ಇಡಾಹೊ, ಮೇ. 18: ಪಶ್ಚಿಮ ಇಡಾಹೊದ ಮೌಂಟೇನ್ ಹೋಮ್ ವಾಯುಪಡೆ ನೆಲೆಯಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ಯುಎಸ್ ನೌಕಾಪಡೆಯ ಎರಡು ಯುದ್ಧ ವಿಮಾನಗಳು ಗಾಳಿಯಲ್ಲೇ ಭೀಕರವಾಗಿ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತಕ್ಕೀಡಾದ ವಿಮಾನಗಳನ್ನು ನೌಕಾಪಡೆಯ ಅತ್ಯಾಧುನಿಕ ‘ಇಎ-18ಜಿ ಗ್ರೋಲರ್ಸ್’ ಎಂದು ಗುರುತಿಸಲಾಗಿದೆ.

ಅತಿ ವೇಗದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಭೀಕರ ಡಿಕ್ಕಿಯ ನಡುವೆಯೂ ಎರಡೂ ಜೆಟ್‌ಗಳಲ್ಲಿದ್ದ ನಾಲ್ವರು ಸಿಬ್ಬಂದಿ ತಕ್ಷಣವೇ ಸುರಕ್ಷಿತವಾಗಿ ಹೊರಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಪ್ರಸ್ತುತ ಗಾಯಾಳು ಸಿಬ್ಬಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಾಯುನೆಲೆ ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್, ಮಿಲಿಟರಿ ನೆಲೆಯಲ್ಲಿದ್ದ ಇತರ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಸದ್ಯ ಘಟನೆಗೆ ಕಾರಣವೇನು ಎಂಬುದರ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

