ಮೆರ್ಸಿನ್ ಮಾತೆಯ ಇಗರ್ಜಿ, ಪಾನೀರು ಇದರ ಮುಂದಾಳತ್ವದಲ್ಲಿ, ಭಾರತೀಯ ಅಂಚೆ ಇಲಾಖೆ, ಮಂಗಳೂರು ಇವರ ಸಹಯೋಗದಲ್ಲಿ ಹಾಗೂ ಕಥೊಲಿಕ್ ಸಭಾ ಪಾನೀರು ಘಟಕ, ಆರೋಗ್ಯ ಆಯೋಗ, ಕುಟುಂಬ ಆಯೋಗ, ಕಾರ್ಮಿಕ ಆಯೋಗ, ಸಾಮಾಜಿಕ ಅಭಿವೃದ್ಧಿ ಆಯೋಗ, ಐ.ಸಿ.ವೈ.ಎಂ. ಪಾನೀರು ಘಟಕ, ಎಸ್.ವಿ.ಪಿ. ಹಾಗೂ ಸ್ತ್ರೀ ಸಂಘಟನೆ ಇವರ ಸಹಕಾರದೊಂದಿಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿ, ಆರೋಗ್ಯ ವಿಮೆ ಹಾಗೂ ಅಪಘಾತ ವಿಮೆ ಜನಜಾಗೃತಿ ಅಭಿಯಾನವು ಪಾನೀರು ಚರ್ಚ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮವನ್ನು ಮೆರ್ಸಿನ್ ಮಾತೆಯ ಇಗರ್ಜಿಯ ಧರ್ಮಗುರು ವಂದನೀಯ ಫಾ. ವಿಕ್ಟರ್ ಡಿಮೆಲ್ಲೋ ಅವರು ಉಪಾಧ್ಯಕ್ಷ ಶ್ರೀ ಉರ್ಬನ್ ಫೆರಾಂವೋ ಅವರಿಗೆ ಆಧಾರ್ ಕಾರ್ಡ್ ಹಾಗೂ ಕಾರ್ಯದರ್ಶಿ ವಿನ್ನಿ ಕುಟಿನ್ಹಾ ಅವರಿಗೆ ಆರೋಗ್ಯ ವಿಮೆ ಪಾಲಿಸಿಯನ್ನು ವಿತರಿಸುವ ಮೂಲಕ ಉದ್ಘಾಟಿಸಿದರು.


ಚರ್ಚಿನ ವಿವಿಧ ಆಯೋಗಗಳ ಸಂಯೋಜಕರಾದ ಆಲ್ವಿನ್ ಡಿಸೋಜಾ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಚರ್ಚ್ ಪಾಲನಾ ಪರಿಷತ್ ಸದಸ್ಯರಾದ ರೊನಾಲ್ಡ್ ಡಿಸೋಜಾ ಅವರು ನಿರೂಪಿಸಿದರು.

ಭಾರತೀಯ ಅಂಚೆ ಇಲಾಖೆಯ ಮಾರುಕಟ್ಟೆ ಕಾರ್ಯನಿರ್ವಾಹಕ ಶ್ರೀ ಸುಭಾಷ್.ಪಿ. ಸಾಲ್ಯಾನ್ ಅವರು ಆರೋಗ್ಯ ವಿಮೆ ಹಾಗೂ ಅಪಘಾತ ವಿಮೆಯ ಕುರಿತು ಸಮಗ್ರ ಮಾಹಿತಿ ನೀಡಿ, ಅವುಗಳ ಉಪಯೋಗ ಮತ್ತು ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಫಾ. ವಿಕ್ಟರ್ ಡಿಮೆಲ್ಲೋ ಅವರು, “ರೋಗ ಬಂದ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದಕ್ಕಿಂತ ಮುಂಚಿತವಾಗಿಯೇ ಆರೋಗ್ಯ ಹಾಗೂ ಅಪಘಾತ ವಿಮೆ ಮಾಡಿಸಿಕೊಳ್ಳುವುದು ಪ್ರತಿಯೊಂದು ಕುಟುಂಬಕ್ಕೂ ಅತ್ಯಗತ್ಯ. ಇದು