ಉಳ್ಳಾಲ: ಕರೆಬೈಲ್ ಗುಡ್ಡದಲ್ಲಿ ಬುಧವಾರ ಬೆಳಗ್ಗೆ, ಕಂಪೌÀಡ್ ಗೋಡೆ ಕುಸಿತದಿಂದ ಮನೆಯೊಂದು ಸಂಪೂರ್ಣ ಧರಾಶಾಹಿಯಾಗಿದ್ದು ಅದೃಷ್ಟವಶಾತ್ ಮನಮಂದಿ ಬೇರೆ ಕಡೆಗೆ ಸ್ಥಳಾಂತರಗೊÂಡಿದ್ದರಿÀದ ಪ್ರಾಣಾಪಯದಿಂದ ಪಾರಾಗಿದ್ದು ಸಂತ್ರಸ್ತ ಕುಟುಂಬಕ್ಕ ಸೂಕ್ತ ಪರಿಹಾರ ಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಜೊತೆಗೆ ಚರ್ಚಿಸುತ್ತೇನೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.

ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳಗೆ ತೊಕ್ಕೊಟ್ಟು ಕರೆಬೈಲ್ ಗುಡ್ಡದಲ್ಲಿ ಕಂಪೌÀಡ್ ಕುಸಿದು ಮನ ಧರಾಶಾಹಿಯಾದ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಬುಧವಾರ ಸಂಜೆ ಭೇಟಿ ನೀಡಿದ ಅವರು ಸಂತ್ರಸ್ತ ಕುಟುಂಬಸ್ಥರು ಹಾಗೂ ಇನ್ನು ಅಪಾಯಕಾರಿಯಾಗಿ ಇರುವ ಮನೆ ಮಂದಿಯ ಜೊತೆಗೆ ಮಾತನಾಡಿ ಧರಾಶಾಹಿಯಾದ ಮನೆಯ ಕುಟುಂಬಸ್ಥರು ಕಳೆದ ವರ್ಷದಿಂದ ತಡೆಗೋಡೆ ವಾಲಿರುವ ಬಗ್ಗೆ ಮನೆ ಮಾಲೀಕರಿಗೆ ಎಚ್ಚರಿಸುತ್ತಾ ಬಂದಿದ್ದು ಈ ಬಾರಿ ಅಪಾಯದ ಮುನ್ಸೂಚನೆ ಅರಿತು ಬೇರೆ ಕಡೆಗೆ ಸ್ಥಳಾಂತರಗೊಡಿದ್ದರಿ೦ದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭಾಗದಲ್ಲಿ ಸಾಮನ್ಯ ಜನರು ಬದುಕುತ್ತಿದ್ದು ಜೀವನವನ್ನು ಬಹಳ ಕಷ್ಟಪಟ್ಟು ಸಾಗಿಸುವರು. ಇಂದು ನಡೆದ ಘಟನೆ ಮತ್ತೆ ಮರುಕಳಿಸದಂತೆ ಶಾಶ್ವತವಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಪಾಯದ ಹಂತದಲ್ಲಿರುವ ಹದಿನಾಲ್ಕು ಮನೆಗಳಿಗೆ ಒಂದು ತಿಂಗಳ ಬಾಡಿಗೆ ತಲಾ ಹತ್ತು ಸಾವಿರ ರೂ. ವ್ಯಯಕ್ತಿಕವಾಗಿ ಭರಿಸುವುದಾಗಿ ತಿಳಿಸಿದರು. ಹಾಗೆಯೇ ಒಂದು ತಿಂಗಳು ಕಳೆದ ಬಳಿಕ ಬೇಕಾದ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸುತ್ತೇನೆ ಎಂದು ಹೇಳಿದರು. ಪ್ರತಿವರ್ಷ ಇಂತಹ ಸಮಸ್ಯೆ ಬಾರದ ಹಾಗೆ ನೋಡಿಕೊಳ್ಳುವ ಜವಬ್ದಾರಿ ಜಿಲ್ಲಾಡಳಿತದ್ದು ಆ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದೇನೆ, ಕಾನೂನಿನ ಮುಂದ ಎಲ್ಲರೂ ಸಮಾನರು ಬಡವರಿಗೆ ತೊಂದರೆ ಆದರೆ ನಾನು ಖಂಡಿತಾ ಬಿಡುವುದಿಲ್ಲ. ನ್ಯಾಯಯುತ ಹೋರಾಟದಲ್ಲಿ ತಾರತಮ್ಮ, ಇಲ್ಲ. ಹಾನಿಗೀಡಾದ ಮನೆಗೆ ದುರಸ್ತಿಗೆ ಕಂಪೌಸಿಡ್ ಗೋಡೆ ಬಿದ್ದ. ಕಾರಣದಿಂದ ಆ ಮನೆ ಮಾಲೀಕರು ಮಾನವೀಯತೆ ತೋರಿಸಬೇಕು. ನ್ಯಾಯದ ಮುಂದೆ ಎಷ್ಟು ದೊಡ್ಡ ವ್ಯಕ್ತಿಯಾದರೂ ಬಿಡುವ ಪ್ರಶ್ನೆ ಇಲ್ಲ ಎಂದರು. ಬಾಡಿಗೆ ಮನೆಗಳನ್ನು ನೀಡುವ ಮಾಲೀಕರು ತಮ್ಮ ಮನೆ ಗಟ್ಟಿ ಇದೆಯಾ ಎಂಬುದು ತಿಳಿದಿರುತ್ತದೆ. ಮನೆ ಮಾಲೀಖರು ಮಾನವೀಯ ದೃಷ್ಟಿಯಿಂದ ಬಾಡಿಗೆದಾರರ ಯೋಗಕ್ಷೇಮ ವಿಚಾರಿಸಬೇಕು. ಬಡತನವಿದ್ದರೂ ಬಾಡಿಗೆದಾರರೂ ಕೂಡಾ ತಮ್ಮ ಜೀವ ಅಮೂಲ ಎಂಬುದನ್ನು ಗಮನದಲ್ಲಿರಸಬೇಕು. ಮನೆ ಮಾಲೀಕರಿಗೆ ಹೇಳಿ ಬಾಡಿಗೆ ಮನೆ ದುರಸ್ತಿ ಪಡಿಸಬೇಕು. ಮಾಲೀಖರು ಒಪ್ಪದಿದ್ದರೆ ಸಂಬÀಧಪಟ್ಟ ಅಧಿಕಾರಿಗಳಿಗೆ ಹೇಳಿ ಮನೆ ದುರಸ್ಥಿಪಡಿಸಬೇಕು. ಶಿಥಿಲಗೊಂಡ ಬಾಡಿಗೆ ಮನೆಗಳು ಕುಸಿದುಬಿದ್ದರೆ ಮನೆ ಮಾಲೀಕರು ಜವಬ್ದಾರರು. ಜನರು ಕೂಡಾ ತಮ್ಮ ಜವಬ್ದಾರಿ ಅರಿತು ನಡೆದರೆ ಸಮಸ್ಯೆ ಪರಿಸಹರಿಸಲು ಸಾಧ್ಯ. ಕರೆಬೈಲ್ ಜನರ ಸಮಸ್ಯೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸಲಾಗುವುದು ಎಂದರು.

ಸಚಿವರ ಜೊತೆಯಲ್ಲಿ ಪದ್ಮರಾಜ್ ಆರ್. ಪೂಜಾರಿ, ಜಿಲ್ಲಾಧಿಕಾರಿ ದರ್ಶನ್ ಕೆ.ವಿ., ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ದಕ್ಷಿಣ ಉಪವಿಭಾಗ ಎಸಿಪಿ ವಿಜಯಕ್ರಾಂತಿ, ಉಳ್ಳಾಲ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಗುರುದತ್ ನಗರ ಸಭೆಯ ಕಮೀಷನರ್ ಸಂತೋಷ್ ಕುಮಾರ್, ಉಳ್ಳಾಲ ಎಸ್‌ಐ ವಿನಾಯಕ್, ಕಂದಾಯ ಅಧಿಕಾರಿ ಅಮ್ಮದ್ ಖಾನ್, ಯು.ಟಿ. ಖಾದರ್ ಆಪ್ತ ಸಹಾಯಕ ಪ್ರಕಾಶ್ ಪಿಂಟೊ, ಸುಧೀರ್ ಶೆಟ್ಟಿ ಮೆಸ್ಕಾಂ ಇಂಜಿನಿಯರ್ ನಿತೇಶ್ ಹೊಸಗದ್ದೆ, ಸ್ಥಳೀಯ ಮುಖಂಡರಾದ ರಾಜೇಶ್ ಕರೆಬೈಲ್, ಜೀವನ್ ಕುಮಾರ್ ತೊಕ್ಕೊಟ್ಟು ರಾಕೇಶ್ ಪೂಜಾರಿ ಹಾಗೂ ಹರೀಶ್ ಕುಂದರ್ ಉಪಸ್ಥಿತರಿದ್ದರು.

