Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಅಂತರರಾಷ್ಟ್ರೀಯ ನರವಿಜ್ಞಾನ ರೋಗನಿರೋಧಕ ಕಾರ್ಯಾಗಾರ

UllalaVaniBy UllalaVaniMarch 9, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ: ಭಾರತದಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್ ಸೇರಿದಂತೆ ಕೆಲವು ನರವಿಜ್ಞಾನ ರೋಗಗಳು ಇಂದಿನ ದಿನಗಳಲ್ಲಿ ಯುವಕರಲ್ಲಿಯೂ ಕಂಡುಬರುತ್ತಿವೆ. ಎಲ್ಲ ವಯೋಮಾನದವರಲ್ಲೂ ಈ ರೋಗಗಳ ಪರಿಣಾಮ ಕಾಣಿಸುತ್ತಿದ್ದು, ಜನ್ಯ ಕಾರಣಗಳು ಸಹಿತ ಬೇರೆ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ರೋಗದ ಸ್ವರೂಪವನ್ನು ಬದಲಿಸುವ ಚಿಕಿತ್ಸೆಯ ಕುರಿತು ಸಂಶೋಧನೆಗಳು ನಿರಂತರವಾಗಿದೆ ಎಂದು ಕೇರಳದ ಏಸ್ಟರ್‌ ಕ್ಲಸ್ಟರ್‌ ಇದರ ಪಾರ್ಕಿನ್ಸನ್ಸ್‌ ಆಂಡ್‌ ಮೂವ್‌ ಮೆಂಟ್‌ ಡಿಸಾರ್ಡರ್ಸ್‌ ಸೆಂಟರ್‌ ನಿರ್ದೇಶಕಿ ಡಾ. ಆಶಾ ಕಿಶೋರ್ ಅಭಿಪ್ರಾಯಪಟ್ಟರು.

ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ)ಗೆ ಸೇರಿದ ಕೆ. ಎಸ್. ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಉನ್ನತ ನರವಿಜ್ಞಾನ ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾದ ಅಂತರರಾಷ್ಟ್ರೀಯ ನರವಿಜ್ಞಾನ ರೋಗನಿರೋಧಕ ಕಾರ್ಯಾಗಾರವನ್ನು ದೇರಳಕಟ್ಟೆ ಎ.ಬಿ ಶೆಟ್ಟಿ ಮಹಾವಿದ್ಯಾಲಯದ ಆವಿಷ್ಕಾರ್‌ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ನರವಿಜ್ಞಾನ ರೋಗಗಳನ್ನು ಗುರುತಿಸಲು ಈಗ ಕ್ಲಿನಿಕಲ್ ಪರೀಕ್ಷೆಗಳ ಜೊತೆಗೆ ಸಿ.ಟಿ. ಸ್ಕ್ಯಾನ್, ಬಯೋಗ್ರಾಂ ಸೇರಿದಂತೆ ಹಲವು ಆಧುನಿಕ ವಿಧಾನಗಳನ್ನು ಬಳಸಲಾಗುತ್ತಿದೆ. ಕೇವಲ ಸ್ಟಿರಾಯ್ಡ್ ಚಿಕಿತ್ಸೆಗಿಂತ ಮುಂದಾಗಿ ಹಲವು ಹೊಸ ಚಿಕಿತ್ಸೆ ವಿಧಾನಗಳು ಅಭಿವೃದ್ಧಿಯಾಗಿವೆ. ಇಂತಹ ರೋಗಗಳಿಗೆ ದೀರ್ಘಾವಧಿಯ ಚಿಕಿತ್ಸೆ ಮತ್ತು ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯ. ಚಿಕಿತ್ಸೆಯ ವೇಳೆ ಬರುವ ಅಡ್ಡ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ನೀಡುವುದು ಪ್ರಮುಖ ಸವಾಲಾಗಿದೆ. ನರವಿಜ್ಞಾನ ಕ್ಷೇತ್ರದಲ್ಲಿ ಹೊಸ ತಲೆಮಾರಿನ ಸಂಶೋಧನೆಗಳು ನಡೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಅನುವಾದಾತ್ಮಕ ಸಂಶೋಧನೆಗಳ ಮೂಲಕ ಉತ್ತಮ ಚಿಕಿತ್ಸೆ ವಿಧಾನಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ನರವಿಜ್ಞಾನ ಸಂಬಂಧಿತ ರೋಗಗಳನ್ನು ಗುರುತಿಸುವುದು ಹಾಗೂ ಚಿಕಿತ್ಸೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹತ್ತರ ಮತ್ತು ರೂಪಾಂತರಕಾರಿ ಬದಲಾವಣೆಗಳು ಕಂಡುಬಂದಿವೆ. ಈ ಕ್ಷೇತ್ರದಲ್ಲಿ ವೈದ್ಯರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಿದ್ಧತೆಯೊಂದಿಗೆ ಮುಂದಿನ ದಿನಗಳಲ್ಲಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ ಉಪಕುಲಪತಿ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ ವಹಿಸಿ ಮಾತನಾಡಿ,ನಿಟ್ಟೆ ವಿ.ವಿಯಲ್ಲಿ ಸಂಶೋಧನಾ ವ್ಯವಸ್ಥೆ ಸಾಮಾನ್ಯ ಶಿಕ್ಷಣ ಪದ್ಧತಿಯಿಂದ ಭಿನ್ನವಾಗಿದ್ದು, ಸಂಶೋಧನೆ ಮತ್ತು ವಿಸ್ತರಣಾ ಸೇವೆಗಳು ಸಮಾಜದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತವೆ. ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳು ವೈದ್ಯಕೀಯ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತವೆ. ಶಿಕ್ಷಣದ ಜೊತೆಗೆ ಸಮಾಜಮುಖಿ ಚಟುವಟಿಕೆಗಳನ್ನು ಒಳಗೊಂಡ ವಿಸ್ತರಣಾ ಸೇವೆಗಳೂ ಮಹತ್ವದ ಪಾತ್ರವಹಿಸುತ್ತವೆ. ಮುಂದಿನ ವರ್ಷ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಪರಿಣಾಮಕಾರಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ಅವರು ತಿಳಿಸಿದರು. ಇದರಿಂದ ಸಂಶೋಧನೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಗೌರವ ಅತಿಥಿಗಳಾಗಿ ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿಯ ಕುಲಸಚಿವರಾದ ಡಾ. ಹರ್ಷ ಹಲಹಳ್ಳಿ, ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌ ಪರಿವೀಕ್ಷಕ ಇಮ್ಮಾದ್‌ ಮೊಹಮ್ಮದ್‌ ಇಸ್ಮಾಯಿಲ್‌ ಉಪಸ್ಥಿತರಿದ್ದರು.

