

ಉಳ್ಳಾಲ: ಕಲ್ಲಾಪು ಬುರ್ದುಗೋಳಿಯ ಶ್ರೀ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಮಾಜಿ ಸಚಿವ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಕುಟುಂಬ ಸಮೇತರಾಗಿ ಸೋಮವಾರ ಭೇಟಿ ನೀಡಿ ತಮ್ಮ ಹರಕೆಯ ಕೋಲದಲ್ಲಿ ಭಾಗವಹಿಸಿದರು.
ಈ ಸಂದರ್ಭ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಕೊಲ್ಯ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಚಂದ್ರಹಾಸ್ ಪಂಡಿತ್‌ಹೌಸ್, ಬಿಲ್ಲವ ಬ್ರಿಗೇಡ್ ಸಂಚಾಲಕ ಸದಾನಂದ ಪೂಜಾರಿ, ಬಿಜೆಪಿ ಕ್ಷೇತ್ರ ಅಧ್ಯಕ್ಷ ಜಗದೀಶ್ ಕುವೆತ್ತಬೈಲ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೇಶಕ ಕೆ.ಟಿ.ಸುವರ್ಣ, ಮುಖಂಡರುಗಳಾದ ಚಂದ್ರಹಾಸ್ ಉಳ್ಳಾಲ್, ಚಂದ್ರಹಾಸ್ ಅಡ್ಯಂತಾಯ, ಚಂದ್ರಶೇಖರ್ ಉಚ್ಚಿಲ್, ಶ್ರೀ ಬುರ್ದುಗೋಳಿ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ನಾಯಕ್, ಕ್ಷೇತ್ರದ ಮಧ್ಯಸ್ಥರಾದ ದೇವದಾಸ್ ಕಾಯಂಗಳ, ವಿ.ಹಿಂ.ಪ ಮುಖಂಡ ಶರಣ್ ಪಂಪ್ವೆಲ್, ಬಜರಂಗದಳದ ಪುನೀತ್ ಅತ್ತಾವರ್, ಬಿಜೆಪಿ ಕ್ಷೇತ್ರ ಪ್ರ.ಕಾ. ದಯಾನಂದ ತೊಕ್ಕೊಟ್ಟು, ಕಾರ್ಕಳದ ಮುಖಂಡರುಗಳಾದ ಉದಯ ಪೂಜಾರಿ ನಗ್ರಿಕಾಂಜಿಲ, ಸಂದೀಪ್ ಪೂಜಾರಿ, ಸೂರಜ್ ಕುಮಾರ್ ಕಲ್ಯ, ಯಶವಂತ್ ಕಡೇಶ್ವಾಲ್ಯ, ನಿಶಾಂತ್ ಪೂಜಾರಿ ಉಳ್ಳಾಲ, ಯಶವಂತ್ ದೇರಾಜೆ, ವಿವೇಕ್ ಎಲಿಗ್ಯಾಂಟ್, ರಕ್ಷಿತ್ ಕೆ.ಪೂಜಾರಿ, ಸೂರಜ್ ಕಲ್ಯ ಉಪಸ್ಥಿತರಿದ್ದರು.

