Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಕಾಸರಗೋಡು

ತಂದೆಯ ಕತ್ತಿಯೇಟಿಗೆ ಮಗಳು ಬಲಿಯಾದ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೇಕುಂಞ ಸಾವು..!

UllalaVaniBy UllalaVaniFebruary 3, 2026Updated:February 3, 2026No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಜೇಶ್ವರ, ಫೆ.3 : ಆಸ್ತಿ ಕಲಹ ವಿಚಾರದಲ್ಲಿ ಜಗಳ ಸಂದರ್ಭ ಮಗಳ ಮೇಲೆ ಕತ್ತಿಯೇಟು ಬಿದ್ದು ಆಕೆ ಸಾವನ್ನಪ್ಪಿದ್ದಾಳೆಂದು ಹೇಳಲಾಗಿದ್ದ ಘಟನೆಗೆ ಮೇಜ‌ರ್ ಟ್ವಿಸ್ಟ್ ಸಿಕ್ಕಿದ್ದು, ತಂದೆಯೇ ತನ್ನ ಪತ್ನಿ ಮೇಲಿನ ದ್ವೇಷದಿಂದ ವಿಚ್ಚೇದನ ಬಗ್ಗೆ ಮಾತುಕತೆಯಾಡಿದ್ದ ಮಗಳ ಕುತ್ತಿಗೆಯನ್ನು ಕಡಿದು ಹತ್ಯೆ ಮಾಡಿದ್ದಾನೆಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಇದೇ ವೇಳೆ, ದಾಳಿ ತಡೆಯಲು ಬಂದು ಕತ್ತಿಯೇಟಿಗೆ ಒಳಗಾಗಿದ್ದ ಪತ್ನಿಯ ಸೋದರಿ ಗಂಡ ಶೇಕುಂಞ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಸೋಮವಾರ ಸಂಜೆ 5 ಗಂಟೆ ವೇಳೆಗೆ ಮಂಜೇಶ್ವರ ಠಾಣೆ ವ್ಯಾಪ್ತಿಯ ತುಮ್ಮಿನಾಡಿನಲ್ಲಿ ಘಟನೆ ನಡೆದಿತ್ತು. ಆರೋಪಿ ಉಮ್ಮರ್ ಫಾರೂಕ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಉಮ್ಮರ್ ಫಾರೂಕ್ ಗಲ್ಫ್ ನಲ್ಲಿ ಉದ್ಯೋಗದಲ್ಲಿದ್ದು ಪತ್ನಿಯ ಜೊತೆಗಿನ ವಿರಸದಿಂದ ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದ. ಆನಂತರ, ಪತ್ನಿ ತಾಹಿರಾ (41) ಮಾತಿಗೆ ಮಾತು ಬೆಳೆದು ನಿನ್ನ ಸಂಬಂಧವೇ ಬೇಡ. ವಿಚ್ಛೇದನ ಕೊಟ್ಟುಬಿಡು ಎಂದು ಹೇಳಿದ್ದಳು. ಅದರಂತೆ, ತನ್ನ ತಂಗಿಯ ಮನೆಯಲ್ಲಿ ಮಾತುಕತೆಗೆಂದು ಗಂಡ ಉಮ್ಮರ್ ನನ್ನು ಕರೆದಿದ್ದಳು.

ಉಮರ್ ಫಾರೂಕ್ ಕತ್ತಿ ಹಿಡಿದು ಬಂದಿದ್ದರೆ, ತಾಹಿರಾ ತನ್ನ ಮಗಳು ಮರಿಯಮ್ಮ ಜುಮೈಲಾ ಜೊತೆಗೆ ತಂಗಿ ಮನೆಗೆ ಬಂದಿದ್ದಳು. ಈ ವೇಳೆ ಮಾತುಕತೆ ನಡೆದು ತನ್ನಲ್ಲಿದ್ದ ಚಿನ್ನಾಭರಣ ಮತ್ತು ಮನೆಯ ಆಸ್ತಿಪತ್ರಗಳನ್ನು ಉಮರ್ ಫಾರೂಕ್ ಕೈಗೆ ನೀಡಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದಾಗಲೇ ಪತ್ನಿ ಜೊತೆಗೆ ನಿಂತಿದ್ದ ಮಗಳು ಜುಮೈಲಾ ಮೇಲೆ ತನ್ನ ಕೈಯಲ್ಲಿದ್ದ ಕತ್ತಿಯಿಂದ ಏಕಾಏಕಿ ಕಡಿದಿದ್ದಾನೆ. ಈ ವೇಳೆ ತಡೆಯಲು ಬಂದ ಪತ್ನಿಯ ತಂಗಿಯ ಗಂಡ ಸೇಕುಂಞ್ಞ ಮೇಲೂ ಕತ್ತಿಯಿಂದ ದಾಳಿ ನಡೆಸಿದ್ದಾನೆ. ಇಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ಒಯ್ದಿದ್ದು, ದಾರಿ ಮಧ್ಯದಲ್ಲೇ ಮಗಳು ಜುಮೈಲಾ ಸಾವನ್ನಪ್ಪಿದ್ದಳು.

