ಮಂಗಳೂರು: ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ನಡೆದ ಜಾಗತಿಕ ಬಿಲ್ಲವ ಕ್ರೀಡಾ ಕೂಟದಲ್ಲಿ ಚಾಂಪಿಯನ್ಸ್ ಟ್ರೋಫಿ ಪಡೆದುಕೊಂಡ ಬ್ರಹ್ಮಶ್ರೀ ಉಳ್ಳಾಲ ತಂಡದ ಕ್ರೀಡಾಪಟುಗಳಿಗೆ , ಆಟಗಾರರನ್ನು ಒಗ್ಗೂಡಿಸಲು ಹಗಲು ರಾತ್ರಿ ಸಹಕರಿಸಿದ ನಾಯಕರಿಗೆ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಉಳ್ಳಾಲ ಅಧ್ಯಕ್ಷ ಕೆ.ಟಿ.ಸುವರ್ಣ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಜಾಗತಿಕ ಬಿಲ್ಲವ ಕ್ರೀಡಾಕೂಟದಲ್ಲಿ ಜಾಗತಿಕ ಬಿಲ್ಲವ ಕ್ರೀಡಾ ಚಾಂಪಿಯನ್ಸ್ ಟ್ರೋಫಿಯನ್ನು ಬ್ರಹ್ಮಶ್ರೀ ಉಳ್ಳಾಲ ತಂಡ ಪಡೆದುಕೊಂಡಿದೆ. ಬ್ರಹ್ಮಶ್ರೀ ಉಳ್ಳಾಲ ತಂಡ ವಾಲಿಬಾಲ್ ಪ್ರಥಮ , ಹಗ್ಗ ಜಗ್ಗಾಟ ದ್ವಿತೀಯ , ತ್ರೋಬಾಲ್ ನಲ್ಲಿ ತೃತೀಯ ಪಡೆದು ಉಳ್ಳಾಲಕ್ಕೆ ಹೆಚ್ಚಿನ ಅಂಕವನ್ನು ಸಾಧಿಸಿತ್ತು. ಯಶಸ್ಸಿನಲ್ಲಿ ಉಳ್ಳಾಲ ಭಾಗದ ಬಿಲ್ಲವ ಸಂಘಗಳಾದ ಕೊಲ್ಯ ಬಿಲ್ಲವ ಸಂಘ, ಗ್ರಾಮ ಚಾವಡಿ ಬಿಲ್ಲವ ಸಂಘ, ಅಂಬ್ಲಮೊಗರು ಬಿಲ್ಲವ ಸಂಘ , ಬಿಲ್ಲವ ಸಂಘ ಕಿನ್ಯ ಬೆಳರಿಂಗೆ, ಬ್ರಹ್ಮಶ್ರೀ ಬಿಲ್ಲವ ವೇದಿಕೆ ಮುಡಿಪು, ತಲಪಾಡಿ ಬಿಲ್ಲವ ಸಂಘ , ಬೋಳಿಯಾರ್ ಬಿಲ್ಲವ ಸಂಘ , ಬ್ರಹ್ಮಶ್ರೀ ಮಹಿಳಾ ವೇದಿಕೆ ಉಳ್ಳಾಲ ಸಹಕಾರವನ್ನು ನೀಡಿದ್ದಾರೆ.

ಬ್ರಹ್ಮಶ್ರೀ ಬಿಲ್ಲವ ವೇದಿಕೆ ಗೌರವ ಸಲಹೆಗಾರರಾದ ಎ.ಜೆ.ಶೇಖರ್ ಮತ್ತು ಕಾರ್ಯಾಧ್ಯಕ್ಷ ಸತೀಶ್ ಕರ್ಕೇರ ತಂಡ ರಚಿಸಲು ಹಾಗೂ ಕ್ರೀಡಾಕೂಟದಂದು ಬೆಳಗ್ಗಿನಿಂದ ರಾತ್ರಿ ತನಕ ತಂಡದೊಂದಿಗೆ ಇದ್ದು ಸರ್ವ ರೀತಿಯಲ್ಲೂ ಸಹಕರಿಸಿದ್ದರು. ಸಹ್ಯಾದ್ರಿ ಕೋ ಆಪರೇಟಿವ್ ಸೊಸೈಟಿ ಉಳ್ಳಾಲ ಇದರ ಆಡಳಿತ ಮಂಡಳಿ ಪೂರ್ಣ ಸಹಕಾರದೊಂದಿಗೆ ಬ್ರಹ್ಮಶ್ರೀಬಿಲ್ಲವ ವೇದಿಕೆ ಉಳ್ಳಾಲ ಪದಾಧಿಕಾರಿಗಳಾದ ಆನಂದ ಕೆ ಅಸ್ಸೈಗೂಳಿ, ಹರೀಶ್ ಅಂಬ್ಲ ಮೊಗರು, ಲಕ್ಷ್ಮಣ್ ಪೂಜಾರಿ , ರಾಜೇಶ್ ಕೆರೆಬೈಲು, ಗೋಪಿನಾಥ್ ದೇರಳಕಟ್ಟೆ, ಆರ್ ಕೆ ಉದಯ, ಜಗದೀಶ್ ಕೆರೆಬೈಲು, ಜೀವನ ತೊಕ್ಕೊಟ್ಟು, ಲೋಕೇಶ್ ಮುಡಿಪು, ಹರೀಶ್ ಮುಂಡೋಳಿ ಇನ್ನಿತರ ಹಲವು ಸದಸ್ಯರು ಪೂರ್ಣ ಸಹಕಾರವನ್ನು ನೀಡಿದ್ದಾರೆ. ಇವರಿಗೆಲ್ಲರಿಗೂ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಈ ಕುರಿತು ಮಾತನಾಡಿದ ಅವರು, ಪ್ರಶಸ್ತಿ ಲಭಿಸಿರುವುದು ನಮಗೆ ಅಪಾರ ಸಂತೋಷವನ್ನು ತಂದಿದೆ. ಈ ಯಶಸ್ಸಿಗೆ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಂಡಕ್ಕೆ ನೀಡಿದ ಬೆಂಬಲ ಮತ್ತು ಸಹಕಾರ ಅತ್ಯಂತ ಮಹತ್ವದ್ದಾಗಿದೆ. ಇವರಿಗೆಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.




