ಕುತ್ತಾರು;ಕೊರಗಜ್ಜನ ಆದಿಸ್ಥಳ ಕುತ್ತಾರು ಕ್ಷೇತ್ರಕ್ಕೆ ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ ಭೇಟಿ, ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಬಳಿಕ ಮಾತನಾಡಿದ ಇವರು, ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡುವ ತಮ್ಮ ಆಶಯ ಈಡೇರಿದೆ. ಕರಾವಳಿಯ ಸಂಸ್ಕೃತಿಯನ್ನು ಜಗತ್ತಿಗೆ ಪಸರಿಸುವ ಉದ್ದೇಶದಿಂದ ತುಳು ಸಿನಿಮಾದಲ್ಲೂ ನಟಿಸಿರುವುದಾಗಿ ತಿಳಿಸಿದ್ರು.
ಇನ್ನು ಪುತ್ರ ಅಹಾನ್ ಶೆಟ್ಟಿ ನಟಿಸಿರುವ ‘ಬಾರ್ಡರ್-೨’ ಚಿತ್ರದ ಯಶಸ್ಸಿಗೆ ಆಶೀರ್ವಾದ ಕೋರಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕುತ್ತಾರು ಕ್ಷೇತ್ರದ ಆಡಳಿತ ಸಮಿತಿಯಿಂದ ಅವರನ್ನು ಶಾಲುಹೊದಿಸಿ ಗೌರವಿಸಲಾಯಿತು.