ಕೆ. ಎಸ್. ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಉನ್ನತ ನರವಿಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ ಲೇಖಾ ಪಂಡಿತ್‌ ಸ್ವಾಗತಿಸಿದರು. ಡಾ. ಅಲೆಕ್ಸಾಂಡರ್ ಲೋಬೋ ಮತ್ತು ಡಾ. ಸುಹಾನ್ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಡೀನ್‌ ಡಾ. ಸಂದೀಪ್ ರೈ ವಂದಿಸಿದರು.

ʻಅಂತರರಾಷ್ಟ್ರೀಯ ಕ್ಲಿನಿಕಲ್ ನ್ಯೂರೋಇಮ್ಯುನಾಲಜಿ ಕಾರ್ಯಾಗಾರಕ್ಕೆ ಆರಂಭದಲ್ಲಿ ಸುಮಾರು 50 ರಿಂದ 75 ಜನರು ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ ವೈದ್ಯರು ಮತ್ತು ಸಂಶೋಧಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಈಗಾಗಲೇ 175ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.ನರವಿಜ್ಞಾನ ಹಾಗೂ ರೋಗನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ಇತ್ತೀಚಿನ ಸಂಶೋಧನೆಗಳು, ರೋಗಗಳ ಗುರುತಿಸುವಿಕೆ ಮತ್ತು ಚಿಕಿತ್ಸೆಯ ಹೊಸ ವಿಧಾನಗಳ ಕುರಿತು ತಜ್ಞರಿಂದ ಉಪನ್ಯಾಸಗಳು ಹಾಗೂ ಚರ್ಚೆಗಳು ನಡೆಯಲಿವೆ. ವೈದ್ಯರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ನರವಿಜ್ಞಾನ ಕ್ಷೇತ್ರದ ಹೊಸ ಜ್ಞಾನವನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಲಿದೆʼ
ಡಾ ಲೇಖಾ ಪಂಡಿತ್‌
ನಿರ್ದೇಶಕರು
ಕೆ. ಎಸ್. ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ
ಉನ್ನತ ನರವಿಜ್ಞಾನ ಸಂಶೋಧನಾ ಕೇಂದ್ರ

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮಾ.12 ಕೆ ಸಿ ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ಧ್ಸಿಕ್ರ್ ಹಲ್ಕಾ ಪ್ರಾರ್ಥನಾ ಮಜ್ಲಿಸ್

March 9, 2026

ತೊಕ್ಕೊಟ್ಟಿನಲ್ಲಿ ಅನ್ವಿತ್ ಎಲೆಕ್ಟ್ರಾನಿಕ್ಸ್ ನವೀಕೃತ ಮಳಿಗೆ ಉದ್ಘಾಟನೆ

March 9, 2026

ಎ.ಸಿ ಫಿಟಿಂಗ್ ವೇಳೆ ಆಯ ತಪ್ಪಿಬಿದ್ದ ತಲಪಾಡಿ ನಿವಾಸಿ ಹರ್ಷಿತ್ ಸಾವು..!!

