ಕೊಣಾಜೆ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.), ಗ್ರಾಮಚಾವಡಿ ಕೊಣಾಜೆ ವತಿಯಿಂದ ಭಕ್ತರಿಗಾಗಿ ಶಿರಡಿ ಪ್ರವಾಸವನ್ನು ಆಯೋಜಿಸಲಾಗಿದೆ.

ಪ್ರವಾಸವು ಏಪ್ರಿಲ್ 24ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಗ್ರಾಮಚಾವಡಿ ಶ್ರೀ ಗುರು ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಡುವುದು. 25ರಂದು ಪಂಡರಪುರ ತಲುಪಿ, ಶ್ರೀ ಕ್ಷೇತ್ರ ಪಂಡರಪುರ ಹಾಗೂ ಶ್ರೀಕ್ಷೇತ್ರ ಶನಿಸಿಂಗಾಣುಪುರಗಳ ದರ್ಶನಗೈದು ಸಂಜೆ ಶಿರ್ಡಿಯಲ್ಲಿ ತಂಗುವುದು.
26ರಂದು ಶ್ರೀ ಕ್ಷೇತ್ರ ಶಿರ್ಡಿ ಸಾಯಿಬಾಬಾ, ತ್ರೆöÊಂಬಕೇಶ್ವರ ದೇವಸ್ಥಾನ ಹಾಗೂ ಪಂಚವಟಿಯ ದೇವಸ್ಥಾನಗಳ ದರ್ಶನಗೈದು ಸಂಜೆ ಮಿನಿ ತಿರುಪತಿಯಲ್ಲಿ ತಂಗುವುದು.
27ರಂದು ಬೆಳಿಗ್ಗೆ ಮಿನಿತಿರುಪತಿ ಹಾಗೂ ಕೋಲಾಪುರ ಮಹಾಲಕ್ಷಿö್ಮÃ ದೇವಸ್ಥಾನಗಳ ದರ್ಶನ ಮಾಡಿ ಹೊರಡುವುದು.
28ರಂದು ಬೆಳಿಗ್ಗೆ ಗ್ರಾಮಚಾವಡಿಯ ಶ್ರೀ ಗುರು ಸಾನಿಧ್ಯಕ್ಕೆ ತಲುಪುವುದು.
ಪ್ರವಾಸದ ಶುಲ್ಕವು ವಯಸ್ಕರಿಗೆ ರೂ.8000, 5ರಿಂದ 7 ವರ್ಷ ವಯಸ್ಸಿನ ಮಕ್ಕಳಿಗೆ ರೂ. 6000 ಮತ್ತು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ರೂ. 4000 ಎಂದು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8970343505 ಮತ್ತು 9844823686 ಸಂಖ್ಯೆಯನ್ನು ಸಂಪರ್ಕಿಸಬಹುದು.

