ಉಳ್ಳಾಲ; ಹಿರಾ ಮಹಿಳಾ ಕಾಲೇಜು ವತಿಯಿಂದ ಕಾಲೇಜಿನ ಯೂತ್ ರೆಡ್ ಕ್ರಾಸ್ ಯುನಿಟ್ ಮತ್ತು ಎನ್.ಎಸ್.ಎಸ್.ಜಂಟಿ ಆಶ್ರಯದಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಬಬ್ಬುಕಟ್ಟೆ ಹಿರಾ ಕ್ಯಾಂಪಸ್ ಎಂ.ಎಸ್.ಎಸ್.ಎಚ್.ಎo ಸಭಾಂಗಣದಲ್ಲಿ ನಡೆಯಿತು.

ಜಮಾತೆ ಇಸ್ಲಾಮಿ ಹಿಂದ್ ಮಂಗಳೂರು ಉತ್ತರ ಅಧ್ಯಕ್ಷ ಇಸಾಕ್ ಪುತ್ತೂರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಕ್ತದ ಕೊರತೆ ಬಹಳಷ್ಠಿದೆ. ಆದ್ದರಿಂದ ಇಂತಹ ಶಿಬಿರಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ರಕ್ತದಾನದ ಮೂಲಕ ಒಂದು ಜೀವ ಉಳಿಸಿದರೆ ಇಡೀ ಮನುಕುಲವನ್ನು ರಕ್ಷಿಸಿದಂತಾಗುತ್ತದೆ ಎಂದರು.
ಶಾಂತಿ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಅಬ್ದುಲ್ ಕರೀಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕೆ.ಎಂ.ಸಿ. ರಕ್ತ ಮೆಡಿಕಲ್ ಆಫೀಸರ್ ಡಾ.ಲಕ್ಷಿö್ಮ ಶಿಬಿರ ಸಂಯೋಜಕಿ ದುರ್ಗಾ ದಾಮೋದರ್, ಹಿರಾ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಝಾಕೀರ್, ಸಂಚಾಲಕ ರಾಹ್ಮತುಲ್ಲ, ಹಿರಾ ಮಹಿಳಾ ಕಾಲೇಜು ಪ್ರಾಂಶುಪಾಲ ಆಯಿಷಾ ಅಸ್ಮೀನ್, ಹಿರಾ ಪ್ರೌಢ ಶಾಲಾ ಮುಖ್ಯೋಪದ್ಯಾಯಿನಿ ಆಯಿಶಾ ಆಫ್ರೀನ್, ಹಿರಾ ಶಾಲೆಯ ಮುಖ್ಯೋಪದ್ಯಾಯಿನಿ ರೀನಾ ವೇಗಸ್, ಹಿರಾ ಕಾಲೇಜಿನ ಶಿಬಿರ ಸಂಯೋಜಕಿ ಶಿಕ್ಷಕಿ ನಶೀದಾ ಮೊದಲಾದವರು ಉಪಸ್ಥಿತರಿದ್ದರು.
ಅಲೀಮ್ ಸೌದ ಮತ್ತು ಅಮ್ರಾ ಶಾಹೀದಾ ಕಿರಾಅತ್ ಪಠಿಸಿದರು. ಆಯಿಶತ್ ಸೈಮಾ ಸ್ವಾಗತಿಸಿದರು. ಹನಾ ಫಾತಿಮ ವಂದಿಸಿದರು.

