ಉಳ್ಳಾಲ: ಬಿಜೆಪಿ ಉಳ್ಳಾಲ 4ನೇ ಬೂತ್ ಅಧ್ಯಕ್ಷರಾದ ಗುಣವತಿ ರೋಹಿದಾಸ್ ಬಂಗೇರ ಅವರ ಮನೆಗೆ ಪಕ್ಷದ ಮುಖಂಡರು ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು , ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಾಲ , ಮಂಡಲ ಅಧ್ಯಕ್ಷ ಜಗದೀಶ್ ಕುವತ್ತಬೈಲ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ ತೊಕ್ಕೊಟ್ಟು ಹಾಗೂ ಮೋಹನ್ ರಾಜ್ ಕೆ.ಆರ್., ಯುವ ಮೋರ್ಚಾ ಅಧ್ಯಕ್ಷ ಮುರಳಿ ಕೊಣಾಜೆ ಮತ್ತು ರೈತ ಮೋರ್ಚಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ಉಪಸ್ಥಿತರಿದ್ದರು.

