ಉಳ್ಳಾಲ : ಬ್ರಹ್ಮಶ್ರೀ ಬಿಲ್ಲವ ವೇದಿಕೆ ರಿ. ತೊಕ್ಕೊಟ್ಟು ಇದರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಪಜೀರು ಗೋವನಿತಾಶ್ರಯದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯರಾದ ಹರಿಣಾಕ್ಷಿ ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಪಟು ಡಾ.ಶಿಲ್ಪ ಶ್ರೀ ಕುಂಪಲ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಿಲ್ಲವ ಸಂಘದ ಅಧ್ಯಕ್ಷರಾದ ಕೆ.ಟಿ. ಸುವರ್ಣ ನೆರವೇರಿಸಿ ಮಾತನಾಡುತ್ತಾ
ಇಂದು ಮಹಿಳೆಯರ ಸಾಧನೆ ಎಲ್ಲಾ ಕ್ಷೇತ್ರ ಗಳಲ್ಲೂ ಗಮನ ಸೆಳೆಯುತ್ತಿದೆ. ಗೃಹಿಣಿಯಾಗಿ ತಾಯಿಯಾಗಿ ,ಶಿಕ್ಷಕಿಯಾಗಿ, ಮನೆಬೆಳಗುವ ಮಾತೆಯರೇ ಮಕ್ಕಳ ಸಂಸ್ಕಾರಯುತ ಬದುಕಿಗೆ ಅಡಿಪಾಯ ವಾಗುತ್ತಾಳೆ ಎಂದರು.
ಮಹಿಳಾ ವೇದಿಕೆಯ ಅಧ್ಯಕ್ಷೆ ಗಂಗಾ ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದಿನೇಶ್ ಅತ್ತಾವರ, ಯೋಗಿನಿ ಕೆ. ಟಿ.ಸುವರ್ಣ, ಆನಂದ ಅಸೈಗೋಳಿ ಹಾಗೂ ಸುರೇಖಾ ಎಚ್.ಎಸ್. ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಪಜೀರು ಗೋವನಿತಾಶ್ರಯದಲ್ಲಿ ಗೋಪೂಜೆ ನೆರವೇರಿಸಿ, ಗೋಗ್ರಾಸ ನೀಡಲಾಯಿತು.
ಶಮ್ಮಿ ಎಸ್. ಕರ್ಕೇರ ಸ್ವಾಗತಿಸಿದರು. ಪೂರ್ಣಿಮಾ ಎ.ಜೆ. ಶೇಖರ್ ಹಾಗೂ ಸುನೀತಾ ಬೆಳ್ಮ ಅವರು ಅಭಿನಂದನಾ ಪತ್ರ ವಾಚಿಸಿದರು. ಮಹಿಳಾ ದಿನಾಚರಣೆಯ ಮಹತ್ವದ ಕುರಿತು ಸುರೇಖಾ ಎಚ್.ಎಸ್. ಪೂಜಾರಿ ಉಪನ್ಯಾಸ ನೀಡಿದರು.
ವಿನೀತಾ ಮೋಹನ್ ದಾಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಯಶೋಧಾ ಅಂಬಲಮೊಗರು ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಗೋವನಿತಾಶ್ರಯಕ್ಕೆ ಹತ್ತು ಸಾವಿರ ರೂ.ಗಳ ಸಹಾಯಧನವನ್ನು ಗೋವನಿತಾಶ್ರಯದ ಮೇಲ್ವಿಚಾರಕಿ ವಂದನಾ ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಲಾಯಿತು.

