Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
BANTWALA

ಒಮಾನ್ ಕರಾವಳಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ; ಬಂಟ್ವಾಳದ ಯುವಕ ಪ್ರಾಣಾಪಾಯದಿಂದ ಪಾರು

UllalaVaniBy UllalaVaniJuly 15, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಬಂಟ್ವಾಳ, ಜು. 15 : ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಒಮಾನ್ ಕರಾವಳಿಯ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಜುಲೈ ೧೨ರ ಮಧ್ಯರಾತ್ರಿ ಕ್ಷಿಪಣಿ ದಾಳಿ ನಡೆದಿತತು. ಹಡಗಿನಿಂದ ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ಭಾರತೀಯ ಸಿಬ್ಬಂದಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ರಚನ್ ಆರ್.ಕೆ.(25) ಕೂಡ ಒಬ್ಬರಾಗಿದ್ದಾರೆ.

ಪ್ರಸ್ತುತ ರಚನ್ ಅವರು ಒಮಾನ್‌ನಲ್ಲಿ ತಮ್ಮ ಶಿಪ್ಪಿಂಗ್ ಕಂಪನಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸುರಕ್ಷಿತರಾಗಿದ್ದು, ತಾವು ದುಬೈಗೆ ತೆರಳುತ್ತಿರುವುದಾಗಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ರೋಹಿತಾಕ್ಷ ಬಾಣಬೆಟ್ಟು ಅವರ ಮೂವರು ಮಕ್ಕಳಲ್ಲಿ ಕಿರಿಯವರಾದ ರಚನ್, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮುಂಬೈನಲ್ಲಿ ಮೆರೈನ್ ಕೋರ್ಸ್ ಮಾಡಿ ಹಡಗು ಸೇವೆಗೆ ಸೇರಿದ್ದರು.ಘಟನೆಯ ಕುರಿತು ತಂದೆಯೊಂದಿಗೆ ಮಾತನಾಡಿದ ರಚನ್, ಹಡಗಿನ ಮೇಲೆ ದಾಳಿ ಸಂಭವಿಸುವ ಸಾಧ್ಯತೆ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಆದರೂ ಹಡಗು ಒಮಾನ್ ಕರಾವಳಿಯುದ್ದಕ್ಕೂ ತನ್ನ ಸಂಚಾರ ಮುಂದುವರಿಸಿತ್ತು. ಭಾನುವಾರ ಮುಂಜಾನೆ ಸುಮಾರು 2.05 ಗಂಟೆಗೆ ಕ್ಷಿಪಣಿಯೊಂದು ಹಡಗಿಗೆ ಅಪ್ಪಳಿಸಿದೆ ಎಂದು ತಿಳಿಸಿದ್ದಾರೆ.ದಾಳಿಯ ಪರಿಣಾಮ ಎಂಜಿನ್ ಕೊಠಡಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ನಿದ್ರೆಯಲ್ಲಿದ್ದ ಸಿಬ್ಬಂದಿ ಎಚ್ಚೆತ್ತು ತಕ್ಷಣವೇ ಜೀವ ರಕ್ಷಕ ದೋಣಿಗಳ ಮೂಲಕ ಸಮುದ್ರಕ್ಕೆ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಈ ಗೊಂದಲದ ವೇಳೆ ಪುಣೆ ಮೂಲದ ಓರ್ವ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಒಮಾನ್ ನೌಕಾಪಡೆ ಸ್ಥಳಕ್ಕೆ ಧಾವಿಸಿ ಸಿಲುಕಿದ್ದ ಸಿಬ್ಬಂದಿಯನ್ನು ರಕ್ಷಿಸಿ ಅಗತ್ಯ ನೆರವು ನೀಡಿದೆ.ಮಾಧ್ಯಮಗಳೊಂದಿಗೆ ಮಾತನಾಡಿದ ರಚನ್ ಅವರ ತಂದೆ ರೋಹಿತಾಕ್ಷ ಬಾಣಬೆಟ್ಟು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯಿಂದ ಕುಟುಂಬ ತೀವ್ರ ಆತಂಕಕ್ಕೊಳಗಾಗಿತ್ತು. ನಮ್ಮ ಮಗ ಕೆಲಸ ಮಾಡುತ್ತಿದ್ದ ಹಡಗಿನ ಮೇಲೆ ದಾಳಿ ನಡೆದಿರುವ ಸುದ್ದಿ ತಿಳಿದಾಗ ಕುಟುಂಬದವರು ಭಯಭೀತರಾಗಿದ್ದೆವು. ಬಳಿಕ ರಚನ್ ಕರೆ ಮಾಡಿ ತಾನು ಸುರಕ್ಷಿತವಾಗಿರುವುದಾಗಿ ತಿಳಿಸಿದ ನಂತರವೇ ನೆಮ್ಮದಿಯಾಯಿತು. ಆದರೆ ನಾಪತ್ತೆಯಾಗಿರುವ ಸಿಬ್ಬಂದಿಯ ಬಗ್ಗೆ ತುಂಬಾ ದುಃಖವಾಗಿದೆ. ನನ್ನ ಮಗ ಸೇರಿದಂತೆ ಹತ್ತು ಭಾರತೀಯ ಸಿಬ್ಬಂದಿಯನ್ನು ರಕ್ಷಿಸಿದ ಒಮಾನ್ ನೌಕಾಪಡೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲರೂ ಶೀಘ್ರದಲ್ಲೇ ಸುರಕ್ಷಿತವಾಗಿ ಭಾರತಕ್ಕೆ ಮರಳಲಿ ಎಂದು ಪ್ರಾರ್ಥಿಸುತ್ತೇವೆ” ಎಂದು ಹೇಳಿದರು.ರಚನ್ ಅವರ ಸಂಬಂಧಿ ಉದಯ್ ಮಾತನಾಡಿ, ಮಧ್ಯಪ್ರಾಚ್ಯದಲ್ಲಿನ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯಿಂದಾಗಿ ಹಡಗಿನ ಸಿಬ್ಬಂದಿ ಸದಾ ಆತಂಕದ ವಾತಾವರಣದಲ್ಲೇ ಕೆಲಸ ಮಾಡುತ್ತಿದ್ದರು ಎಂದು ರಚನ್ ಆಗಾಗ ಹೇಳುತ್ತಿದ್ದರು. ಅವರು ಸುರಕ್ಷಿತರಾಗಿರುವುದು ಸಮಾಧಾನ ತಂದಿದ್ದು, ಶೀಘ್ರದಲ್ಲೇ ಭಾರತಕ್ಕೆ ಮರಳಲಿ ಎಂದು ಆಶಿಸಿದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕಾಸರಗೋಡು : 300 ಮೀಟರ್ ದೂರ ಉರುಳಿದ ಇನ್ನೋವಾ – ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತದ ದೃಶ್ಯ

July 15, 2026

ಬೆಳ್ಮ ಅಣ್ಣಿಬೆಟ್ಟುವಿನಲ್ಲಿ 6ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

July 15, 2026

ಮಂಗಳೂರು : ಜೈಲಿಗೆ ಡ್ರಗ್ಸ್‌, ಮೊಬೈಲ್‌ ಎಸೆತಕ್ಕೆ ಬ್ರೇಕ್ – ಆವರಣ ಗೋಡೆಗೆ 12 ಅಡಿ ಎತ್ತರದ ತಂತಿ ಬೇಲಿ ಅಳವಡಿಕೆ

July 15, 2026

Comments are closed.

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
All News

ಮಹಿಳೆಗೆ ಕಿರುಕುಳ- ಜೀವ ಬೆದರಿಕೆ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು

By UllalaVaniJuly 15, 20260

ಮಂಗಳೂರು: ಮಂಗಳೂರು ನಗರದ ಕೈಕಂಬ ಬಳಿ ವಾಸವಾಗಿರುವ ಮಹಿಳೆಯೊಬ್ಬರಿಗೆ ಕೌಟುಂಬಿಕ ವಿಷಯಗಳನ್ನು ದುರುಪಯೋಗಪಡಿಸಿಕೊಂಡು ನಿರಂತರವಾಗಿ ಫೋನ್ ಮೂಲಕ ಕಿರುಕುಳ ನೀಡಿ,…

ಕಾಸರಗೋಡು : 300 ಮೀಟರ್ ದೂರ ಉರುಳಿದ ಇನ್ನೋವಾ – ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತದ ದೃಶ್ಯ

