Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
suddi

ಮಗಳನ್ನು ಬಲಿ ಪಡೆದ ಬಸ್ಸಿನಲ್ಲೇ ಇದ್ದ ತಾಯಿ..! ಮನಕಲಕುವ ಘಟನೆ ಮಂಗಳೂರಿನಲ್ಲಿ….

UllalaVaniBy UllalaVaniFebruary 6, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು, ಫೆ. 06: ನಗರದ ನಂತೂರು ಬಸ್ ನಿಲ್ದಾಣದ ಸಮೀಪ ಬುಧವಾರ ರಾತ್ರಿ ಸಂಭವಿಸಿದ ಹೃದಯ ವಿದ್ರಾವಕ ಅಪಘಾತದಲ್ಲಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ದೀಪ್ತಿ (24) ಎಂಬ ಯುವತಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ದುರ್ಘಟನೆಯ ಅತ್ಯಂತ ನೋವಿನ ಅಂಶವೆಂದರೆ, ಸ್ಕೂಟರ್‌ಗೆ ಡಿಕ್ಕಿ ಹೊಡೆದ ಅದೇ ಬಸ್‌ನಲ್ಲಿ ಅವರ ತಾಯಿಯೂ ಪ್ರಯಾಣಿಸುತ್ತಿದ್ದರು.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕೆಯಾಗಿರುವ ಶಾಲಿನಿ ಅವರ ಐದು ಹೆಣ್ಣುಮಕ್ಕಳಲ್ಲಿ ದೀಪ್ತಿ ಹಿರಿಯವಳು. ಪ್ರೀತಿಯ ಅಕ್ಕನನ್ನು ಕಳೆದುಕೊಂಡ ಕಿರಿಯ ಸಹೋದರಿಯರ ಆಕ್ರಂದನ ಮುಗಿಲುಮುಟ್ಟಿತ್ತು.ಮೃತ ದೀಪ್ತಿ ಕುಟುಂಬವು ಮಂಗಳೂರಿನ ಬಲ್ಲಾಲ್‌ಬಾಗ್ ಸಮೀಪದ ವಿವೇಕನಗರದಲ್ಲಿ ವಾಸವಿದೆ. ದೀಪ್ತಿ ಅವರ ತಂದೆ ಮಹೇಶ್ ಅವರು ಕೂಡ ನಿಗಮದ ಪೌರಕಾರ್ಮಿಕರಾಗಿದ್ದು, ಕೆಲ ವರ್ಷಗಳ ಹಿಂದೆ ನಿಧನರಾದರು. ಅವರ ನಿಧನದ ಬಳಿಕ, ಶಾಲಿನಿ ಅವರನ್ನು ಅನುಕಂಪದ ಆಧಾರದ ಮೇಲೆ ಆ ಹುದ್ದೆಗೆ ನೇಮಕ ಮಾಡಲಾಗಿತ್ತು. ಆಗಿನಿಂದ ಅವರು ತಮ್ಮ ಐದು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿದ್ದರು.ದೀಪ್ತಿ ಖಾಸಗಿ ಕಾಲೇಜೊಂದರಲ್ಲಿ ಬಿಕಾಂ ಪದವಿ ಪೂರ್ಣಗೊಳಿಸಿ ತಾತ್ಕಾಲಿಕವಾಗಿ ಎಲ್‌ಐಸಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಹೋದರಿಯರಲ್ಲಿ ಒಬ್ಬರು ಬಿಇಡಿ, ಮತ್ತೊಬ್ಬರು ಪಿಯುಸಿ ವಿದ್ಯಾಭ್ಯಾಸದಲ್ಲಿದ್ದು, ಉಳಿದ ಇಬ್ಬರು ಶಾಲಾ ವಿದ್ಯಾರ್ಥಿನಿಯರು.ಘಟನೆ ನಡೆದ ರಾತ್ರಿ ದೀಪ್ತಿ ಅವರು ಕಿಶೋರ್ ಎಂಬವರೊಂದಿಗೆ ಸ್ಕೂಟರ್‌ನಲ್ಲಿ ವಾಮಂಜೂರಿನ ತಿರುವೈಲು ಸಮೀಪ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದರು. ಇದೇ ವೇಳೆ ಹಿಂಬದಿಯಿಂದ ಬಂದ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಆ ಬಸ್‌ನಲ್ಲೇ ದೀಪ್ತಿಯ ತಾಯಿ ಹಾಗೂ ಸಹೋದರಿಯರು ಪ್ರಯಾಣಿಸುತ್ತಿದ್ದುದರಿಂದ, ಮಗಳ ಸಾವನ್ನು ಕಣ್ಣೆದುರೇ ನೋಡಬೇಕಾದ ತಾಯಿಯ ಸ್ಥಿತಿ ಎಲ್ಲರ ಮನಕಲಕುವಂತಿತ್ತು. ಇಂತಹ ನೋವನ್ನು ಬೇರೆ ಯಾವ ತಾಯಿಯೂ ಅನುಭವಿಸಬಾರದು ಎಂದು ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.ಯುವತಿಯ ಸಾವನ್ನು ಖಂಡಿಸಿ, ದಲಿತ ಸಂಘಟನೆಗಳ ಮುಖಂಡರು ಗುರುವಾರ ಕದ್ರಿ ಪೊಲೀಸ್ ಠಾಣೆಯ ಎದುರು ಕೆಲಕಾಲ ಪ್ರತಿಭಟನೆ ನಡೆಸಿ, ಪ್ರಕರಣಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.ಘಟನೆಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಸುಧೀರ್‌ ಕುಮಾರ್ ರೆಡ್ಡಿ, ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ವರ್ಷ ಈಗಾಗಲೇ ನಗರ ವ್ಯಾಪ್ತಿಯಲ್ಲಿ ಆರರಿಂದ ಏಳು ಅಪಘಾತ ಪ್ರಕರಣಗಳು ಸಂಭವಿಸಿವೆ ಎಂದು ಅವರು ತಿಳಿಸಿ, ಕಾನೂನಿನ ಪ್ರಕಾರ ಎಲ್ಲ ಪ್ರಕರಣಗಳನ್ನೂ ನ್ಯಾಯಸಮ್ಮತವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಸಾರ್ವಜನಿಕ ಸಹಿ ಸಂಗ್ರಹ