ಉಮ್ಮರ್ ಫಾರೂಕ್ ಹಲ್ಲೆ ಮಾಡುವ ಉದ್ದೇಶದಿಂದಲೇ ತನ್ನ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಂದಿದ್ದ ಎಂದು ಮಂಜೇಶ್ವರ ಪಂಚಾಯತ್‌ ಸದಸ್ಯ ಇಲ್ಯಾಸ್ ತುಮ್ಮಿನಾಡು ‘ಮನೋರಮಾ’ಕ್ಕೆ ತಿಳಿಸಿದ್ದಾರೆ. ಜುಮೈಲಾ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದರಿಂದ ನೆಲಕ್ಕೆ ಕುಸಿದು ಬಿದ್ದಿದ್ದು ನೆಲದಲ್ಲಿ ರಕ್ತ ಕೋಡಿಯಂತೆ ಹರಿದಿತ್ತು. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದರೂ ತೀವ್ರ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾಳೆ. ಜುಮೈಲಾ(18) ಎಸ್ಸೆಸ್ಸೆಲ್ಸಿ ಮುಗಿಸಿ ಉಪ್ಪಳದ ಶಾಲೆಯಲ್ಲಿ ಪ್ಲಸ್ ವನ್ ಓದುತ್ತಿದ್ದಳು.

ಉಮ್ಮರ್ ಫಾರೂಕ್ ಗಾಂಜಾ, ಮತ್ತು ಮಾರಿಜುವಾನಾ ಡ್ರಗ್ಸ್ ಸೇವನೆಯ ಚಟಕ್ಕೆ ಹೊಂದಿದ್ದು, ಹಲವಾರು ಕೇಸುಗಳನ್ನು ಹೊಂದಿದ್ದಾನೆ. ಇದೇ ಕಾರಣಕ್ಕೆ ಗಂಡ – ಹೆಂಡತಿ ಮಧ್ಯೆ ಜಗಳವಾಗಿತ್ತು. ಜಗಳ ವಿರಸಕ್ಕೆ ಕಾರಣವಾಗಿ ವಿಚ್ಚೇದನ ವರೆಗೆ ಹೋಗಿತ್ತು. ಪತ್ನಿ ತಾಹಿರಾ ತನ್ನ ಮಗಳ ಜೊತೆಗೆ ಪ್ರತ್ಯೇಕ ಇರುತ್ತೇನೆ. ನೀನು ನನ್ನ ಬದುಕಿನಿಂದಲೇ ದೂರವಾಗು ಎಂದು ಹೇಳಿದ್ದಳು. ಆದರೆ ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ಪತ್ನಿಯ ಮೇಲೆ ಕತ್ತಿಯಿಂದ ಕಡಿಯಲು ಮುಂದಾಗಿದ್ದ ಪತ್ನಿಯ ಮೇಲೆ ಹಲ್ಲೆ ಗ್ರಿಡೆಸುತ್ತಾನೆಂದು ಮಗಳೇ ಮುಂದೆ ನಿಂತು ಮಾತುಕತೆ ಮಾಡಿದ್ದಳು. ಆದರೆ ಡ್ರಗ್ಸ್ ಅಮಲಿನಲ್ಲಿ ಅಲ್ಲಿಂದ ಹಿಂತಿರುಗುತ್ತಿದ್ದಾಗ ಮಗಳನ್ನೇ ಕುತ್ತಿಗೆ ಕಡಿದು ಹತ್ಯೆ ಮಾಡಿದ್ದಾನೆ. ತಡೆಯಲು ಬಂದ ಪತ್ನಿಯ ಸೋದರಿ ಗಂಡನೂ ಚೂರಿ ಇರಿತಕ್ಕೊಳಗಾಗಿ ದುರಂತ ಸಾವನ್ನಪ್ಪಿದ್ದಾರೆ. ಉಮ್ಮರ್ ಫಾರೂಕ್ ಡ್ರಗ್ಸ್ ಅಮಲಿನಿಂದಲೇ ಇಂಥ ಕೃತ್ಯ ಎಸಗಿದ್ದಾನೆಂದು ಸ್ಥಳೀಯರು ಹೇಳುತ್ತಿದ್ದಾರೆ. ಮಂಜೇಶ್ವರ, ಕಾಸರಗೋಡು ಭಾಗದಲ್ಲಿ ಗಾಂಜಾ, ಡ್ರಗ್ಸ್ ವಹಿವಾಟು ಜೋರಾಗಿದ್ದು ಪೊಲೀಸರಿಗೆ ಗೊತ್ತಿದ್ದೇ ದಂಧೆ ನಡೆಯುತ್ತಿದೆ. ಹೆಚ್ಚಾಗಿ ಮುಸ್ಲಿಂ ಯುವಕರೇ ಈ ಕೃತ್ಯದಲ್ಲಿ ತೊಡಗಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕಾಸರಗೋಡಿನಲ್ಲಿ ಭೀಕರ ಅಪಘಾತ.! ನಾಟೆಕಲ್ ನಿವಾಸಿ ಸೇರಿದಂತೆ ಇಬ್ಬರು ಮೃತ್ಯು..!