July 15, 2026

ಒಮಾನ್ ಕರಾವಳಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ; ಬಂಟ್ವಾಳದ ಯುವಕ ಪ್ರಾಣಾಪಾಯದಿಂದ ಪಾರು

July 15, 2026

ಬೆಳ್ಮ ಅಣ್ಣಿಬೆಟ್ಟುವಿನಲ್ಲಿ 6ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

July 15, 2026
1 2 3 … 2,017 Next
Automatic YouTube Gallery

ಸೈಬರ್ ಕ್ರೈಮ್ ಥ್ರಿಲ್ಲರ್ 'ಅಚ್ಯುತ ಅವತಾರಂ'ಗೆ ಕೌಂಟ್‌ಡೌನ್ ಆರಂಭ..!

ಡಿಜಿಟಲ್ ಜಗತ್ತು-ದೈವಿಕ ಶಕ್ತಿಯ ರೋಚಕ ಸಂಗಮ 'ಅಚ್ಯುತ ಅವತಾರಂ'; ಜುಲೈ 17ರಿಂದ ಚಿತ್ರಮಂದಿರಗಳಲ್ಲಿ!

ಬಹುಭಾಷೆಗಳಲ್ಲಿ ಬರುತ್ತಿದೆ 'ಅಚ್ಯುತ ಅವತಾರಂ'

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಸೈಬರ್ ಕ್ರೈಮ್ ಥ್ರಿಲ್ಲರ್ 'ಅಚ್ಯುತ ಅವತಾರಂ'ಗೆ ಕೌಂಟ್‌ಡೌನ್ ಆರಂಭ..!
Now Playing
ಸೈಬರ್ ಕ್ರೈಮ್ ಥ್ರಿಲ್ಲರ್ 'ಅಚ್ಯುತ ಅವತಾರಂ'ಗೆ ಕೌಂಟ್‌ಡೌನ್ ಆರಂಭ..!
ಡಿಜಿಟಲ್ ಜಗತ್ತು-ದೈವಿಕ ಶಕ್ತಿಯ ರೋಚಕ ಸಂಗಮ 'ಅಚ್ಯುತ ಅವತಾರಂ'; ಜುಲೈ 17ರಿಂದ ...
ಡಿಜಿಟಲ್ ಜಗತ್ತು-ದೈವಿಕ ಶಕ್ತಿಯ ರೋಚಕ ಸಂಗಮ 'ಅಚ್ಯುತ ಅವತಾರಂ'; ಜುಲೈ 17ರಿಂದ ಚಿತ್ರಮಂದಿರಗಳಲ್ಲಿ!

ಬಹುಭಾಷೆಗಳಲ್ಲಿ ಬರುತ್ತಿದೆ 'ಅಚ್ಯುತ ಅವತಾರಂ'

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
| Ullalavani| ಸೈಬರ್ ಕ್ರೈಮ್ ಥ್ರಿಲ್ಲರ್ 'ಅಚ್ಯುತ ಅವತಾರಂ'; ಜುಲೈ 17ರಿಂದ ಚಿತ್ರಮಂದಿರಗಳಲ್ಲಿ!
Now Playing
| Ullalavani| ಸೈಬರ್ ಕ್ರೈಮ್ ಥ್ರಿಲ್ಲರ್ 'ಅಚ್ಯುತ ಅವತಾರಂ'; ಜುಲೈ 17ರಿಂದ ಚಿತ್ರಮಂದಿರಗಳಲ್ಲಿ!
ಹೊಸ ಅನುಭವಕ್ಕೆ ಸಜ್ಜಾಗಿ... 'ಅಚ್ಯುತ ಅವತಾರಂ'!; ಸಾಂಪ್ರದಾಯಿಕ ಗ್ರಾಮ... ಆಧುನಿಕ ...
ಹೊಸ ಅನುಭವಕ್ಕೆ ಸಜ್ಜಾಗಿ... 'ಅಚ್ಯುತ ಅವತಾರಂ'!; ಸಾಂಪ್ರದಾಯಿಕ ಗ್ರಾಮ... ಆಧುನಿಕ ಸೈಬರ್ ಕ್ರೈಮ್!

ಈ ವಾರದ ಬಹುನಿರೀಕ್ಷಿತ ಸಿನಿಮಾ – 'ಅಚ್ಯುತ ಅವತಾರಂ'

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version