ಪೆರ್ಮನ್ನೂರು ಸಮೀಪದ ಕಲ್ಲಾಪು ಬುರ್ದುಗೋಳಿ ಸಾನಿಧ್ಯಕ್ಕೆ ಟೋನಿ ಗೈ ಸಂಸ್ಥೆಯ ಮಾಲಕರಾದ ಶರತ್ ಕೆ.ಜೆ. ಅವರು ತಮ್ಮ ಜನ್ಮದಿನದ ಪ್ರಯುಕ್ತ ನೂತನ ಕುಡಿಯುವ ನೀರಿನ ಶುದ್ಧೀಕರಣ ಯಂತ್ರವನ್ನು ದೇಣಿಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕದ್ರಿ ಇವೆಂಟ್ಸ್ ಸಂಸ್ಥೆಯ ಮಾಲಕರಾದ ಜಗದೀಶ್ ಕದ್ರಿ, ಕಾರಣಿಕ ಕ್ಷೇತ್ರವಾದ ಗುಳಿಗ–ಕೊರಗಜ್ಜ ದೈವಗಳ ಉದ್ಭವ ಶಿಲೆಯ ಪ್ರಧಾನ ಆದಿಸ್ಥಳ ಸೇವಾ ಟ್ರಸ್ಟ್ ಬುರ್ದುಗೋಳಿ ಕಲ್ಲಾಪು ಪೆರ್ಮನ್ನೂರಿನಲ್ಲಿ ಭಕ್ತಿಯಿಂದ ಬೇಡಿಕೊಂಡ ಅನೇಕ ಕಾರ್ಯಗಳು ನೆರವೇರಿವೆ ಎಂದು ಹೇಳಿದರು. ಕ್ಷೇತ್ರಕ್ಕೆ ಹಲವಾರು ಗಣ್ಯರು ಹಾಗೂ ಸೆಲೆಬ್ರಿಟಿಗಳು ಆಗಮಿಸಿ ದೈವದ ದರ್ಶನ ಪಡೆಯುತ್ತಿರುವುದು ವಿಶೇಷವಾಗಿದೆ ಎಂದರು.

ಇದೇ ವೇಳೆ ಶರತ್ ಕೆ.ಜೆ. ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಸಮಾಜಮುಖಿ ಕಾರ್ಯ ಮಾಡಬೇಕೆಂಬ ಆಶಯ ವ್ಯಕ್ತಪಡಿಸಿದಾಗ, ಕ್ಷೇತ್ರದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಯಂತ್ರದ ಅಗತ್ಯವಿರುವುದನ್ನು ತಿಳಿಸಲಾಯಿತು. ಕೇವಲ ಹತ್ತು ದಿನಗಳೊಳಗೆ ಅವರು ಈ ವ್ಯವಸ್ಥೆಯನ್ನು ಕಲ್ಪಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೇತ್ರದ ದೈವವು ಅವರಿಗೆ ಇನ್ನಷ್ಟು ಸಾಮಾಜಿಕ ಸೇವೆಗಳನ್ನು ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಫುಡ್ ಲ್ಯಾಂಡ್ ಮಂಗಳೂರು ಮಾಲಕರಾದ ಆಶೀಶ್ ಶೆಟ್ಟಿ, ಟೋನಿ ಗೈ ಸಂಸ್ಥೆಯ ಮಾಲಕರಾದ ಶರತ್ ಕೆ.ಜೆ., ಬುರ್ದುಗೋಳಿ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ನಾಯಕ್, ಮಧ್ಯಸ್ತರಾದ ದೇವದಾಸ್ ಕಾಯಂಗಲ, ನವೀನ್ ಕಾಯಂಗಲ, ಪುರುಷೋತ್ತಮ ಮೇಲಾಂಟ, ಪ್ರಶಾಂತ್ ಕಾಯಂಗಲ, ಪುರುಷೋತ್ತಮ ಕಲ್ಲಾಪು, ಬಾಲಕೃಷ್ಣ, ಹರೀಶ್ ಕೊಟ್ಟಾರಿ, ಸಂತೋಷ್ ಶೆಟ್ಟಿ, ಮೋಹನ್, ಜಯಶ್ರೀ ಕೊಟ್ಟಾರಿ, ದೀಕ್ಷಾ, ಅಶಾ, ಮಂಜುಳಾ ಮೊದಲಾದವರು ಉಪಸ್ಥಿತರಿದ್ದರು.
ಟೋನಿ ಗೈ ಸಂಸ್ಥೆಯ ಮಾಲಕರಾದ ಶರತ್ ಕೆ.ಜೆ. ಅವರು ಸರಳ ಹಾಗೂ ಸಮಾಜಮುಖಿ ಮನೋಭಾವದ ವ್ಯಕ್ತಿಯಾಗಿದ್ದು, ಸೇವಾ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿರುವವರು ಎಂದು ಟ್ರಸ್ಟ್ ವತಿಯಿಂದ ಪ್ರಶಂಸಿಸಲಾಯಿತು. ಇದೇ ಸಂದರ್ಭದಲ್ಲಿ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

