ಉಳ್ಳಾಲ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸಕಾರದ ಮುಖ್ಯಸ್ಥ ಬದಲಾದರೂ ಜಾಯಮಾನ ಬಾದಲಾಗಿಲ್ಲ. ಕಾಂಗ್ರೆಸ್‌ನ ಕೆಲವು ನಾಯಕರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ದೂರುವುದು ರೂಢಿಯಾಗಿದೆ. ಆರ್‌ಎಸ್‌ಎಸ್ ಗಂಧಗಾಳಿ ಗೊತ್ತಿಲ್ಲದ ಗೃಹಸಚಿವ ಪ್ರಿಯಾಂಕ್ ಖರ್ಗೆ ಅದರ ನೋಂದಣಿ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಅವರಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬುದ್ದಿಹೇಳಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಒತ್ತಾಯಿಸಿದ್ದಾರೆ.
ಆರ್‌ಎಸ್‌ಎಸ್ ಜಗತ್ತಿನ ವಿವಿಧ ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ಜಗತ್ತಿನ ಯಾವುದೇ ದೇಶವೂ ಅದರ ಬಳಿ ನೊಂದಾವಣೆ ಕೇಳಿಲ್ಲ. ರಾಜ್ಯದ ಗೃಹ ಸಚಿವರು ಇದನ್ನು ತಿಳಿದುಕೊಳ್ಳಬೇಕು. ಗೃಹಸಚಿವ ಹುದ್ದೆ ಸಿಕ್ಕಿರುವ ಅಮಲಿನಲ್ಲಿ ಪ್ರಿಯಾಂಕ ಖರ್ಗೆ ಸಂಘದ ಬಗ್ಗೆ ಮಾತನಾಡುವುದು ಮುಸ್ಲಿಂ ತುಷ್ಠೀಕರಣವಲ್ಲದೇ ಮತ್ತೇನಲ್ಲ ಎಂದರು.

