ಉಳ್ಳಾಲ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆಯಿಂದ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸ್ಕೌಟ್ ಗೈಡ್ ಮೇಳ ಹಾಗೂ ಕಬ್ ಬುಲ್ ಬುಲ್ ಉತ್ಸವ ಶನಿವಾರ ನಡೆಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ.ಜಿಲ್ಲಾ ಮಾಜಿ ಮುಖ್ಯ ಆಯುಕ್ತ ಡಾ.ಎನ್.ಜಿ.ಮೋಹನ್ ಉದ್ಘಾಟಿಸಿ, ಸ್ಕೌಟ್-ಗೈಡ್ ನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಲ್ಲಿ ಜೀವನದುದ್ದಕ್ಕೂ ಶಿಸ್ತು, ಪ್ರಾಮಾಣಿಕತೆ ಮತ್ತು ಸಾಮಾಜಿಕ ಕಳಕಳಿ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಗದೀಶ್ ಶೆಟ್ಟಿ, ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಯನಾ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳಾದ ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ಸ್ವಸ್ತಿಕ್, ವಿದ್ಯಾರತ್ನ ಶಾಲೆಯ ಅನೀಶ್ ಕುಮಾರ್, ಡಾ.ವೈಷ್ಣವಿ ಶೆಟ್ಟಿ, ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರತೀಕ್ಷಾ ಇವರನ್ನು ಸನ್ಮಾನಿಸಲಾಯಿತು. ವುಡ್ ಬ್ಯಾಡ್ಜ್ ಪುರಸ್ಕೃತೆ ಪಾನೀರ್ ಅಸ್ಸಿಸಿ ಕೇಂದ್ರೀಯ ಶಾಲೆಯ ಪ್ರಮೀಳಾ ಇವರನ್ನು ಅಭಿನಂದಿಸಲಾಯಿತು.
ರೋಪ್ ಕ್ಲೈಮಿಂಗ್, ಬ್ಲೈಂಡ್ ವಾಕ್, ಚಿಮಿಣಿ, ಸ್ವಿಂಗ್, ಕಮಾಂಡೋ ಬ್ರಿಡ್ಜ್, ಲ್ಯಾಡರ್ ಪಾಸಿಂಗ್, ಮಂಕಿ ಬ್ರಿಡ್ಜ್, ಲಾಗ್ ಪಾಸಿಂಗ್, ಟಯರ್ ವಾಲ್ ಮುಂತಾದ ಸಾಹಸ ಕ್ರೀಡೆಗಳನ್ನು ಅಯೋಜಿಸಲಾಗಿದ್ದು ಉಳ್ಳಾಲ ಸ್ಥಳೀಯ ಸಂಸ್ಥೆಯ 15 ಶಾಲೆಗಳ 550 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉಳ್ಳಾಲ ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ.ಎಚ್.ಮಲಾರ್ ಅಧ್ಯಕ್ಷತೆ ವಹಿಸಿ, ಕೇವಲ ಮೂರು ದಿನಗಳ ಅಂತರದಲ್ಲಿ ಕಾರ್ಯಕ್ರಮ ಸಂಯೋಜಿಸಿದರೂ ಮಕ್ಕಳ ಸಾಹಸಮಯ ಚಟುವಟಿಕೆಗಳಿಗೆ ಪೂರಕ ಎಲ್ಲಾ ವ್ಯವಸ್ಥೆ ಮಾಡುವಲ್ಲಿ ರಾಮಕೃಷ್ಣ ಶಾಲೆ ಸಫಲವಾಗಿದೆ ಎಂದು ಶ್ಲಾಘಿಸಿದರು.
ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್ ಶೆಟ್ಟಿ, ಶಾಲಾ ಸಂಚಾಲಕ ಕಡೆಂಜ ಸೋಮಶೇಖರ್ ಚೌಟ, ರಾಜ್ಯ ಸಂಪನ್ಮೂಲ ವ್ಯಕ್ತಿ ವಿನೋದ್ ಚೇವಾರ, ಜಿಲ್ಲಾ ಜತೆಕಾರ್ಯದರ್ಶಿ ಜಯವಂತಿ ಸೋನ್ಸ್, ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಕೆಎಂಕೆ ಮಂಜನಾಡಿ, ಹರೇಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಮಜೀದ್ ಎಂ.ಪಿ, ಪ್ರೌಢಶಾಲಾ ಮುಖ್ಯಶಿಕ್ಷಕಿ ಮೋಹಿನಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಪ್ರೇಮಲತಾ, ಶಿಬಿರ ನಾಯಕರಾದ ಹಸೀನಾ, ಪ್ರೀತಾ ಡಿಸೋಜ, ರೀನಾ ಡಿಸೋಜ, ಪುತ್ತೂರು ಫಿಲೊಮಿನಾ ಕಾಲೇಜಿನ ರೋರ್ವಸ್ ಗಳಾದ ಸಿಂಚನ್, ರಿಯಾನ್, ಸಂತೋಷ್, ವಿಯೋನ್ ಮೊದಲಾದವರು ಉಪಸ್ಥಿತರಿದ್ದರು.
ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಲಿಡಿಯಾ ಡಿಸೋಜ ಸ್ವಾಗತಿಸಿದರು. ಶಿಬಿರ ನಾಯಕಿ ವಿನಿತಾ ಶಿಬಿರ ಮುನ್ನೋಟದ ಮಾಹಿತಿ ನೀಡಿದರು. ನಯನಾ ಬಬ್ಬುಕಟ್ಟೆ ವಂದಿಸಿದರು. ಕಾರ್ಯಕ್ರಮ ಸಂಯೋಜಕ ತ್ಯಾಗಂ ಹರೇಕಳ ನಿರೂಪಿಸಿದರು.




