ಉಳ್ಳಾಲ: ಲಯನ್ಸ್ ಕ್ಲಬ್ ಛೋಟಾ ಮಂಗಳೂರು ವತಿಯಿಂದ ಹಸಿದವನಿಗೆ ಅನ್ನ ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ದೀಪಬೆಳಗಿಸುವುದರ ಮೂಲಕ ಗೋವರ್ಧನ ಶೆಟ್ಟಿ ಲಯನ್ಸ್ ಇಂಟರ್ನೇಶನಲ್ ಡಿಸ್ಟಿçಕ್ಟ್ 317ಡಿ ಚಾಲನೆ ನೀಡಿದ್ರು.

ಅಧ್ಯಕ್ಷತೆಯನ್ನು ಉಳ್ಳಾಲ ನಗರ ಸಭೆ ಪೌರಯುಕ್ತರು ಸಂತೋಷ್ ಎಂಡಿ ಕೆ ಎಮ್‌ಎ ಇ ಎಸ್ ವಹಿಸಿದ್ದರು. ಪೌರ ಕಾರ್ಮಿಕರ ಕರ್ತವ್ಯ ಶಿಸ್ತು ಸಮುದಾಯದ ಆರೋಗ್ಯ ಕಾಪಾಡುವ ಬದ್ಧತೆಯನ್ನು ಶ್ಲಾಘಿಸಿದರು ಹಾಗೂ ಪೌರಾಯುಕ್ತರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪೌರ ಕಾರ್ಮಿಕರು ಹೇಗೆ ಶ್ರಮಪಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ ಸಮಾಜದ ಆರೋಗ್ಯ ಸ್ವಾಸ್ಥ್ಯ ದಲ್ಲಿ ಅವರು ಪಾತ್ರವನ್ನು ಶ್ಲಾಘಿಸಿದರು.

ಸ್ವಚ್ಛತಾ ಪೌರ ಕಾರ್ಮಿಕರಲ್ಲಿ ಇಬ್ಬರು ಮಹಿಳೆ ಹಾಗೂ ಇಬ್ಬರು ಪುರುಷರನ್ನು ಪೌರಾಯುಕ್ತರು ಹಾಗೂ ಉದ್ಘಾಟಕರು ಸಾಂಕೇತಿಕವಾಗಿ ವೇದಿಕೆಯಲ್ಲಿ ಹೂ ನೀಡಿ ಗೌರವಿಸಿದರು ಉಳಿದಂತೆ 61 ಮಂದಿ ಸ್ವಚ್ಛತಾ ಕಾರ್ಮಿಕರನ್ನು ಹೂ ನೀಡಿ ಗೌರವಿಸಲಾಯಿತು.

ದಣಿದು ಬಂದ ಜೀವಕ್ಕೆ ತ್ರಾಸ ಆಗಬಾರದೆಂಬ ಇರಾದೆಯಿಂದ ಎತ್ತರದಲ್ಲಿ ಕುಳ್ಳಿರಿಸಿ ಸವಿರುಚಿಯಾದ ಭೋಜನವನ್ನು ಪೌರಾಯುಕ್ತರು ಹಾಗೂ ಉದ್ಘಾಟಕರು ಸ್ವತ: ತಮ್ಮ ಕೈಯಾರೆ ಬಡಿಸುವುದರ ಮೂಲಕ ಅತಿಥಿ ಸತ್ಕಾರ ಕ್ಕೆ ಚಾಲನೆ ನೀಡಿದರು. ಕ್ಲಬ್ ನ ಸದಸ್ಯರಾದ ಭಾನುಮತಿ, ಬಾಲಕೃಷ್ಣ ಶೆಟ್ಟಿ,ವಿಧ್ಯಾದರ ಶೆಟ್ಟಿ ಅವರ ಧರ್ಮಪತ್ನಿ ನಿಶಾಂತ್ ಶೆಟ್ಟಿ ಹರಿಣಾಕ್ಷಿ ಕೊಲ್ಯ ಕಮಲಾ ಗೌಡ ಸತೀಶ್ ಭಂಡಾರಿ ಸೇರಿದಂತೆ ಎಲ್ಲರೂ ಸತ್ಕಾರ ನೀಡುವಲ್ಲಿ ಕೈ ಜೋಡಿಸಿದರು.
ಈ ಸಂದರ್ಭ ಲಯನ್ಸ್ ಕ್ಲಬ್ ಛೋಟಾ ಮಂಗಳೂರು ಕಾರ್ಯದರ್ಶಿ ಕಮಲಾ ಗೌಡ, ಕೋಶಾಧಿಕಾರಿ ಸತೀಶ್ ಭಂಡಾರಿ, ಆರೋಗ್ಯ ನಿರೀಕ್ಷಕರು ರವಿಕೃಷ್ಣ , ಉಳ್ಳಾಲ ನಗರ ಸಭೆ ಪರಿಸರ ಅಭಿಯಂತರರು ಪುನೀತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಿಶಾಂತ್ ಶೆಟ್ಟಿ ಪ್ರಾರ್ಥಿಸಿದರು.
ಹರಿಣಾಕ್ಷಿ ಕೊಲ್ಯ ಸ್ವಾಗತಿಸಿದರು. ಕಮಲಾ ಗೌಡ ಧನ್ಯವಾದ ಅರ್ಪಿಸಿದರು. ವಿದ್ಯಾಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.



