ಉಳ್ಳಾಲ: ಉಳ್ಳಾಲದ ಸೀ ಗ್ರೌಂಡ್ ಕಡಲತೀರದ ಪ್ರದೇಶದಲ್ಲಿ ಮಾರಕ ತ್ಯಾಜ್ಯಗಳ ವಿಲೇವಾರಿ ವಿರುದ್ಧ ಸ್ಥಳೀಯರು ಯುನೈಟೆಡ್ ಎಂಪವರ್‌ಮೆoಟ್ ಅಸೋಸಿಯೇಷನ್ ನೇತೃತ್ವದಲ್ಲಿ ಸೀ ಗ್ರೌಂಡ್ ಪ್ರದೇಶದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ.

ಭಿತ್ತಿಫಲಕಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದ ಪ್ರತಿಭಟನಕಾರರು, ಪರಿಸರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಶಾಶ್ವತ ವ್ಯವಸ್ಥೆಯನ್ನು ಕಲ್ಪಿಸುವಂತೆ ಸ್ಥಳೀಯಾಡಳಿತವನ್ನು ಒತ್ತಾಯಿಸಿದ್ದಾರೆ. ಇದೇ ವೇಳೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಮಂಗಳೂರು ಮಾತನಾಡಿ, ಸೀಗ್ರೌಂಡ್ ಕಡಲತೀರದ ಕಸದ ರಾಶಿಯಿಂದಾಗಿ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಜೊತೆಗೆ ಪರಿಸರ ಮಾಲಿನ್ಯ ಹೆಚ್ಚಾಗಲು ಕಾರಣವಾಗಿದೆ ಎಂದು ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ.

ಅಧ್ಯಕ್ಷತೆ ವಹಿಸಿದ್ದ ಅಬ್ದುಲ್ ರೆಹಮಾನ್ ಹಾಗೂ ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷರಾದ ಇಮ್ತಿಯಾಜ್ ಬಿ.ಕೆ ಅವರು, ಸೀ ಗ್ರೌಂಡ್‌ನ ಇತಿಹಾಸದ ಮಹತ್ವವನ್ನು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಯುವಕರ ಪಾತ್ರ ಮಹತ್ವವನ್ನು ಸಾರಿದ್ರು.
ಇನ್ನು ಪ್ರತಿಭಟನೆಯಲ್ಲಿ ಸ್ಥಳೀಯ ಮಾಜಿ ಕೌನ್ಸಿಲರ್ ಇಬ್ರಾಹೀಂ ಖಲೀಲ್, ಕರ್ನಾಟಕ ರಕ್ಷಣಾ ವೇದಿಕೆ ಉಳ್ಳಾಲ ಘಟಕದ ಅಧ್ಯಕ್ಷರಾಧ ಫೈರೋಜ್ ಕೋಟೆಪುರ, ರಾಜ್ಯ ಘಟಕದ ಸದಸ್ಯರಾದ ಅಶ್ರಫ್ ಖಾನ್, ಇಕ್ಬಾಲ್, ನಝೀರ್ ಆಲ್ಫಾ, ಇಮ್ತಿಯಾಜ್ ಅಳೇಕಲ್, ಶಾಫಿ ಹಳೆಕೋಟೆ, ರಿಯಾಜ್ ಹಳೆಕೋಟೆ, ವಲಯ ಸದಸ್ಯರಾದ ಸಿದ್ಧೀಕ್ ಸ್ಪೋಟಿಂಗ್, ಖಾದರ್ ಮಂಚಿಲ, ರಾಯಲ್ ಫೌಂಡೇಶನ್ ಕಾರ್ಯದರ್ಶಿ ಮುಸ್ತಫಾ ಮುಕ್ಕಚ್ಚೇರಿ, ನವಾಝ್ ಹಾಗೂ ಅನೇಕ ಕ್ರೀಡಾಪಟುಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.




