ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಯುಕೆ ಯ ಬಾಂಗೋರ್ ವಿಶ್ವವಿದ್ಯಾನಿಲಯ ನಡುವೆ ನಡೆಯುವ “ಅಂತರರಾಷ್ಟ್ರೀಯ ಶಿಕ್ಷಣ ನಾವೀನ್ಯತೆ ಮತ್ತು ಪ್ರಜಾಪ್ರಭುತ್ವ ಪಾಲುದಾರಿಕೆ-ನಿರ್ಮಾಣ” ಎಂಬ ಸಂಶೋಧನಾ ಕಾರ್ಯಯೋಜನೆ , ಶೈಕ್ಷಣಿಕ ಸಹಕಾರ ಸಂಬಂಧಿಸಿದಂತೆ ಸಭೆಯು ಇತ್ತೀಚೆಗೆ ಮಂಗಳೂರು ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ನಡೆಯಿತು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್ .ಧರ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಗಳೂರು ವಿವಿ ಹಾಗೂ ಬಾಂಗೋರ್ ವಿವಿಗಳ ನಡುವಿನ ಶೈಕ್ಷಣಿಕ ಸಹಕಾರಗಳ ಕುರಿತು ಚರ್ಚಿಸಲಾಯಿತು.
ಈ ಯೋಜನೆಯ ಮೂಲಕ ಉಭಯ ವಿಶ್ವವಿದ್ಯಾಲಯಗಳ ಪಠ್ಯಕ್ರಮ, ಕ್ರೆಡಿಟ್ ವ್ಯವಸ್ಥೆ, ಮೌಲ್ಯಮಾಪನ ವಿಧಾನಗಳು ಮತ್ತು ಬೋಧನಾ ವಿಧಾನಗಳ ಹೊಂದಾಣಿಕೆ, ಸಂಶೋಧನಾ ತರಬೇತಿ ಮತ್ತು ಡಿಜಿಟಲ್ ಕಲಿಕೆ, ಸಾಂಸ್ಕೃತಿಕ ಹೊಂದಾಣಿಕೆ,ಉಪನ್ಯಾಸಕರ ವಿನಿಮಯ, ಸಂಯುಕ್ತ ಕಾರ್ಯಾಗಾರಗಳು, ಸಂಶೋಧನಾ ಸಹಕಾರ, ಅತಿಥಿ ಉಪನ್ಯಾಸಗಳು ಮತ್ತು ಪ್ರಕಟಣಾ ಯೋಜನೆಗಳಂತಹ ದೀರ್ಘಕಾಲೀನ ಶೈಕ್ಷಣಿಕ ಚಟುವಟಿಕೆಗಳ ಮುನ್ನಡೆಯ ಬಗ್ಗೆ ಚರ್ಚಿಸಲಾಯಿತು.
ಬಾಂಗೋರ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಜೋಶುವಾ ಆಂಡ್ರೀವ್ಸ್ , ಸಮಾಜ ವಿಜ್ಞಾನಿ ಲಿಸಾ ಸ್ಪಾರ್ಕ್ಸ್ ಅವರು ಶೈಕ್ಷಣಿಕ ಯೋಜನೆ ಹಾಗೂ ಮಹತ್ವದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗ ಸ್ಚಾಮಿ ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.

