ಉಳ್ಳಾಲ: ಜಲಸಿರಿ ಯೋಜನೆಯಡಿ ಕುಡಿಯುವ ನೀರು ಪೂರೈಕೆ ಒಂದೇ ವಾರದಲ್ಲಿ ಮಾಡುತ್ತೇವೆ ಎಂದು ಭರವಸೆ ನೀಡಿದ ಕುಡಿಯುವ ನೀರು ಇಲಾಖೆ ಅಧಿಕಾರಿಗಳು ಸಭೆಗೆ ಗೈರು ಹಾಜರಾದ ಬಗ್ಗೆ ವ್ಯಾಪಕ ಚರ್ಚೆ ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಪುರಸಭೆ ಅಧ್ಯಕ್ಷ ಕಮಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪುರಸಭೆ ವಿರೋಧ ಪಕ್ಷದ ನಾಯಕ ಪುರುಷೋತ್ತಮ ಶೆಟ್ಟಿ ಅವರು, ಪುರಸಭೆ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಅಮೃತ್ 2.0 ಕುಡಿಯುವ ನೀರಿನ ಸಂಪರ್ಕ ಆಗಿಲ್ಲ. ಇದರಿಂದ ಬಹಳಷ್ಟು ಮಂದಿ ಗೆ ತೊಂದರೆ ಆಗಿದೆ.ಈ ಬಗ್ಗೆ ಯಾರಲ್ಲಿ ಪ್ರಶ್ನಿಸಬೇಕು ಎಂದು ಅವರು ಅಧ್ಯಕ್ಷರನ್ನು ತರಾಟೆ ಗೈದರು.
ಜಲಸಿರಿ ಕುಡಿಯುವ ನೀರಿನ ಯೋಜನೆ ಅಧಿಕಾರಿಗಳು ಮುಂದಿನ ವಾರದಲ್ಲಿ ವಿಶೇಷ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡಲಿದ್ದಾರೆ ಎಂದು ಉಪಾಧ್ಯಕ್ಷ ರವಿಶಂಕರ್ ಸಭೆಗೆ ತಿಳಿಸಿದರು. ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ, ಬಡಾವಣೆ ನಿರ್ಮಾಣ ಆಗುತ್ತದೆ. ಪರವಾನಿಗೆ ಇಲ್ಲದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಹರೀಶ್ ತಿಳಿಸಿದರು. ಮೆಸ್ಕಾಂ ಜೆಇ ನಿತೇಶ್ ಮಾತನಾಡಿ, ಒಕ್ಕುಪೆನ್ಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಿದ್ಯುತ್ ಸಂಪರ್ಕ ನೀಡಲಾಗು ತ್ತದೆ. ಪಂಚಾಯತ್ ಅನುಮೋದನೆ ಮಾಡದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ನೀಡಲಾಗುವುದಿಲ್ಲ. 1500 ಚದರ ಅಡಿ ವಿಸ್ತೀರ್ಣದ ಕಟ್ಟಡ ಕ್ಕೆ ಒಕ್ಕುಪೆನ್ಸಿ ಸರ್ಟಿಫಿಕೇಟ್ ಬೇಕಾಗಿಲ್ಲ.ಸೋಮೇಶ್ವರ ದಿಂದ ಪೆರಿ ಬೈಲ್ ವರೆಗೆ ಅಂಡರ್ ಗೌಂಡ್ ವಿದ್ಯುತ್ ಸಂಪರ್ಕ ಆಗುತ್ತದೆ. ಕೊಲ್ಯ ಕುಂಪಲ ವರೆಗೆ ಅಂಡರ್ ಗೌಂಡ್ ಸಂಪರ್ಕ ಮಾಡಬಹುದು. ಉಳಿದ ಜಾಗ ಪರಿಶೀಲನೆ ಆಗಬೇಕು ಎಂದು ಸಭೆಗೆ ತಿಳಿಸಿದರು.
ಸೋಮೇಶ್ವರದಿಂದ ಉಚ್ಚಿಲವರೆಗೆ ಸರ್ವಿಸ್ ರಸ್ತೆ ಮಾಡಲು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮನವಿ ಮಾಡಲಾ ಗಿದೆ ಆದರೆ ಈವರೆಗೆ ಯಾವುದು ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ಸಲಾಮ್ ಉಚ್ಚಿಲ ಆರೋಪಿಸಿದರು. ಹೆದ್ದಾರಿ ಬಳಿ ಚರಂಡಿ ಗಳಿಲ್ಲ. ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ.ಕುಂಪಲ ಬೈಪಾಸ್,ಕೊಲ್ಯ ದಾರಿದೀಪ ಇಲ್ಲ. ಇದಕ್ಕೆ ವ್ಯವಸ್ಥೆ ಆಗಬೇಕು ಎಂದು ಸದಸ್ಯರೊಬ್ಬರು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ರ ಗಮನ ಸೆಳೆದರು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಇಂಜಿನಿಯರ್ ಬ್ರಿಜೇಶ್ ಮಾತನಾಡಿ, ಈ ಬಗ್ಗೆ ಚರ್ಚೆ ಮಾಡಿ ವರದಿ ನೀಡುತ್ತೇನೆ. ಮುಂದಿನ ಹಂತದಲ್ಲಿ ಈ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಹುಮಹಡಿ ಕಟ್ಟಡದ ಕೊಳಚೆ ನೀರನ್ನು ಚರಂಡಿಗೆ ಬಿಡುತ್ತಿದ್ದು,ಈ ನೀರು ಪಿಲಾರ್ ಬಳಿ ಶೇಖರಣೆಯಾಗುತ್ತಿದೆ. ಇದರಿಂದ ಕೆಲವು ಮನೆಗಳ ಬಾವಿಗಳ ನೀರು ಹಾಳಾಗಿದ್ದು. ಇವರಿಗೆ ಟ್ಯಾಂಕರ್ ಮೂಲಕ ನೀರು ನೀರು ನೀಡಲಾ ಗುತ್ತದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪುರುಷೋತ್ತಮ ಪಿಲಾರ್ ಸಭೆಯಲ್ಲಿ ತಿಳಿಸಿದರು. ನಮ್ಮ ಕ್ಲಿನಿಕ್ ಬಗ್ಗೆ ನಡೆದ ಚರ್ಚೆ ಗೆ ಉತ್ತರಿಸಿದ ಮುಖ್ಯಾಧಿಕಾರಿ ಮತಡಿ ಅವರು, ನಮ್ಮ ಕ್ಲಿನಿಕ್ ಗೆ ಬೇಕಾದ ವಸ್ತುಗಳನ್ನು ಆರೋಗ್ಯ ಇಲಾಖೆ ನೀಡಬೇಕು. ನಮ್ಮ ಕ್ಲಿನಿಕ್ ನಲ್ಲಿ ಏನೆಲ್ಲ ಲೋಪದೋಷಗಳು ಇವೆಯಾ ಈ ಬಗ್ಗೆ ವರದಿ ಆರೋಗ್ಯ ಇಲಾಖೆ ಗೆ ನೀಡಬೇಕು ಎಂದು ಹೇಳಿದರು. ಉಪಾಧ್ಯಕ್ಷ ರವಿಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಉಪಸ್ಥಿತರಿದ್ದರು.

