ದೈಗೋಳಿಯ ಶ್ರೀ ಸಾಯಿ ನಿಕೇತನ ಸೇವಾಶ್ರಮದಲ್ಲಿ ವೀರಕೇಸರಿ ಫ್ರೆಂಡ್ಸ್ (ರಿ) ಮಜಿ ಬೋಳಿಯರ್ ತಂಡವು ಸಮಾಜಮುಖಿ ಕಾರ್ಯದ ಮೂಲಕ ಗಮನ ಸೆಳೆದಿದೆ.

ಆಶ್ರಮದ ನಿವಾಸಿಗಳ ಉಪಯೋಗಕ್ಕಾಗಿ ವೀಲ್ ಚೇರ್, ವಾಟರ್ ಬೆಡ್, ಅಕ್ಕಿ ಹಾಗೂ ಬಾಳೆಗೊನೆಗಳನ್ನು ತಂಡದ ವತಿಯಿಂದ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಆಶ್ರಮದ ನಿವಾಸಿಗಳು ಮತ್ತು ನಿರ್ವಹಣಾ ಸಮಿತಿ ಸದಸ್ಯರು ತಂಡದ ಸೇವಾಭಾವವನ್ನು ಪ್ರಶಂಸಿಸಿದರು. ಅಗತ್ಯ ವಸ್ತುಗಳ ನೆರವಿನಿಂದ ಆಶ್ರಮದಲ್ಲಿರುವವರ ದಿನನಿತ್ಯದ ಜೀವನಕ್ಕೆ ಸಹಾಯವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಆಶ್ರಮವಾಸಿಗಳು ಹಾಗೂ ಉಪಸ್ಥಿತರಿದ್ದವರು ವೀರಕೇಸರಿ ಫ್ರೆಂಡ್ಸ್ ತಂಡದ ಸದಸ್ಯರು ಮತ್ತು ಅವರ ಕುಟುಂಬಸ್ಥರಿಗೆ ಆಯುರಾರೋಗ್ಯ ಭಾಗ್ಯ ಲಭಿಸಲಿ ಹಾಗೂ ಇಂತಹ ಇನ್ನಷ್ಟು ಸೇವಾ ಕಾರ್ಯಗಳನ್ನು ನಡೆಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹಾರೈಸಿದರು.

