ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಮಂಗಳೂರಿನ ಎನ್ ಎಂ ಪಿ ಎ ಸಂಸ್ಥೆಯ ಸಿಎಸ್ ಆರ್ ಅನುದಾನದಲ್ಲಿ ನವೀಕೃತಗೊಂಡಿರುವ ‘ಮಂಗಳ’ ಕ್ಯಾಂಟೀನ್ ಕಟ್ಟಡದ ಉದ್ಘಾಟನಾ ಸಮಾರಂಭ ಬುಧವಾರ ನಡೆಯಿತು.

ನವೀಕೃತ ಕಟ್ಟಡವನ್ನು ಎನ್ ಎಂ ಪಿ ಎ ಸಂಸ್ಥೆಯ ಉಪಾಧ್ಯಕ್ಷರಾದ ಎಸ್ .ಶಾಂತಿ ಅವರು ಉದ್ಘಾಟಿಸಿ, ಉತ್ತಮ ಸೌಲಭ್ಯದೊಂದಿಗೆ ನವೀಕೃತಗೊಂಡಿರುವ ಈ ಕ್ಯಾಂಟೀನ್ ಮೂಲಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ನಮ್ಮ ಸಂಸ್ಥೆಯು ವಿದ್ಯಾರ್ಥಿ ಕೇಂದ್ರಿತ ಕಾರ್ಯಯೋಜನೆಗಳಿಗೆ ಹೆಚ್ಚಿನ ಸಿಎಸ್ ಆರ್ ಅನುದಾನವನ್ನು ನೀಡುತ್ತಾ ಬಂದಿದೆ. ಉತ್ತಮ ಗುಣಮಟ್ಟದ ಆಹಾರ, ಶುಚಿತ್ವ ಮೊದಲಾದ ವ್ಯವಸ್ಥೆಯೊಂದಿಗೆ ಈ ಉಪಹಾರ ಗೃಹವು ಮುನ್ನಡೆಯಲಿ ಎಂದು ಶುಭಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ.ಪಿ.ಎಲ್ . ಧರ್ಮ ಅವರು ಮಾತನಾಡಿ, ಈ ನವೀಕೃತ ಕ್ಯಾಂಟಿನ್ ನಲ್ಲಿ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತದೆ ಎಂದ ಅವರು ಅನುದಾನವನ್ನು ಒದಗಿಸಿದ ಎನ್ ಎಂ ಪಿ ಎ ಸಂಸ್ಥೆಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವರಾದ ಪ್ರೊ.ಗಣೇಶ್ ಸಂಜೀವ್, ಕಾರ್ಯಕಾರಿ ಅಭಿಯಂತರರಾದ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ವಿವಿ ಪ್ರಾಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