ಕುಟುಂಬದ ಆರ್ಥಿಕ ಭದ್ರತೆಗೆ ಮಹತ್ವದ ರಕ್ಷಾಕವಚವಾಗಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಫಾ. ವಿಕ್ಟರ್ ಡಿಮೆಲ್ಲೋ, ಉಪಾಧ್ಯಕ್ಷ ಉರ್ಬನ್ ಫೆರಾವೊ, ಕಾರ್ಯದರ್ಶಿ ವಿನ್ನಿ ಕುಟಿನ್ಹಾ, ವಿವಿಧ ಆಯೋಗಗಳ ಸಂಯೋಜಕರಾದ ಆಲ್ವಿನ್ ಡಿಸೋಜಾ, ಭಾರತೀಯ ಅಂಚೆ ಇಲಾಖೆಯ ಮಾರ್ಕೆಟಿಂಗ್ ಡೆವಲಪ್‌ಮೆಂಟ್ ಅಧಿಕಾರಿ ಸುಭಾಷ್. ಪಿ. ಸಾಲಿಯಾನ್ (ಪಾಂಡೇಶ್ವರ ), ಪೋಸ್ಟ್‌ಮಾಸ್ಟರ್ ಮಹೇಶ್ ಕುಮಾರ್ (ದೇರಳಕಟ್ಟೆ), ಆರೋಗ್ಯ ಆಯೋಗದ ಸಂಚಾಲಕಿ ಪ್ರಸಿಲ್ಲಾ ಮೊಂತೆರೋ, ಕಾರ್ಮಿಕ ಆಯೋಗದ ಸಂಚಾಲಕ ಗಿಲ್ಬರ್ಟ್ ಡಿ’ಸೋಜಾ, ಕುಟುಂಬ ಆಯೋಗದ ಸಂಚಾಲಕ ಸ್ಟೇನಿ ರೊಡ್ರಿಗಸ್, ಸಾಮಾಜಿಕ ಅಭಿವೃದ್ಧಿ ಆಯೋಗದ ಸಂಚಾಲಕ ಹಾಗೂ ಎಸ್.ವಿ.ಪಿ. ಅಧ್ಯಕ್ಷ ಪ್ರಾಂಕಿ ಕುಟಿನ್ಹಾ, ಕಥೊಲಿಕ್ ಸಭಾ ಪಾನೀರು ಘಟಕದ ಅಧ್ಯಕ್ಷ ಐವನ್ ಮೊಂತೆರೋ, ಐ.ಸಿ.ವೈ.ಎಂ. ಅಧ್ಯಕ್ಷ ಪ್ರೀತಮ್ ಡಿ’ಸೋಜಾ ಹಾಗೂ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಲೆತೀಷ್ಯ ರೊಡ್ರಿಗಸ್ ಉಪಸ್ಥಿತರಿದ್ದರು.
ಈ ಅಭಿಯಾನವು ಬೆಳಿಗ್ಗೆ 8.30 ಗಂಟೆಯಿಂದ ಸಂಜೆ 3.30 ಗಂಟೆಯವರೆಗೆ ನಿರಂತರವಾಗಿ ನಡೆಯಿತು. ಈ ಅವಧಿಯಲ್ಲಿ 200ಕ್ಕೂ ಹೆಚ್ಚು ಫಲಾನುಭವಿಗಳು ಆಧಾರ್ ನೋಂದಣಿ ಮತ್ತು ತಿದ್ದುಪಡಿ, ಆರೋಗ್ಯ ವಿಮೆ ಹಾಗೂ ಅಪಘಾತ ವಿಮೆ ಸೇವೆಗಳ ಪ್ರಯೋಜನ ಪಡೆದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಭಾರತೀಯ ಅಂಚೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ, ವಿವಿಧ ಆಯೋಗಗಳ ಸಂಚಾಲಕರು, ಸಂಘಟನೆಗಳ ಅಧ್ಯಕ್ಷರು, ಸ್ವಯಂಸೇವಕರು ಮತ್ತು ಸಹಕರಿಸಿದ ಎಲ್ಲರಿಗೂ ವಿವಿಧ ಆಯೋಗಗಳ ಸಂಯೋಜಕರಾದ ಆಲ್ವಿನ್ ಡಿಸೋಜಾ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

