ಕುಂಪಲ ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದಲ್ಲಿ ಪರಿವಾರ ಶಕ್ತಿಯಾಗಿ ಶ್ರೀ ಅನಂತ ಪದ್ಮನಾಭ ದೇವರ ಶಿಲಾ ವಿಗ್ರಹದ ಪ್ರತಿಷ್ಟಾಪನಾ ವೈಧಿಕ ಪ್ರಕ್ರೀಯೆಗಳು, ಜೂನ್ 16 ರಿಂದ 19 ರವರೆಗೆ ನಡೆಯಲಿದ್ದು, ಇದರ ಶಿಲಾ ಬಿಂಬದ ಶೋಭಯಾತ್ರೆ ಕುಂಪಲ ಶ್ರೀ ಬಾಲಕೃಷ್ಣ ಮಂದಿರದಿಂದ ನಡೆಯಿತು.

ಶ್ರೀ ಬಾಲಕೃಷ್ಣ ದೇವರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಈ ಸಂದರ್ಬದಲ್ಲಿ ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷರಾದ ಸತೀಶ್ ಕುಂಪಲ, ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದ ಪ್ರಧಾನ ಅರ್ಚಕ ಭವಾನಿಶಂಕರ ಶಾಂತಿ, ಮಂದಿರದ ಅರ್ಚಕ ಮಹಾಬಲ ಬಂಗೇರ, ಮಂದಿರದ ಕ್ಷೇತ್ರಾಡಳಿತ ಮಂಡಳಿಯ ಸದಸ್ಯರುಗಳಾದ ಪ್ರವೀಣ್ ಎಸ್ ಕುಂಪಲ, ಗಣೇಶ್ ಅಂಚನ್, ಪ್ರಹ್ಲಾದ್ ಕುಮಾರ್ ಇಂದಾಜೆ, ದೀಕ್ಷಿತ್ ನಿಸರ್ಗ, ಜಗದೀಶ್ ಆಚಾರ್ಯ, ಕಿಶೋರ್ ಡಿ.ಕೆ, ಗಣೇಶ್ ಶೆಟ್ಟಿ ಹನುಮಾನ್ ನಗರ, ದುರ್ಗಾ ಪರಮೇಶ್ವರ ಕ್ಷೇತ್ರದ ಸೇವಾ ಸಮಿತಿಯ ಭಾಸ್ಕರ ಕುಜುಮಗದ್ದೆ, ಹರಿಶ್ಚಂದ್ರ ಕುಜುಮಗದ್ದೆ, ಗಂಗಾದರ ಪೂಜಾರಿ, ನಿತೇಶ್ ಕುಂಪಲ, ದೇವದಾಸ್ ಬಾರ್ದೆ, ಯಶವಂತ ಹನುಮಾನ್ ನಗರ, ವಸಂತ್ ದಾಸ್, ಮಡಿಲು ತಂಡದ ಸುಧೀರ್, ಉದ್ಯಮಿ ಜಯಂತ್ ಕೊಂಡಾಣ, ಕೊಲ್ಯ ಶಾರದಾ ಟ್ರಸ್ಟ್ ನ ಮೋಹನ್ ಶೆಟ್ಟಿ, ಭಜನಾ ಸೇವಕ್ ಅಶೋಕ್ ಎಡಪದವು, ಅಶ್ವಿನಿ ಜಪ್ಪಿನ ಮೊಗೆರು ಮತ್ತು ಬಾಲಕೃಷ್ಣ ಮಹಿಳಾ ಸಮಿತಿ, ಶ್ರೀ ದುರ್ಗಾ ಪರಮೇಶ್ವರ ಮಹಿಳಾ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

