ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುತ್ತಾರು : ಕಿನ್ಯಾ ಕೇಶವ ಶಿಶು ಮಂದಿರದ ವತಿಯಿಂದ ನವ ದಂಪತಿಗಳ ಸಮಾವೇಶವು ಅ. 11ರಂದು ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ಕುತ್ತಾರು ಬಾಲಸಂರಕ್ಷಣ ಕೇಂದ್ರ ಜರಗಲಿರುವುದು.
ಒಂದು ವರ್ಷದಿಂದೀಚೆ ವಿವಾಹಿತರಾದ ದಂಪತಿಗಳು ಈ ಸಮಾವೇಶದಲ್ಲಿ ಭಾಗವಹಿಸಲು ಅವಕಾಶವಿದೆ. ಸೌಭಾಗ್ಯಶಾಲಿ ಕುಟುಂಬದ ಪರಿಕಲ್ಪಣೆಯೆ ಈ ಕಾರ್ಯಕ್ರಮದ ಉದ್ದೇಶ. ಭಾರತೀಯ ಕುಟುಂಬ ಜೀವನ ಪದ್ದತಿಯನ್ನು ಪ್ರತೀ ಮನೆಯಲ್ಲಿಯೂ ಆಚರಿಸುವಂತಾಗಬೇಕು. ಕುಟುಂಬ ಸಮಾಜದ ಕೇಂದ್ರ ಬಿಂದು ಹಾಗೂ ದೇಶದ ಕೇಂದ್ರಬಿಂದುವೂ ಆಗಿದೆ. ದೇಶದ ಮೇಲೆ ಪರಕೀಯರಿಂದ ನಾನಾ ತೆರೆನಾದ ಆಕ್ರಮಣಗಳ ಹೊರತು ನಮ್ಮ ಧರ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸಿರುವುದು ಭಾರತೀಯ ಕುಟುಂಬ ಪದ್ಧತಿ. ಆದರೆ ಇತ್ತೀಚಿನ ದಶಕಗಳಲ್ಲಿ ಪಾಶ್ಚಿಮಾತ್ಯ ಅನುಕರಣೆ ಹೆಚ್ಚಾಗುತ್ತಿದ್ದು ನಮ್ಮ ಭಾಷೆ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಜವಬ್ದಾರಿ ಎಲ್ಲರದ್ದಾಗಿದೆ. ಕುಟುಂಬದ ಮೂಲಾಧಾರವಾಗಿರುವ ಗ್ರಹಸ್ಥಾಶ್ರಮ ಧರ್ಮವನ್ನು ನೂತನ ದಂಪತಿಗಳಿಗೆ ತಿಳಿಸಿಕೊಡುವ ಕಾರ್ಯಕ್ರಮವೇ ನವದಂಪತಿ ಸಮಾವೇಶ.
ದಂಪತಿಗಳಿಗೆ ಆದರದ ಸ್ವಾಗತವನ್ನು ಶಿಶು ಮಂದಿರ ಪ್ರಕಟಣೆ ತಿಳಿಸಿರುತ್ತಾರೆ.