March 9, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಮಾ.12 ಕೆ ಸಿ ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ಧ್ಸಿಕ್ರ್ ಹಲ್ಕಾ ಪ್ರಾರ್ಥನಾ ಮಜ್ಲಿಸ್

By UllalaVaniMarch 9, 20260

ಉಳ್ಳಾಲ: ಕೋಟೆಕಾರ್ ಕೆ ಸಿ ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ಮಾರ್ಚ್ 12 ಗುರುವಾರ ರಾತ್ರಿ ತರಾವೀಹ್ ನಮಾಝ್…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಅಂತರರಾಷ್ಟ್ರೀಯ ನರವಿಜ್ಞಾನ ರೋಗನಿರೋಧಕ ಕಾರ್ಯಾಗಾರ

March 9, 2026

ತೊಕ್ಕೊಟ್ಟಿನಲ್ಲಿ ಅನ್ವಿತ್ ಎಲೆಕ್ಟ್ರಾನಿಕ್ಸ್ ನವೀಕೃತ ಮಳಿಗೆ ಉದ್ಘಾಟನೆ

March 9, 2026

ಎ.ಸಿ ಫಿಟಿಂಗ್ ವೇಳೆ ಆಯ ತಪ್ಪಿಬಿದ್ದ ತಲಪಾಡಿ ನಿವಾಸಿ ಹರ್ಷಿತ್ ಸಾವು..!!

March 9, 2026
1 2 3 … 1,826 Next
Automatic YouTube Gallery

ದೇರಳಕಟ್ಟೆ;ಅಂತರರಾಷ್ಟ್ರೀಯ ನರವಿಜ್ಞಾನ ರೋಗ ನಿರೋಧಕ ಕಾರ್ಯಾಗಾರ

ಕೆ.ಎಸ್.ಹೆಗ್ಡೆ ಮಹಾವಿದ್ಯಾಲಯದ ಉನ್ನತ ನರವಿಜ್ಞಾನ ಸಂಶೋಧನಾ ಕೇಂದ್ರದ ವತಿಯಿಂದ ;ಅಂತರರಾಷ್ಟ್ರೀಯ ನರವಿಜ್ಞಾನ ರೋಗನಿರೋಧಕ ಕಾರ್ಯಾಗಾರ

ದೇರಳಕಟ್ಟೆ ಎ.ಬಿ ಶೆಟ್ಟಿ ಆವಿಷ್ಕಾರ್ ಸಭಾಂಗಣದಲ್ಲಿ ಆಯೋಜನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #Nitte #Confrence #Deralakatte #Hospital #Education
Show More
ದೇರಳಕಟ್ಟೆ;ಅಂತರರಾಷ್ಟ್ರೀಯ ನರವಿಜ್ಞಾನ ರೋಗ ನಿರೋಧಕ ಕಾರ್ಯಾಗಾರ
Now Playing
ದೇರಳಕಟ್ಟೆ;ಅಂತರರಾಷ್ಟ್ರೀಯ ನರವಿಜ್ಞಾನ ರೋಗ ನಿರೋಧಕ ಕಾರ್ಯಾಗಾರ
ಕೆ.ಎಸ್.ಹೆಗ್ಡೆ ಮಹಾವಿದ್ಯಾಲಯದ ಉನ್ನತ ನರವಿಜ್ಞಾನ ಸಂಶೋಧನಾ ಕೇಂದ್ರದ ವತಿಯಿಂದ ...
ಕೆ.ಎಸ್.ಹೆಗ್ಡೆ ಮಹಾವಿದ್ಯಾಲಯದ ಉನ್ನತ ನರವಿಜ್ಞಾನ ಸಂಶೋಧನಾ ಕೇಂದ್ರದ ವತಿಯಿಂದ ;ಅಂತರರಾಷ್ಟ್ರೀಯ ನರವಿಜ್ಞಾನ ರೋಗನಿರೋಧಕ ಕಾರ್ಯಾಗಾರ

ದೇರಳಕಟ್ಟೆ ಎ.ಬಿ ಶೆಟ್ಟಿ ಆವಿಷ್ಕಾರ್ ಸಭಾಂಗಣದಲ್ಲಿ ಆಯೋಜನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #Nitte #Confrence #Deralakatte #Hospital #Education
Show More
ಬೆಳ್ಮ ಪೆಲತ್ತಡಿಯ ಆಶ್ರಮವಾಸಿಗಳ ಜತೆಗೆ `ಟೈಲರ್ಸ್ ಡೇ' ದಿನ ಆಚರಣೆ
Now Playing
ಬೆಳ್ಮ ಪೆಲತ್ತಡಿಯ ಆಶ್ರಮವಾಸಿಗಳ ಜತೆಗೆ `ಟೈಲರ್ಸ್ ಡೇ' ದಿನ ಆಚರಣೆ
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಗಳಾದೇವಿ ವಲಯದ ವತಿಯಿಂದ;ಬೆಳ್ಮ ...
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಗಳಾದೇವಿ ವಲಯದ ವತಿಯಿಂದ;ಬೆಳ್ಮ ಪೆಲತ್ತಡಿಯ ಆಶ್ರಮವಾಸಿಗಳ ಜತೆಗೆ ಟೈಲರ್ಸ್ ಡೇ ದಿನ ಆಚರಣೆ

ಮಂಗಳಾದೇವಿ ವಲಯದ ಸದಸ್ಯರ ಜೊತೆ ಸಂಭ್ರಮಿಸಿದ ಹಿರಿಜೀವಗಳು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #tailorsassociation #Mangaladevi
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d