ದೇರಳಕಟ್ಟೆ : ಧನಾತ್ಮಕ ಚಿಂತನೆಯೊAದಿಗೆ ಕೆನರಾ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನನಗೆ ಅಪಾರ ಸಂತೋಷ ಮತ್ತು ಗೌರವದ ವಿಷಯವಾಗಿದೆ. ಈ ಅವಧಿಯಲ್ಲಿ ಸದಾ ಸಹಕಾರ, ಮಾರ್ಗದರ್ಶನ ಹಾಗೂ ಸಹಾನುಭೂತಿಯೊಂದಿಗೆ ಬೆಂಬಲ ನೀಡಿದ ಕೆನರಾ ಬ್ಯಾಂಕ್‌ನ ಎಲ್ಲಾ ಗೌರವಾನ್ವಿತ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿವರಾಮ ಕಾಸರಗೋಡು ಹೇಳಿದರು.

ದೇರಳಕಟ್ಟೆ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಿಸ್ವಾರ್ಥ ಸೇವಾಭಾವ, ಸಮಯೋಚಿತ ಸ್ಪಂದನೆ ಮತ್ತು ಗ್ರಾಹಕಪರ ದೃಷ್ಟಿಕೋನದಿಂದ ಬ್ಯಾಂಕಿನ ಕಾರ್ಯ ಯಶಸ್ವಿಯಾಗಿ ನೆರವೇರಲು ಸಾಧ್ಯವಾಯಿತು. ಈ ಸಂದರ್ಭದಲ್ಲಿ ಎಲ್ಲರ ಸಹಕಾರಕ್ಕೆ ಹೃತ್ಪೂರ್ವಕವಾಗಿ ಋಣಿಯಾಗಿದ್ದೇನೆ ಎಂದರು.
ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಹಿರಿಯ ಪ್ರಬಂಧಕ ಸುರೇಶ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆನರಾ ಬ್ಯಾಂಕ್‌ನಲ್ಲಿ ಕಳೆದ ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸಿ ನಿವೃತ್ತರಾಗುತ್ತಿರುವ ಶಿವರಾಮ ಕಾಸರಗೋಡು ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಸಾಂಸ್ಕೃತಿಕ ರಾಯಭಾರಿಯಾಗಿ, ಸಾಹಿತ್ಯ, ಸಾಂಸ್ಕೃತಿಕ, ಕನ್ನಡಪರ ಚಟುವಟಿಕೆ, ಕನ್ನಡ ಹೋರಾಟಗಳಿಗೆ ನೇತೃತ್ವ ವಹಿಸಿದ್ದು, ಹಲವು ಸಾಹಿತ್ಯಕೃತಿಗಳನ್ನು ಸಂಪಾದಿಸಿ, ಪ್ರಕಟಿಸಿದ್ದಾರೆ.
ಕೇರಳ, ಕರ್ನಾಟಕ ರಾಜ್ಯದಲ್ಲಿ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದ್ದು, ದೇಶವಿದೇಶಗಳಲ್ಲಿ ಹಲವು ಪ್ರತಿಷ್ಠಿತಪ್ರಶಸ್ತಿ, ಆರ್ಯಭಟ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ ಎಂದು ಶ್ಲಾಘಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕವಿ, ಸಾಹಿತಿರಾಧಕ ಕೃಷ್ಣ ಕೆ. ಉಳಿಯತ್ತಡ್ಕ, ಕೆನರಾಬ್ಯಾಂಕ್ ಎಂಪ್ಲಾಯ್ಮೆAಟ್ ಅಸೋಸಿಯೇಷನ್ನಿನ ವಿಶ್ರಾಂತ ಹಿರಿಯ ರಾಜ್ಯ ಮುಖಂಡ ಕೆ. ಸತೀಶ್ ಕಿಣಿ, ಕೆ. ಶಶಿಕಾಂತ, ಕೇರಳ ಸರಕಾರದ ಕೋಝಿಕೋಡ್ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಜಿಲ್ಲಾಧಿಕಾರಿ (ವಿಶ್ರಾಂತ) ಕೆ. ಗೀತಾ ಕುಮಾರಿ, ಕೆನರಾ ಬ್ಯಾಂಕ್ ರಾಜ್ಯ ಮುಖಂಡ ಅಖಿಲೇಶ್ . ವಿಜಯ್ ಮುಖ್ಯ ಅತಿಥಿಗಳಾಗಿದ್ದರು.
ನೀನಾ ಎಸ್. ರಾಜ್, ನೀತು ಕೆ. ಪಿ., ಸುಪ್ರೀತ್ ಕೆ., ವಿಪಿನ್ ಜೋನ್, ದಯಾನಂದ, ಗೌತಮೇಶ್ವರಿ, ರವೀಂದ್ರ ಶೆಟ್ಟಿ, ನಾಗೇಶ್, ಸುರೇಶ್ ಆಚಾರ್ಯ, ವಿಸ್ಮಿತಾ ಗಂಗಮ್ಮ ಉಪಸ್ಥಿತರಿದ್ದರು.
ದೇರಳಕಟ್ಟೆ ಶಾಖೆಯ ಹಿರಿಯ ಪ್ರಬಂಧಕ ಸುರೇಶ್ ಕುಮಾರ್ ಪ್ರಾಸ್ತಾವನೆಗೈದರು. ಪ್ರಬಂಧಕಿ ಸ್ವಾತಿ.ಜಿ ಸ್ವಾಗತಿಸಿದರು. ಅಖಿಲೇಶ್ ವಿಜಯ್ ನಿರ್ವಹಿಸಿದರು.



