Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ಮಂಜನಾಡಿ ದುರಂತ ಪ್ರಕರಣ: ಪೊಲೀಸ್ ಆಯುಕ್ತರು ಹಾಗೂ ಕೊಣಾಜೆ ಠಾಣಾಧಿಕಾರಿಗೆ ಹೈಕೋರ್ಟ್ ನೋಟಿಸ್ ಒಂದು ವರ್ಷ ಕಳೆದರೂ ಎಫ್‌ಐಆರ್‌ಗಾಗಿ ಕಾಯುತ್ತಿರುವ ಆಶ್ವಿನಿ

UllalaVaniBy UllalaVaniJuly 17, 2026Updated:July 17, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು: ಮಂಜನಾಡಿ ಗುಡ್ಡ ಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ WP No.11083/2026 (GM–POLICE) ರಿಟ್ ಅರ್ಜಿಯಲ್ಲಿ ಕರ್ನಾಟಕ ರಾಜ್ಯ, ಮಂಗಳೂರು ನಗರ ಪೊಲೀಸ್ ಆಯುಕ್ತರು, ಕೊಣಾಜೆ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ಆರು ಪ್ರತಿವಾದಿಗಳಿಗೆ ನೋಟಿಸ್ ಜಾರಿಯಾಗಿದೆ.

2026ರ ಜುಲೈ 14ರಂದು ಮಾನ್ಯ ನ್ಯಾಯಮೂರ್ತಿ ಶ್ರೀ ಸುರಜ್ ಗೋವಿಂದರಾಜ್ ಅವರ ಪೀಠದ ಮುಂದೆ ಪ್ರಕರಣ ವಿಚಾರಣೆಗೆ ಬಂದಿದ್ದು, ಪ್ರತಿವಾದಿಗಳ ಪರ ವಕೀಲರು ನೋಟಿಸ್ ಸ್ವೀಕರಿಸಿದ್ದಾರೆ. ಪ್ರಕರಣವನ್ನು 2026ರ ಜುಲೈ 29ರಂದು ಮುಂದಿನ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.

ಅರ್ಜಿದಾರರಾದ ಆಶ್ವಿನಿ ಪೂಜಾರಿ ಅವರು, ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (NITK) ಸಿವಿಲ್ ಇಂಜಿನಿಯರಿಂಗ್ ವಿಭಾಗದ ತಾಂತ್ರಿಕ ವರದಿಯ ಆಧಾರದ ಮೇಲೆ ಸಂಬಂಧಪಟ್ಟ ಅಧಿಕಾರಿಗಳು, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಇಂಜಿನಿಯರ್‌ಗಳು ಹಾಗೂ ಇತರ ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 105 ಮತ್ತು 106 ಸೇರಿದಂತೆ ಅನ್ವಯವಾಗುವ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿದೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಆ ಮನವಿಯ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಕೊಣಾಜೆ ಪೊಲೀಸ್ ಠಾಣೆಗೆ ದೂರು ಪರಿಶೀಲಿಸಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದರು.

2025ರ ಮೇ 30ರಂದು ಸುಮಾರು 70 ಅಡಿ ಎತ್ತರದ ಗುಡ್ಡವನ್ನು ಜೆಸಿಬಿ ಯಂತ್ರದ ಮೂಲಕ ಅಗೆದು, ಸರ್ಕಾರದ ಸುರಕ್ಷತಾ ಮಾನದಂಡಗಳು ಹಾಗೂ ಇಳಿಜಾರು ಪ್ರದೇಶಗಳಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದೆ ಕಾಮಗಾರಿ ನಡೆಸಿದ ಪರಿಣಾಮ ಭೀಕರ ಗುಡ್ಡ ಕುಸಿತ ಸಂಭವಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಈ ದುರಂತದಲ್ಲಿ ಆಶ್ವಿನಿ ಪೂಜಾರಿಯವರ ಇಬ್ಬರು ಎಳೆಯ ಮಕ್ಕಳು ಮೃತಪಟ್ಟಿದ್ದು, ಆಶ್ವಿನಿಯವರ ಎರಡೂ ಕಾಲುಗಳನ್ನು ಕತ್ತರಿಸಬೇಕಾದ ಪರಿಸ್ಥಿತಿ ಉಂಟಾಯಿತು. ಅವರ ಅತ್ತೆ ಮೃತಪಟ್ಟಿದ್ದು, ಮಾವ ಗಂಭೀರವಾಗಿ ಗಾಯಗೊಂಡಿದ್ದರು.

