ದೇರಳಕಟ್ಟೆ: ಯೂತ್ ಸ್ಪೋರ್ಟ್ಸ್ ಅಕಾಡೆಮಿ(ರಿ) ಉಳ್ಳಾಲ ವತಿಯಿಂದ ಆಯೋಜಿಸಲಾಗಿದ್ದ 20ನೇ ವರ್ಷದ ಉಚಿತ ಬೇಸಿಗೆ ಫುಟ್ಬಾಲ್ ತರಬೇತಿ ಶಿಬಿರವು ಯಶಸ್ವಿಯಾಗಿ ಸಮಾಪ್ತಿಗೊಂಡಿತು.

ಸೃಷ್ಟಿಕರ್ತನ ಅಪಾರ ಅನುಗ್ರಹದಿಂದ ನಡೆದ ಈ ಶಿಬಿರದಲ್ಲಿ ಸುಮಾರು 40 ರಿಂದ 60ರವರೆಗೆ ಶಿಬಿರಾರ್ಥಿಗಳು ಭಾಗವಹಿಸಿ ಫುಟ್ಬಾಲ್ನ ಮೂಲಭೂತ ಕೌಶಲ್ಯಗಳ ಜೊತೆಗೆ ದೈಹಿಕ ಸಾಮರ್ಥ್ಯ ಮತ್ತು ಕ್ರೀಡಾಸ್ಫೂರ್ತಿಯನ್ನು ಬೆಳೆಸಿಕೊಂಡರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಉಚಿತ ತರಬೇತಿ ಶಿಬಿರವನ್ನು ಯಶಸ್ವಿಯಾಗಿ ನಡೆಸಲು ಸುಂದರವಾದ ಮೈದಾನವನ್ನು ಒದಗಿಸಿ ಸಹಕರಿಸಿದ ಸಿಟಿ ಗ್ರೌಂಡ್ ಹಾಗೂ ಗ್ರೀನ್ ಗ್ರೌಂಡ್ ಮಾಲಕರಿಗೆ, ಜೊತೆಗೆ ಮೈದಾನ ಲಭ್ಯವಾಗಲು ನೆರವಾದ ರಾಜಕೀಯ ಯುವ ನಾಯಕ ಸಿಎಂ ರೌಫ್, ಪರಿಸರದ ಅಸಿಫ್ ಹಾಗೂ ಇತರ ಸಹಕರಿಸಿದವರಿಗೆ ಯೂತ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಕಾಡೆಮಿಯ ಸ್ಥಾಪಕರು ಹಾಗೂ ಅಧ್ಯಕ್ಷರಾದ ಸಾಜಿದ್ ಉಳ್ಳಾಲ್, “ಯುವ ಪ್ರತಿಭೆಗಳನ್ನು ಗುರುತಿಸಿ ಕ್ರೀಡಾ ಕ್ಷೇತ್ರದಲ್ಲಿ ಉತ್ತೇಜಿಸುವ ಉದ್ದೇಶದಿಂದ ಕಳೆದ ಇಪ್ಪತ್ತು ವರ್ಷಗಳಿಂದ ಉಚಿತ ತರಬೇತಿ ಶಿಬಿರವನ್ನು ನಿರಂತರವಾಗಿ ನಡೆಸಲಾಗುತ್ತಿದೆ” ಎಂದು ತಿಳಿಸಿದರು.

