ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಎಲಿಮಲೆ: ದೇರಳಕಟ್ಟೆಯ ನಿಟ್ಟೆ ವಿಶ್ವ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ತೇಜಸ್ವಿನಿ ಆಸ್ಪತ್ರೆ ರಕ್ತನಿಧಿ ಮಂಗಳೂರು ಇವರ ಸಹಕಾರದೊಂದಿಗೆ ಮುಳ್ಳೇರಿಯಾ ಹವ್ಯಕ ಮಂಡಲ ಗುತ್ತಿಗಾರು ವಲಯ ಪರಿಷತ್ ನೆಲ್ಲೂರು ಕೆಮ್ರಾಜೆ ಫ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ. ಮಿತ್ತ ಮಂಡಳಿ ಎಲಿಮಲೆ, ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆ ಇದರ ಆಶ್ರಯದಲ್ಲಿ ರಕ್ತದಾನ ಶಿಬಿರ ಎಲಿಮಲೆಯ ಜ್ಞಾನದೀಪ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಞಾನದೀಪ ಶಾಲೆಯ ಅಧ್ಯಕ್ಷ ಚಂದ್ರಶೇಖರ ತಳೂರು ಉದ್ಘಾಟಿಸಿದರು.
ಈ ಸಂದರ್ಭ ನೆಲ್ಲೂರು ಕೆಮ್ರಾಜಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಗುಡ್ಡದ ಮನೆ, ಗುತ್ತಿಗಾರು ವಲಯ ಹವ್ಯಕ ಪರಿಷತ್ ಇದರ ಆರೋಗ್ಯ ಸಂಚಾಲಕ ರಮೇಶ್ ದೇಲಂಪಾಡಿ ಮತ್ತು ನಿಟ್ಟೆ ವಿಶ್ವ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯ ಸಂಘಟನಾಧಿಕಾರಿ ಡಾ. ಮುರಲೀ ಮೋಹನ್ ಚೂಂತಾರು ಉಪಸ್ಥಿತಿರಿದ್ದರು.
ಸುಮಾರು 50 ಮಂದಿ ರಕ್ತದಾನ ಮಾಡಿದರು. ಸುಬ್ರಮ್ಮಣ್ಯ ಭಟ್ ಕಾರ್ಯಕ್ರಮ ನಿರ್ವಹಿಸಿದರು.




