ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಚ್ಚಿಲ: ಸೋಮೇಶ್ವರ ನ್ಯೂ ಉಚ್ಚಿಲದಲ್ಲಿರುವ ವೃಂದಾವನದಲ್ಲಿ ಕೋಟಿ ಚೆನ್ನಯರಿಗೆ `ಪನಿಯರ ಪರ್ವ ಸೇವೆ’ ಸೆ. 22ರಂದು ರಾತ್ರಿ 8.30ಕ್ಕೆ ನಡೆಯಲಿದೆ.
ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತಿಲ್‍ನಲ್ಲಿ ಶ್ರೀ ಜೀವನ್ ಗುರೂಜಿ ಅವರು ಇಟ್ಟ ದೃಶ್ಯಾಂಜನ ಪ್ರಶ್ನೆಯಲ್ಲಿ ಕಂಡು ಬಂದ ಹಿನ್ನಲೆಯಲ್ಲಿ ಕೋಟಿ ಚೆನ್ನಯರ ಹುಟ್ಟು 22-9-1556ರಂದು ಆಗಿದ್ದು, ಈ ಹಿನ್ನಲೆಯಲ್ಲಿ ಸ್ವರ್ಣ ಕೇದಗೆ ಕೋಟಿ-ಚೆನ್ನಯ ಪ್ರತಿಷ್ಠಾನ ನ್ಯೂ ಉಚ್ಚಿಲದಲ್ಲಿ ಪನಿಯಾರ ಪರ್ವ ಸೇವೆಯನ್ನು ಹಮ್ಮಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ


