ತಲಪಾಡಿ:ತಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪುಷ್ಪವತಿ ಶೆಟ್ಟಿ ನಿಧನದ ನಂತರ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸೀತಾ ಭಾಸ್ಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಆಯ್ಕೆಗೊಂಡ ಸೀತಾ ಭಾಸ್ಕರ್ ಅವರಿಗೆ ಹೂವಿನ ಹಾರ ಹಾಕಿ ಬಿಜೆಪಿ ಮಂಗಳೂರು ಮಂಡಲ ಸಂತಸ ವ್ಯಕ್ತಪಡಿಸಿದೆ.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಬಿಜೆಪಿ ಮಂಗಳೂರು ಮಂಡಲದ ಪ್ರಭಾರಿ ಮತ್ತು ಜಿಲ್ಲಾ ಉಪಾಧ್ಯಕ್ಷರು ಪೂಜಾ ಪೈ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ರವೀಂದ್ರ ಶೆಟ್ಟಿ ಉಳಿದೋಟ್ಟು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ, ಬಿಜೆಪಿ ಮಂಗಳೂರು ಮಂಡಲ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ ಆರ್. ದಯಾನಂದ ತೊಕ್ಕೊಟ್ಟು, ಜಿಲ್ಲಾ ಫಲಾನುಭವಿಗಳ ಸಂಪರ್ಕ ಸಹಸಯೋಜಕ ಜಿತೇಂದ್ರ ಶೆಟ್ಟಿ ತಲಪಾಡಿ, ತಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಸಾಂತ್ಯ, ಮಂಡಲ ಉಪಾಧ್ಯಕ್ಷರು ಮತ್ತು ತಲಪಾಡಿ ಗ್ರಾಮ ಸದಸ್ಯರಾದ ಶೈಲೇಶ್ ಶೆಟ್ಟಿ, ಮಂಡಲ ಕಾರ್ಯದರ್ಶಿ ರಮೇಶ್ ಬೆಂದ್ರೋಳಿಕೆ, ಬಿಜೆಪಿ ಜಿಲ್ಲಾ ಕಾರ್ಯಕರಣಿ ಸದಸ್ಯರು ಮೋಹನ್ ದಾಸ್ ಶೆಟ್ಟಿ ಕಿನ್ಯಾ, ಮಂಡಲ ಯುವ ಮೋರ್ಚಾ ಅಧ್ಯಕ್ಷ ಮುರಳಿ ಕೊಣಾಜೆ,
ಮಂಜನಾಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ನಿತ್ಯಾನಂದ ಭಂಡಾರಿ ಕಿನ್ಯಾ,ತಲಪಾಡಿ ಶಕ್ತಿಕೇಂದ್ರ ಪ್ರಮುಖರು ಸತ್ಯ ರಾಜ್ ಬಿಜೆಪಿ ಪ್ರಮುಖರು ರಾಜೇಶ್ ಗುಡ್ಡೆಮನೆ ಹಾಗೂ ಇತರ ಬಿಜೆಪಿ ಬೆಂಬಲಿತ ತಲಪಾಡಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.



