ಕುತ್ತಾರು; ನಿಷ್ಠೆ ಹಾಗು ಪ್ರೀತಿ ತೋರುವಲ್ಲಿ ಶ್ವಾನ ಯಾವತ್ತಿಗೂ ಮುಂಚೂಣಿಯಲ್ಲಿರುತ್ತದೆ. ಇದಕ್ಕೆ ಸಾಕ್ಷಿಯೆಂಬAತೆ ನಾಗುರಿ ನಿವಾಸಿ ಕುಟುಂಬದ ಸಾಕು ನಾಯಿಯೊಂದು ಭಕ್ತಿಭಾವದಿಂದ ನಡೆದ ಪಾದಯಾತ್ರೆಯಲ್ಲಿ ವಿಶೇಷ ಗಮನ ಸೆಳೆಯಿತು.

ULLALAVANI NEWS
ಕದ್ರಿ ದೇವಸ್ಥಾನದಿಂದ ಆರಂಭವಾದ ಈ ಪಾದಯಾತ್ರೆಯಲ್ಲಿ, ದೆಕ್ಕಾಡು ಕೊರಗಜ್ಜನ ಆದಿಕ್ಷೇತ್ರದವರೆಗೂ ನಾಯಿ ತನ್ನ ಮನೆಯವರೊಂದಿಗೆ ಒಂದೇ ತರಹದ ಉತ್ಸಾಹ ಮತ್ತು ನಿಷ್ಠೆಯಿಂದ ಹೆಜ್ಜೆ ಹಾಕಿರುವುದು ಎಲ್ಲರಗಮನಸೆಳೆಯಿತು. ಪಾದಯಾತ್ರೆಯು ಹಲವು ಕಿಲೋಮೀಟರ್ಗಳ ದೂರವನ್ನು ಒಳಗೊಂಡಿದ್ದರೂ, ನಾಯಿ ಯಾವುದೇ ಆಯಾಸವಿಲ್ಲದೆ ತನ್ನ ಯಜಮಾನರ ಹಿಂದೆ ಹಿಂದೆ ನಡೆದು ಬಂದಿತು. ಕೆಲವೆಡೆ ಭಕ್ತರು ವಿಶ್ರಾಂತಿ ಪಡೆಯುವಾಗ ಅದು ಕೂಡ ಶಾಂತವಾಗಿ ಕುಳಿತುಕೊಂಡು, ಮತ್ತೆ ಪ್ರಯಾಣ ಆರಂಭವಾದಾಗ ತಕ್ಷಣವೇ ಎದ್ದು ಜೊತೆಯಾದುದು ವಿಶೇಷವಾಗಿತ್ತು. ಈ ದೃಶ್ಯವನ್ನು ಕಂಡ ಇತರ ಪಾದಯಾತ್ರಿಗಳು ನಾಯಿಯ ನಿಷ್ಠೆ ಮತ್ತು ಕುಟುಂಬದ ಮೇಲಿನ ಅದರ ಪ್ರೀತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಘಟನೆಗಳು ಮಾನವ-ಪ್ರಾಣಿಗಳ ನಡುವಿನ ಆಪ್ತ ಬಾಂಧವ್ಯವನ್ನು ತೋರಿಸುವುದರ ಜೊತೆಗೆ, ಭಕ್ತಿ ಮತ್ತು ನಿಷ್ಠೆ ಎಂಬ ಮೌಲ್ಯಗಳು ಜೀವಿಗಳಲ್ಲಿಯೂ ಒಂದೇ ರೀತಿಯಲ್ಲಿ ವ್ಯಕ್ತವಾಗುತ್ತವೆ ಎಂಬುದಕ್ಕೆ ಉದಾಹರಣೆಯಾಗಿದೆ. ಈ ಸಾಕು ನಾಯಿ ಪಾದಯಾತ್ರೆಯ ಪೂರ್ಣ ಅವಧಿಯಲ್ಲಿ ತನ್ನ ಮನೆಯವರೊಂದಿಗೆ ನಡೆದು ಬಂದದ್ದು, ಕಾರ್ಯಕ್ರಮಕ್ಕೆ ಇನ್ನಷ್ಟು ವಿಶೇಷತೆ ಮತ್ತು ಮನಮುಟ್ಟುವ ಅರ್ಥವನ್ನು ನೀಡಿತು.

