ಬಂಟ್ವಾಳ, ಜೂನ್ 1: ಚಿಣ್ಣರ ಲೋಕ ಮೊಕೆದ ಕಲಾವಿದರ ಸೇವಾ ಟ್ರಸ್ಟ್ (ರಿ.), ಬಂಟ್ವಾಳ ಇದರ ಆಶ್ರಯದಲ್ಲಿ ಹಾಗೂ ತುಳು, ಬ್ಯಾರಿ, ಕೊಂಕಣಿ ಮತ್ತು ಅರೆಭಾಷೆ ಅಕಾಡೆಮಿಗಳ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆದ ಕರಾವಳಿ ಕಲೋತ್ಸವ-2026 ಹಾಗೂ ಬಹುಸಂಸ್ಕೃತಿ ಉತ್ಸವದ ಯಶಸ್ಸಿಗೆ ಕಾರಣಕರ್ತರಾದ ಪದಾಧಿಕಾರಿಗಳು, ಸದಸ್ಯರು ಹಾಗೂ ಆತ್ಮೀಯರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಮತ್ತು ಔತಣಕೂಟವು ಮೇ 31ರಂದು ಸಂಜೆ ಸ್ವರ್ಶ ಕಲಾಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಟ್ರಸ್ಟಿ ತೇವ್ ತಾರನಾಥ ಕೊಟ್ಟಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ್ ಜೈನ್, ಬ್ಯಾರಿ ಸಾಹಿತ್ಯ ಸಂಭ್ರಮದ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಗೌರವ ಸಲಹೆಗಾರ ಸರಪಾಡಿ ಅಶೋಕ್ ಶೆಟ್ಟಿ, ನಿರ್ದೇಶಕರಾದ ದೇವಪ್ಪ ಕುಲಾಲ್ ಪಂಜಿಕಲ್ಲು, ರಾಜ್ ಚಂತಿಮಾರ್, ಶೋಭಾ ಶೆಟ್ಟಿ ಪೌಜಿಯ, ಎಚ್.ಕೆ. ನಾಯನಾಡು, ವಿಜಯಕುಮಾರ್ ಅಡ್ಯಾರು, ಡಾ. ರೂಪಲತಾ, ಅನಿಲ್ ಪಂಡಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕರಾವಳಿ ಕಲೋತ್ಸವ-2026ರ ಯಶಸ್ಸಿಗೆ ಶ್ರಮಿಸಿದ ಸಂಘಟಕರು, ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಅಭಿನಂದಿಸಿ ಗೌರವಿಸಲಾಯಿತು. ಬಳಿಕ ನಡೆದ ಔತಣಕೂಟದಲ್ಲಿ ಸದಸ್ಯರು ಮತ್ತು ಆಹ್ವಾನಿತರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಬಹುಸಂಸ್ಕೃತಿ ಉತ್ಸವದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು.

