ದೇರಳಕಟ್ಟೆ;ಬದ್ರಿಯಾ ಜುಮಾ ಮಸ್ಜಿದ್ ಮತ್ತು ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ವತಿಯಿಂದ ಹಜ್ ಯಾತ್ರಿಕರಿಗೆ ತರಬೇತಿ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವು ದೇರಳಕಟ್ಟೆಯ ಬಿ.ಜೆ.ಎಂ ಆಡಿಟೋರಿಯಂನಲ್ಲಿ ನಡೆಯಿತು.

ಬದ್ರಿಯಾ ಜುಮಾ ಮಸ್ಜಿದ್‌ನ ಖತೀಬ್ ತಾಜುದ್ದೀನ್ ರಹ್ಮಾನಿ ದುಆಗೈದರು. ಬದ್ರಿಯಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಅಬ್ದುಲ್ ಆರ್. ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಹಜ್ ಯಾತ್ರೆಯ ಪವಿತ್ರ ವಿಧಿವಿಧಾನಗಳ ಬಗ್ಗೆ ಸಿರಾಜುದ್ದೀನ್ ಫೈಝಿ ಬಪ್ಪಲಿಗೆ ತರಬೇತಿ ನೀಡಿದರು.
ವೇದಿಕೆಯಲ್ಲಿ ಅನ್ಸಾರುಲ್ ಮುಸ್ಲಿಂ ಅಸೋಸಿಯೇಶನ್ (ರಿ.)ನ ಅಧ್ಯಕ್ಷ ಅಬ್ದುಲ್ ಲತೀಫ್ ಯಾಸೀನ್, ಬದ್ರಿಯಾ ಜುಮಾ ಮಸ್ಜಿದ್‌ನ ಗೌರವ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಉಪಾಧ್ಯಕ್ಷ ಅಬುಸ್ವಾಲಿ, ದೇರಳಕಟ್ಟೆ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿದ್ದೀಕ್ ಡಿ.ಎಂ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ಮುತಾಲಿಬ್ ಹಾಗು ಮತ್ತಿತರರು ಉಪಸ್ಥಿತರಿದ್ದರು.
ಬದ್ರಿಯಾ ಜುಮಾ ಮಸ್ಜಿದ್‌ನ ಪ್ರಧಾನ ಕಾರ್ಯದರ್ಶಿ ರಶೀದ್ ಡಿ.ಎಂ ಸ್ವಾಗತಿಸಿದರು. ಅನ್ಸಾರುಲ್ ಮುಸ್ತಿಮೀನ್ ಅಸೋಸಿಯೇಶನ್ ಜೊತೆ ಕಾರ್ಯದರ್ಶಿ ಶಿಹಾಬುದ್ದೀನ್ ದೇರಳಕಟ್ಟೆ ವಂದಿಸಿದರು.

