ಸ್ವದೇಶಿ ಉತ್ಪನ್ನಗಳ ಮೇಳದ ಡಿಟೇಲ್ಸ್ ಇಲ್ಲಿದೆ....||complete details||
ಚಿತ್ರಕಲೆ, ರಸಪ್ರಶ್ನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ `ವಿಕಸಿತ ಭಾರತ' ...
ಚಿತ್ರಕಲೆ, ರಸಪ್ರಶ್ನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

`ವಿಕಸಿತ ಭಾರತ' ಪರಿಕಲ್ಪನೆಯಡಿ ಉಳ್ಳಾಲ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ : ಪ್ರಧಾನಿ ನರೇಂದ್ರ ಮೋದಿಯವರ ಜೀವನ, ಸಾಧನೆಗಳು ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಕುರಿತು ರಸಪ್ರಶ್ನೆ ಸ್ಪರ್ಧೆ :ಹವ್ಯಾಸಿ ಮೆಲೋಡೀಸ್ ತಂಡದಿoದ ಗಾಯನ ...


📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version