February 6, 2026

ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಪ್ರಯಾಣಿಕರಿಗೆ ವಿಧಿಸುತ್ತಿದ್ದ ಟೋಲ್ ಶುಲ್ಕ ವಾಪಸ್ ಪಡೆದ ಕೆಎಸ್‌ಆರ್‌ಟಿಸಿ

February 6, 2026

ಉಳ್ಳಾಲ ನಗರ ಸಭೆ ವತಿಯಿಂದ ಮನೆ ದುರಸ್ತಿ, ಶೌಚಾಲಯ ರಚನೆ, ಪೌರಕಾರ್ಮಿಕರಿಗೆ ಸನ್ಮಾನ

February 6, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಸಾರ್ವಜನಿಕ ಸಹಿ ಸಂಗ್ರಹ

By UllalaVaniFebruary 6, 20260

ಮುಡಿಪು: ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಸಾರ್ವಜನಿಕ ಸಹಿ ಸಂಗ್ರಹಮುಡಿಪು ನವೋದಯದಿಂದ ಮುದುಂಗಾರು ಕಟ್ಟೆ–ಪಾತೂರು ಸಂಪರ್ಕಿಸುವ ಮುಖ್ಯ ರಸ್ತೆಯ ಕಾಮಗಾರಿ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಪ್ರಯಾಣಿಕರಿಗೆ ವಿಧಿಸುತ್ತಿದ್ದ ಟೋಲ್ ಶುಲ್ಕ ವಾಪಸ್ ಪಡೆದ ಕೆಎಸ್‌ಆರ್‌ಟಿಸಿ

February 6, 2026

ಉಳ್ಳಾಲ ನಗರ ಸಭೆ ವತಿಯಿಂದ ಮನೆ ದುರಸ್ತಿ, ಶೌಚಾಲಯ ರಚನೆ, ಪೌರಕಾರ್ಮಿಕರಿಗೆ ಸನ್ಮಾನ

February 6, 2026

ಬ್ರೇಕ್ ವೈಫಲ್ಯ – ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ..!

February 6, 2026
1 2 3 … 1,795 Next
Automatic YouTube Gallery

ಶ್ರೀ ಉಮಾಮಹೇಶ್ವರೀ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ

ದೇವಳದ ಬಗ್ಗೆ ಅತಿಥಿಗಳು ಹೇಳಿದ್ದೇನು..?; ಇವರುಗಳ ಮಾತು ನೀವು ಕೇಳಲೇಬೇಕು..?
#ullalavani #news #latestnews #ullala
ಶ್ರೀ ಉಮಾಮಹೇಶ್ವರೀ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
Now Playing
ಶ್ರೀ ಉಮಾಮಹೇಶ್ವರೀ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
ದೇವಳದ ಬಗ್ಗೆ ಅತಿಥಿಗಳು ಹೇಳಿದ್ದೇನು..?; ಇವರುಗಳ ಮಾತು ನೀವು ಕೇಳಲೇಬೇಕು..? ...
ದೇವಳದ ಬಗ್ಗೆ ಅತಿಥಿಗಳು ಹೇಳಿದ್ದೇನು..?; ಇವರುಗಳ ಮಾತು ನೀವು ಕೇಳಲೇಬೇಕು..?
#ullalavani #news #latestnews #ullala
ಅಬ್ಬಕ್ಕ ಉತ್ಸವದ ಕರಪತ್ರ ಬಿಡುಗಡೆ
Now Playing
ಅಬ್ಬಕ್ಕ ಉತ್ಸವದ ಕರಪತ್ರ ಬಿಡುಗಡೆ
ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ;ಫೆ.೧೪ರಂದು ನಡೆಯಲಿರುವ ವೀರರಾಣಿ ...
ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ;ಫೆ.೧೪ರಂದು ನಡೆಯಲಿರುವ ವೀರರಾಣಿ ಅಬ್ಬಕ್ಕ ಉತ್ಸವ ಹಿನ್ನಲೆ

ಉತ್ಸವದ ಕರಪತ್ರ ಬಿಡುಗಡೆ
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d