ಉಳ್ಳಾಲ; ಅರಣ್ಯಾಧಿಕಾರಿ ವಾಸಿಸುತ್ತಿದ್ದ ಬಾಡಿಗೆ ಮನೆಯಿಂದ 181ಗ್ರಾಂ ಚಿನ್ನ, ಹತ್ತೂವರೆ ಲಕ್ಷ ನಗದು ಸೇರಿದಂತೆ ಬೈಕ್ ಕಳವುಗೈದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಂಬಿಕಾರೋಡ್,ಕಾಪಿಕಾಡು ಎಂಬಲ್ಲಿ ನಡೆದಿದೆ.

ullalavani news
ಕೋಟೆಕಾರು ಉಪವಲಯ ಅರಣ್ಯಾಧಿಕಾರಿ ಮೆಹಬೂಬ್ ಸಾಬ್ ಗುಡಿಹೊಲ ಅವರ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಅರಣ್ಯಾಧಿಕಾರಿ ಮೆಹಬೂಬ್ ಸಾಬ್(35) ಅವರು ತನ್ನ ಪತ್ನಿ ಫರ್ಝಾನ ಮೆಹಬೂಬ್ ಮತ್ತು ಪುಟ್ಟ ಮಗುವಿನೊಂದಿಗೆ ಕಾಪಿಕಾಡುವಿನ ಬಾಡಿಗೆ ಮನೆಯಲ್ಲಿ ಕಳೆದ ಆರು ತಿಂಗಳುಗಳಿAದ ವಾಸವಿದ್ದರು.ಕಳೆದ ಶುಕ್ರವಾರ ಮಧ್ಯಾಹ್ನದಂದು ಮೆಹಬೂಬ್ ಅವರು ಕುಟುಂಬದೊAದಿಗೆ ತನ್ನ ಊರು ಕೊಪ್ಪಳಕ್ಕೆ ತೆರಳಿದ್ದರು. ಇಂದು ಬೆಳಿಗ್ಗೆ ಒಂಭತ್ತು ಗಂಟೆ ವೇಳೆಗೆ ಮೆಹಬೂಬ್ ಅವರು ತನ್ನ ಕುಟುಂಬ ಸಮೇತ ಕಾಪಿಕಾಡುವಿನ ಮನೆಗೆ ವಾಪಸಾದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯೊಳಗೆ ನುಗ್ಗಿದ ಕಳ್ಳರು ಹಾಲ್ ಮತ್ತು ಎರಡು ಕೋಣೆಯೊಳಗಿನ ಕಪಾಟು ಹುಡುಕಾಡಿ, ಲಾಕರ್ ಗಳಲ್ಲಿದ್ದ 181 ಗ್ರಾಂ ಚಿನ್ನ, ಮಗುವಿನ ಬೆಳ್ಳಿಯ ಆಭರಣಗಳು ಹಾಗೂ ಮೆಹಬೂಬ್ ಅವರು ಬ್ಯಾಂಕಿAದ ಸಾಲ ಪಡೆದಿದ್ದ ಹತ್ತೂವರೆ ಲಕ್ಷ ರೂಪಾಯಿ ನಗದು ಕಳವು ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳವು ನಡೆದ ಮನೆಯ ಸಮೀಪ ಸಿಸಿಟಿವಿಗಳಿಲ್ಲ, ಕೆಲ ವರ್ಷಗಳ ಹಿಂದಷ್ಟೇ ಕೃತ್ಯ ನಡೆದ ಮನೆ ಸಮೀಪದಲ್ಲೇ ಕಳವು ನಡೆದಿತ್ತು.