January 20, 2026

ಟೋಲ್ ಗೇಟ್ ನ ಕ್ಯಾಮರಾ ಹಾಗೂ ಗಾಜುಗಳನ್ನು ಪುಡಿ ಗೈದ ಪ್ರತಿಭಟನಾಕಾರರು…!

January 15, 2026

ಕಾಸರಗೋಡು ಜಿಲ್ಲಾ ಕನ್ನಡ ಶಾಲೆಗಳಲ್ಲಿ ಮಲಯಾಳ ಕಡ್ಡಾಯ ಮಸೂದೆಗೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಖಂಡನೆ

January 12, 2026

Comments are closed.

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

By UllalaVaniFebruary 5, 20260

ಉಳ್ಳಾಲ: ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು, ಮಂಜನಾಡಿ ಇದರ ಆಶ್ರಯದಲ್ಲಿ ಹಾಗೂ ಭಾರತ ಸರ್ಕಾರದ ಆಯುಷ್…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026

ಫೆ, 8.ಹಿದಾಯತ್ ನಗರ ಹುಸೈನಿಯಾ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ

February 4, 2026
1 2 3 … 1,793 Next
Automatic YouTube Gallery

ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ

ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ;ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ತೊಕ್ಕೊಟ್ಟುವಿನಲ್ಲಿ ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಮಾಹಿತಿ

#ullalavani #news #latestnews #ullala #yenapoya #prsmt
ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ
Now Playing
ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ
ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ...
ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ;ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ತೊಕ್ಕೊಟ್ಟುವಿನಲ್ಲಿ ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಮಾಹಿತಿ

#ullalavani #news #latestnews #ullala #yenapoya #prsmt
||HISTORY|| ಕಾಪಿಕಾಡ್ ಪ್ರದೇಶದಲ್ಲಿ ನೆಲೆ ನಿಂತ ಉಮಾಮಹೇಶ್ವರಿ ದೇವಿ....!
Now Playing
||HISTORY|| ಕಾಪಿಕಾಡ್ ಪ್ರದೇಶದಲ್ಲಿ ನೆಲೆ ನಿಂತ ಉಮಾಮಹೇಶ್ವರಿ ದೇವಿ....!
ನನ್ನ ಮನೆಗೂ ಬಂದಿತ್ತು ನಾಗರಹಾವುಗಳು; ಹೈವೆಯಲ್ಲಿ ನಡೆಯುತ್ತಿತ್ತಂತೆ ಅಪಘಾತಗಳು ...
ನನ್ನ ಮನೆಗೂ ಬಂದಿತ್ತು ನಾಗರಹಾವುಗಳು; ಹೈವೆಯಲ್ಲಿ ನಡೆಯುತ್ತಿತ್ತಂತೆ ಅಪಘಾತಗಳು

ದೇವಳದ ಆಡಳಿತ ಮೋಕ್ತೆಸರರಾದ ಎ.ಜೆ.ಶೇಖರ್ ಹೇಳಿದ್ರೂ ಅಂದಿನ ಕಥನ

#ullalavani #news #tulunad #latestnews #ullala #kapikad #umamaheshwaridevi #history
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d