ಕೊಣಾಜೆ, ಜೂ.12: ಗುಣಮಟ್ಟದ ಹಾಗೂ ಆಧುನಿಕ ವಿನ್ಯಾಸದ ಪೀಠೋಪಕರಣಗಳ ಕೇಂದ್ರವಾಗಿರುವ ಸುಹಾ ಫರ್ನಿಚರ್ಸ್ನ ನೂತನ ಶೋರೂಮ್ ಉದ್ಘಾಟನಾ ಸಮಾರಂಭವು ಜೂನ್ 14ರಂದು ಬೆಳಿಗ್ಗೆ 10 ಗಂಟೆಗೆ ಕಂಬಳಪದವಿನ ಎಂಪೈರ್ ಸ್ಕ್ವೇರ್ನಲ್ಲಿ ನಡೆಯಲಿದೆ.

ಮನೆ, ಕಚೇರಿ ಹಾಗೂ ಇತರೆ ವಿವಿಧ ಅಗತ್ಯಗಳಿಗೆ ಹೊಂದುವಂತಹ ಆಕರ್ಷಕ, ಆರಾಮದಾಯಕ ಮತ್ತು ನವೀನ ವಿನ್ಯಾಸದ ಪೀಠೋಪಕರಣಗಳನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಈ ನೂತನ ಶೋರೂಮ್ ಆರಂಭಗೊಳ್ಳುತ್ತಿದೆ.
“Your Furniture Paradise” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಾರಂಭಗೊಳ್ಳುತ್ತಿರುವ ಸುಹಾ ಫರ್ನಿಚರ್ಸ್, ಗುಣಮಟ್ಟ, ನವೀನತೆ ಹಾಗೂ ಗ್ರಾಹಕ ಸ್ನೇಹಿ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡಲಿದ್ದು, ಪ್ರದೇಶದ ಜನತೆಗೆ ಅತ್ಯುತ್ತಮ ಪೀಠೋಪಕರಣಗಳ ಖರೀದಿ ಅನುಭವವನ್ನು ನೀಡುವ ಗುರಿ ಹೊಂದಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