ಅರ್ಜಿಯ ಪ್ರಕಾರ, ದುರಂತ ಸಂಭವಿಸಿದ ದಿನವೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮನವಿ ಸಲ್ಲಿಸಿದ್ದರೂ, ಕೊಣಾಜೆ ಪೊಲೀಸ್ ಠಾಣೆಯು UDR (Unnatural Death Report – ಅಸ್ವಾಭಾವಿಕ ಸಾವು ವರದಿ) ದಾಖಲಿಸಿದೆ. ಸಾಮಾನ್ಯವಾಗಿ UDR ಅನ್ನು ಅಸ್ವಾಭಾವಿಕ ಸಾವು, ಆತ್ಮಹತ್ಯೆ, ಅಪಘಾತ ಅಥವಾ ಸಾವಿನ ಕಾರಣ ತಿಳಿಯದ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆಗಾಗಿ ದಾಖಲಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಕರ್ತವ್ಯಲೋಪ ಹಾಗೂ ಸುರಕ್ಷತಾ ನಿಯಮಗಳ ಉಲ್ಲಂಘನೆಯ ಕುರಿತು ನಿರ್ದಿಷ್ಟ ಆರೋಪಗಳಿರುವ ಹಿನ್ನೆಲೆಯಲ್ಲಿ ಸೂಕ್ತ ಅಪರಾಧ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕಿತ್ತು ಎಂಬುದು ಅರ್ಜಿದಾರರ ವಾದವಾಗಿದೆ.

ಅರ್ಜಿಯ ಪ್ರಕಾರ, ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಬಾರಿ ಆಶ್ವಿನಿ ಪೂಜಾರಿ ಅವರು ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ತಮ್ಮ ದೂರಿನ ಪ್ರಗತಿ ಕುರಿತು ವಿಚಾರಿಸಿದ್ದಾರೆ. ಪ್ರತಿ ಬಾರಿ “ತನಿಖೆ ನಡೆಯುತ್ತಿದೆ, ನಿಮಗೆ ನ್ಯಾಯ ದೊರೆಯುತ್ತದೆ” ಎಂಬ ಭರವಸೆಯನ್ನಷ್ಟೇ ನೀಡಲಾಗಿದ್ದು, ಎಫ್‌ಐಆರ್ ದಾಖಲಿಸುವ ಕುರಿತು ಯಾವುದೇ ಅಂತಿಮ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆಶ್ವಿನಿ ಪೂಜಾರಿ ಅವರ ಪರ ವಕೀಲರಾದ ಅಕ್ಷತಾ ಶೆಟ್ಟಿ ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದು, ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (NITK) ಸಲ್ಲಿಸಿರುವ ತಾಂತ್ರಿಕ ವರದಿ ಹಾಗೂ ಅರ್ಜಿಯಲ್ಲಿ ಉಲ್ಲೇಖಿಸಲಾದ ಆರೋಪಗಳ ಬೆಳಕಿನಲ್ಲಿ, ಬಡ ಮತ್ತು ಅಸಹಾಯಕ ಸ್ಥಿತಿಯಲ್ಲಿರುವ ಆಶ್ವಿನಿ ಪೂಜಾರಿ ಅವರಿಗೆ ಕಾನೂನಿನ ಪ್ರಕಾರ ನ್ಯಾಯ ದೊರಕುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಕೊಣಾಜೆ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಅರ್ಜಿದಾರರ ಮನವಿಯಾಗಿದೆ.

ಕರ್ನಾಟಕ ಉಚ್ಚ ನ್ಯಾಯಾಲಯವು ಈಗಾಗಲೇ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ಪ್ರಕರಣದ ಮುಂದಿನ ವಿಚಾರಣೆ 2026ರ ಜುಲೈ 29ರಂದು ನಡೆಯಲಿದೆ. ಈ ಪ್ರಕರಣದ ಮುಂದಿನ ಬೆಳವಣಿಗೆಗಳು ದುರಂತಗಳಲ್ಲಿ ಆಡಳಿತಾತ್ಮಕ ಜವಾಬ್ದಾರಿ, ಪೊಲೀಸ್ ತನಿಖೆಯ ಪಾರದರ್ಶಕತೆ ಹಾಗೂ ಕಾನೂನಿನ ಸಮಾನ ಅನುಷ್ಠಾನದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿವೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮುಲ್ಕಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ದೇವಾಡಿಗ ನೇಮಕ

July 17, 2026

ಅರ್. ಅಶೋಕ್ ಅವರ ಹೇಳಿಕೆ ಯುವ ಸಮುದಾಯಕ್ಕೆ ಮಾಡಿದ ಅಪಮಾನ: ಇಬ್ರಾಹಿಂ ನವಾಜ್ ತೀವ್ರ ಖಂಡನೆ

July 17, 2026

ಬಿಸಿ ರೋಡ್ ಯುವತಿ ಹತ್ಯೆ ಪ್ರಕರಣ: ಆರೋಪಿಯ ಭಾವಚಿತ್ರ ತಿರುಚಿ ಬಜರಂಗದಳದ ವಿರುದ್ಧ ಅಪಪ್ರಚಾರ; ಪ್ರಕರಣ ದಾಖಲು

July 17, 2026

Comments are closed.

