ಕೋಟಿಪದವು; ಕೋಟಿಪದವು ಗ್ರಾಮದ ಶ್ರೀರಾಮ ಭಜನಾ ಮಂದಿರ (ರಿ.) ಇದರ ವತಿಯಿಂದ ಶ್ರೀ ರಾಮನವಮಿ ಉತ್ಸವದ ಅಂಗವಾಗಿ, ದಕ್ಷ ಯುವ ಬಳಗ (ರಿ.) ಗ್ರಾಮಚಾವಡಿ ಇವರ ಸಹಯೋಗದಲ್ಲಿ ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.

ರಾಮನವಮಿ ಹಬ್ಬದಂದು ಬೆಳಿಗ್ಗೆ 6.20 ಗಂಟೆಗೆ ಏಕಹ ಭಜನೆಯ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಅಶಕ್ತ ಮತ್ತು ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ, ಹಾಗು ಭಜನಾ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕೀರ್ತನ ಸಂಪುಟ ಜನಜನಿತ ಭಜನೆಗಳ ಉಪಯುಕ್ತ ಸಂಗ್ರಹ ಎಂಬ ಪುಸ್ತಕವನ್ನು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸುರೇಂದ್ರ ರೈ, ಭಾರತಿ ಎಸ್ ರೈ, ವಿಜೇತ್ ಫಜೀರು, ಸುಂದರ ಕೋಟ್ಯಾನ್, ದಿನೇಶ್ ಮಾಯಿಲೋಡಿ, ಸುರೇಶ್ ಆಚಾರ್ಯ, ಹೊನ್ನಪ್ಪ ಕುಲಾಲ್, ಡಾ!ನವೀನ್ ಎನ್ ಕೊಣಾಜೆ ಕೃಷ್ಣಪ್ರಸಾದ್, ವಿಶ್ವನಾಥಗಟ್ಟಿ ರಾಜೇಶ್ ಬೋಸ್ತುಕೋಡಿ, ಸೀತಾರಾಮ ಸಣ್ಣಪದವು, ನಾರಾಯಣ ಟೈಲರ್, ಚಂದ್ರಹಾಸ ಬೆಲ್ಚಡ, ವರದರಾಜ್ ಬೊಳ್ಳೆಕುಮೆರ್, ಮಂದಿರದ ಪದಾಧಿಕಾರಿಗಳು ಹಾಗು ಸದಸ್ಯರುಗಳು ಉಪಸ್ಥಿತರಿದ್ದರು.

