ಮುಡಿಪು, ಜೂನ್ 2: ಹೃದಯಾಘಾತದಿಂದ ಉದ್ಯಮಿ ಎಸ್ಕೆ ಅಬ್ದುಲ್ ಖಾದರ್ ಹಾಜಿ ಅವರ ಅಕ್ಕನ ಮಗ ಮೊಹಮ್ಮದ್ ಯಾನೆ ಪುತ್ತುಬಾವಾ (44) ಅವರು ನಿಧನ ಹೊಂದಿದ್ದಾರೆ.

ಮೃತ ಮೊಹಮ್ಮದ್ ಅವರು ಮುಡಿಪುವಿನಲ್ಲಿ ಜವಳಿ ಅಂಗಡಿಯನ್ನು ನಡೆಸುತ್ತಿದ್ದರು. ಬಳಿಕ ಎಸ್ಕೆ ದಿಂಬರ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಮೃತರು ನಾಲ್ವರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

