ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಸಂಕೊಳಿಗೆ : ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಬೈಕ್‍ನಲ್ಲಿ ಬಂದ ಆಗಂತುಕರಿಬ್ಬರು ಸರ ಎಳೆದು ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಸಂಕೊಳಿಗೆ ಬಳಿ ನಡೆದಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗನವಾಡಿ ಶಿಕ್ಷಕಿಯಾಗಿರುವ ಉಚ್ಚಿಲ ಸಂಕೊಳಿಗೆ ನಿವಾಸಿ ಪುಷ್ಪಲತಾ ಎಂಬವರ ಸರವನ್ನು ಸೆಳೆದು ಪರಾರಿಯಾಗಿದ್ದು, ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಆಗಂತುಕರು ಈ ಕೃತ್ಯವನ್ನು ನಡೆದಿದೆ. ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


