ಕಡಬ: ಕಡಬ ಪ್ರದೇಶದಲ್ಲಿ ನಡೆದ ದುರ್ಘಟನೆ ಮನಸ್ಸನ್ನು ಮಿಡಿಯಿಸುವಂತದ್ದು. ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಇಡೀ ಊರನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಬೇಸಿಗೆ ರಜೆಯ ಖುಷಿ, ನಗು, ಆಟ ಕ್ಷಣಾರ್ಧದಲ್ಲಿ ಶೋಕವಾಗಿ ಮಾರ್ಪಟ್ಟಿದೆ.

ಮೃತ ವಿದ್ಯಾರ್ಥಿನಿಯರನ್ನು ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿ ನಿವಾಸಿಗಳಾದ ಅರ್ಪಿತಾ(15) ಹಾಗೂ ಸುನೀತಾ(21) ಎಂದು ಗುರುತಿಸಲಾಗಿದೆ.
ಈ ಘಟನೆ ಮತ್ತೊಮ್ಮೆ ಜೀವನದ ಅನಿಶ್ಚಿತತೆಯನ್ನು ನೆನಪಿಸುತ್ತದೆ. ಮನುಷ್ಯ ಬದುಕಿರುವಾಗ ಜಾತಿ, ಧರ್ಮ, ಹುದ್ದೆ, ಅಹಂಕಾರ ಎಂದು ವಿಭಜನೆ ಮಾಡುತ್ತಾನೆ. ಆದರೆ ಸಾವಿನ ಮುಂದೆ ಎಲ್ಲರೂ ಒಂದೇ. ಸಾವಿಗೆ ಜಾತಿ ಇಲ್ಲ, ಧರ್ಮ ಇಲ್ಲ. ಮನುಷ್ಯನ ಉಸಿರು ಇರುವವರೆಗೆ ಮಾತ್ರ ಈ ಭೇದಗಳು.
ಜೀವನ ಅಂದರೆ ಹೋರಾಟ, ಹೊಣೆಗಾರಿಕೆ ಮತ್ತು ಪರಸ್ಪರ ಮಾನವೀಯತೆಯ ಪ್ರಯಾಣ. ಒಂದು ಕ್ಷಣದ ಅಜಾಗರೂಕತೆ ಇಡೀ ಕುಟುಂಬದ ಬದುಕನ್ನೇ ಕತ್ತಲೆಗೆ ತಳ್ಳಬಹುದು. ಆದ್ದರಿಂದ ನದಿ, ಕೆರೆ, ಸಮುದ್ರಗಳ ಬಳಿ ಎಚ್ಚರಿಕೆ ಅತ್ಯಗತ್ಯ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ದೊರಕಲಿ.

