ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮೇ 1 ವಿಶ್ವ ಕಾರ್ಮಿಕರ ದಿನದ ಪ್ರಯುಕ್ತ ಮಂಗಳೂರಿನ ಪೌರ ಕಾರ್ಮಿಕರಿಗೆ ಕಾಯಕ ಗೌರವ ಕಾರ್ಯಕ್ರಮ ಪಂಪ್ವೆಲ್ ನಡೆಯಿತು.

ಕಾರ್ಮಿಕರ ಪರಿಶ್ರಮದ ಕುರಿತು ಜಿಲ್ಲಾಧ್ಯಕ್ಷ ಇಬ್ರಾಹೀಂ ನವಾಝ್ ನವರು ಮಾತನಾಡಿ ಕಾರ್ಮಿಕ ದಿನಾಚರಣೆ ಪ್ರಾರಂಭ ದಿನದಿಂದ ನಡೆದು ಬಂದ ಇತಿಹಾಸ, ಸ್ವಾತಂತ್ರ್ಯ ಹೋರಾಟದಲ್ಲಿ ಪೌರ ಕಾರ್ಮಿಕರು ಭಾಗವಹಿಸಿದ ನೆನಪುಗಳನ್ನ ಮೆಲುಕು ಹಾಕಿ ಅವರ ಕೆಲಸಕ್ಕೆ ಯಾವ ಗೌರವವೂ ಕಡಿಮೆಯಲ್ಲ ಎಂದು ಮಾರ್ಮಿಕವಾಗಿ ನುಡಿದರು. ಕಾರ್ಮಿಕರ ದಿನ ಹಬ್ಬವಾಗಿ ಜನ್ಮ ಪಡೆದದ್ದಲ್ಲ ಅದು ಒಂದು ಹೋರಾಟದ ಸಂಕೇತ. ದೇಶದ ಹೋರಾಟದ ಬಹುಪಾಲು ಕಾರ್ಮಿಕರೇ ಇದ್ದರು. ಕಾಂಗ್ರೆಸ್ ಅಂದೂ ಕಾರ್ಮಿಕರ ಪರ, ಎಂದೆಂದಿಗೂ ಕಾರ್ಮಿಕರ ಪರ ಎಂದು ಒತ್ತಿ ಹೇಳಿದರು.

ವೇದಿಕೆಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ರಮಾನಂದ ಪೂಜಾರಿ, ಸಮರ್ಥ್ ಭಟ್, ಆಸಿಫ್ ಬಜಾಲ್, ಸಾಗರ್ ಕಟೀಲ್, ಮಿತೇಶ್ ಡಿಸೋಜಾ, ಉಮ್ಮರ್ ಸಾಲೆತ್ತೂರು, ಅನ್ಸಾರ್ ಸಾಲ್ಮರ, ಲುಕ್ಮನ್ ಅಡ್ಯಾರ್, ಅಬ್ದುಲ್ ಅಕ್ಮಲ್, ನಜೀಬ್ ಕಾರ್ಮಿಕ ಮುಖಂಡರಾದ ಮನೋಜ್, ಚಂದ್ರು ಮತ್ತು ನವೀನ್ ಉಪಸ್ಥಿತರಿದ್ದರು.

