ದೈಗೋಳಿ: ಕುಳೂರು ಕನ್ಯಾನದ ಸಮಾಜಸೇವಕ ಡಾ. ಸದಾಶಿವ ಶೆಟ್ಟಿಯವರ ಜನ್ಮದಿನದ ಅಂಗವಾಗಿ ಶ್ರೀ ಸಾಯಿನಿಕೇತನ ಸೇವಾಶ್ರಮದಲ್ಲಿ ವಿಶೇಷ ಅನ್ನದಾನ ಸೇವೆಯನ್ನು ಆಯೋಜಿಸಲಾಯಿತು.


ಡಾ. ಸದಾಶಿವ ಶೆಟ್ಟಿ ಸೇವಾ ಬಳಗದ ಕೇಂದ್ರೀಯ ಸಮಿತಿಯ ವತಿಯಿಂದ ಆಶ್ರಮದ ನಿವಾಸಿಗಳಿಗೆ ಅನ್ನದಾನ ಸೇವೆ ನೀಡಲಾಯಿತು. ಈ ಸಂದರ್ಭದಲ್ಲಿ ಆಶ್ರಮವಾಸಿಗಳು ಹಾಗೂ ಸೇವಾ ಬಳಗದ ಸದಸ್ಯರು ಡಾ. ಸದಾಶಿವ ಶೆಟ್ಟಿಯವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.
ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಡಾ. ಸದಾಶಿವ ಶೆಟ್ಟಿಯವರ ಸೇವಾ ಮನೋಭಾವ ಇನ್ನಷ್ಟು ವಿಸ್ತರಿಸಲಿ ಹಾಗೂ ಜನಸೇವೆಯಲ್ಲಿ ತೊಡಗಿರುವ ಸೇವಾ ಬಳಗದ ಎಲ್ಲಾ ಸದಸ್ಯರಿಗೆ ಭಗವಂತ ಹೆಚ್ಚಿನ ಶಕ್ತಿ ಮತ್ತು ಆಯುಷ್ಯವನ್ನು ಕರುಣಿಸಲಿ ಎಂದು ಆಶ್ರಮದ ಪರವಾಗಿ ಪ್ರಾರ್ಥಿಸಲಾಯಿತು.
ಕಾರ್ಯಕ್ರಮದಲ್ಲಿ ಸೇವಾ ಬಳಗದ ಪದಾಧಿಕಾರಿಗಳು, ಸದಸ್ಯರು ಹಾಗೂ ಆಶ್ರಮದ ಸಿಬ್ಬಂದಿ ಉಪಸ್ಥಿತರಿದ್ದರು.

