ಉಳ್ಳಾಲ: ಕೋಟೆಕಾರ್ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಹಿದಾಯತ್ ನಗರ ಇದರ ಪ್ರಾರಂಭೋತ್ಸವ ಕಾರ್ಯಕ್ರಮ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಅಧ್ಯಕ್ಷತೆಯಲ್ಲಿ ಜರಗಿತು.

ಮದರಸಕ್ಕೆ ಆಗಮಿಸಿದ ಮಕ್ಕಳನ್ನು ಆಧರದಿಂದ ಬರ ಮಾಡಿಕೊಳ್ಳಲಾಯಿತು. ಮಖ್ಯೋಪದ್ಯಾಯ ಅಬ್ದುಲ್ ನಯೀಮಿ ಲೌಕಿಕ ಶಿಕ್ಷಣದೊಂದಿಗೆ ಬೌಧಿಕ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು ಕಾರ್ಯಕ್ರಮದಲ್ಲಿ ಮಸೀದಿ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಕಾದರ್, ಮುಅಲ್ಲಿಂ ಫಾರೂಕ್ ಸಅದಿ ಕೊಮರಂಗಳ, ಝುಬೈರ್ ಝುಹ್ರಿ, ಹಾಗೂ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.
ಮದರಸ ವಿಧ್ಯಾರ್ಥಿ ಗಳಿಗೆ ಸಿಹಿ ಹಂಚಲಾಯಿತು ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿ ಎಚ್ ವಂದಿಸಿದರು.

