ಮುನ್ನೂರು: ರಾಣಿಪುರ ನಿವಾಸಿ ಹಾಗೂ ದೇರಳಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕಿ ವೀಣಾ ಡಿಸೋಜಾ (49) ಅವರು ಜೂನ್ 7ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಅವರು ಪತಿ ಅರ್ಬನ್ ಡಿಸೋಜ, ಕುಟುಂಬಸ್ಥರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ವೀಣಾ ಡಿಸೋಜಾ ಅವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮೃತರು ಉಳ್ಳಾಲ ಕಾಪಿಕಾಡ್ನ ಜಾನ್ ಬೇಕರಿಯ ಜಾನ್ ಡಿಸೋಜ ಅವರ ಪುತ್ರಿಯಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಜೂನ್ 9ರಂದು ಸಂಜೆ 4 ಗಂಟೆಗೆ ರಾಣಿಪುರದ ನಿವಾಸದಿಂದ ಹೊರಟು ರಾಣಿಪುರದ ಲೇಡಿ ಕ್ವೀನ್ ಆಫ್ ಯೂನಿವರ್ಸ್ ಚರ್ಚ್ನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕುಟುಂಬಸ್ಥರು ಹಾಗೂ ಬಂಧು-ಬಳಗ ಪ್ರಾರ್ಥಿಸಿದ್ದಾರೆ. ಮೃತರ ಪುತ್ರಿ ವಿವಲ್ ಬಿಂದಿಯ ಡಿಸೋಜ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದು, ಓರ್ವ ಪುತ್ರ ವಿನ್ಸ್ಟನ್ ಬ್ರಯಾನ್ ಡಿಸೋಜ ಅವರನ್ನು ಅಗಲಿದ್ದಾರೆ.
*****************************
ಉಳ್ಳಾಲವಾಣಿ ಕಾಳಜಿ ;ಕ್ಯಾನ್ಸರ್ ಬಗ್ಗೆ ಜಾಗೃತಿ ಅಗತ್ಯ
“ಕ್ಯಾನ್ಸರ್ನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಚಿಕಿತ್ಸೆ ಸಾಧ್ಯ; ನಿಯಮಿತ ಆರೋಗ್ಯ ತಪಾಸಣೆ ನಿಮ್ಮ ಜೀವವನ್ನು ಕಾಪಾಡಬಹುದು.
ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಿ, ಎಚ್ಚರಿಕೆಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ.
ಆರೋಗ್ಯ ಇಲಾಖೆ, ಆಹಾರ ಇಲಾಖೆ ಹೆಚ್ಚುತ್ತಿರುವ ಮಾರಕ ಕ್ಯಾನ್ಸರ್ ಕುರಿತು ಅಧ್ಯಯನ, ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಏರಿಕೆಯಾಗುತ್ತಿರುವ ರೋಗ ಬಾಧಿತರ ಸಂಖ್ಯೆ ಕಡಿಮೆಗೊಳಿಸಬೇಕಿದೆ.
*************************************************