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
All News

ಮಂಜನಾಡಿ ದುರಂತ ಪ್ರಕರಣ: ಪೊಲೀಸ್ ಆಯುಕ್ತರು ಹಾಗೂ ಕೊಣಾಜೆ ಠಾಣಾಧಿಕಾರಿಗೆ ಹೈಕೋರ್ಟ್ ನೋಟಿಸ್ ಒಂದು ವರ್ಷ ಕಳೆದರೂ ಎಫ್‌ಐಆರ್‌ಗಾಗಿ ಕಾಯುತ್ತಿರುವ ಆಶ್ವಿನಿ

By UllalaVaniJuly 17, 20260

ಮಂಗಳೂರು: ಮಂಜನಾಡಿ ಗುಡ್ಡ ಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ WP No.11083/2026 (GM–POLICE) ರಿಟ್…

ಮುಲ್ಕಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ದೇವಾಡಿಗ ನೇಮಕ

July 17, 2026

ಅರ್. ಅಶೋಕ್ ಅವರ ಹೇಳಿಕೆ ಯುವ ಸಮುದಾಯಕ್ಕೆ ಮಾಡಿದ ಅಪಮಾನ: ಇಬ್ರಾಹಿಂ ನವಾಜ್ ತೀವ್ರ ಖಂಡನೆ

July 17, 2026

ಬಿಸಿ ರೋಡ್ ಯುವತಿ ಹತ್ಯೆ ಪ್ರಕರಣ: ಆರೋಪಿಯ ಭಾವಚಿತ್ರ ತಿರುಚಿ ಬಜರಂಗದಳದ ವಿರುದ್ಧ ಅಪಪ್ರಚಾರ; ಪ್ರಕರಣ ದಾಖಲು

July 17, 2026
1 2 3 … 2,020 Next
Automatic YouTube Gallery

"ಅಚ್ಯುತ ಅವಾತರಂ" ಸಿನಿಮಾ ಹವಾ..! ಹೇಗಿದೆ ಗೊತ್ತಾ..?|

ಸಿನಿಮಾದ ಒಂದೊಂದು ಪಾತ್ರನೂ ವಿಭಿನ್ನ; ಆಧುನಿಕ ಜಗತ್ತಿನ ಅನಾವರಣ

ಸಿನಿಮಾ ನೋಡಿ ಸಿನಿಪ್ರಿಯರು ಫಿದಾ....

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay ...
connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
"ಅಚ್ಯುತ ಅವಾತರಂ" ಸಿನಿಮಾ ಹವಾ..! ಹೇಗಿದೆ ಗೊತ್ತಾ..?|
Now Playing
"ಅಚ್ಯುತ ಅವಾತರಂ" ಸಿನಿಮಾ ಹವಾ..! ಹೇಗಿದೆ ಗೊತ್ತಾ..?|
ಸಿನಿಮಾದ ಒಂದೊಂದು ಪಾತ್ರನೂ ವಿಭಿನ್ನ; ಆಧುನಿಕ ಜಗತ್ತಿನ ಅನಾವರಣ ಸಿನಿಮಾ ನೋಡಿ ...
ಸಿನಿಮಾದ ಒಂದೊಂದು ಪಾತ್ರನೂ ವಿಭಿನ್ನ; ಆಧುನಿಕ ಜಗತ್ತಿನ ಅನಾವರಣ

ಸಿನಿಮಾ ನೋಡಿ ಸಿನಿಪ್ರಿಯರು ಫಿದಾ....

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay ...
connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಆರೋಪಿ ಚೇತನ್‌ ಫೋಟೋ ಎಡಿಟ್‌ ಮಾಡಿ ಸಂಘಟನೆ ಹೆಸರು ಕೆಡಿಸುವಂತಹ ಕೃ#ತ್ಯ ನಡೆಯುತ್ತಿದೆ;   ಶರಣ್‌ ಪಂಪ್‌ವೆಲ್‌ ಆಕ್ರೋಶ
Now Playing
ಆರೋಪಿ ಚೇತನ್‌ ಫೋಟೋ ಎಡಿಟ್‌ ಮಾಡಿ ಸಂಘಟನೆ ಹೆಸರು ಕೆಡಿಸುವಂತಹ ಕೃ#ತ್ಯ ನಡೆಯುತ್ತಿದೆ; ಶರಣ್‌ ಪಂಪ್‌ವೆಲ್‌ ಆಕ್ರೋಶ
ಆರ್‌ಎಸ್‌ಎಸ್‌, ಭಜರಂಗದಳ ಎಂದು ಹೇಳುವ ಗೃಹಸಚಿವರು ಯಾಕೆ ಈ ಘಟನೆ ಬಗ್ಗೆ ...
ಆರ್‌ಎಸ್‌ಎಸ್‌, ಭಜರಂಗದಳ ಎಂದು ಹೇಳುವ ಗೃಹಸಚಿವರು ಯಾಕೆ ಈ ಘಟನೆ ಬಗ್ಗೆ ಮಾತಾಡುವುದಿಲ್ಲ: ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ

ಆಕ್ರೋಶ ವ್ಯಕ್ತಪಡಿಸಿದ ವಿಶ್ವಹಿಂದೂಪರಿಷತ್‌ ಪ್ರಾಂತ್ಯ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌

📍 Ullal | Dakshina Kannada | Coastal ...
Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version