ಉಳ್ಳಾಲ : ಹಿಂದೂ ಸಂಗಮ ಆಯೋಜನಾ ಸಮಿತಿ ಉಳ್ಳಾಲ ತಾಲೂಕು ಇದರ ಯೋಜನೆಯಂತೆ 2026ರ ಜ.18 ರಿಂದ ಫೆ.1 ರವರೆಗೆ ತಾಲೂಕಿನ 10 ಕಡೆಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಜ.18, ಮದ್ಯಾಹ್ನ 3ಕ್ಕೆ ಗೋವನಿತಾಶ್ರಯ ಪಾವೂರು, ಜ.25 ರಂದು ಮಧ್ಯಾಹ್ನ 3 ಕ್ಕೆ ಕೈರಂಗಳ ಹೂಹಾಕುವಕಲ್ಲು ಮೈದಾನ, ಮಧ್ಯಾಹ್ನ 3 ಕ್ಕೆ ಕುತ್ತಾರು ದೇವಸ್ಥಾನ, ಫೆ. 1 ಮಧ್ಯಾಹ್ನ 3 ಕ್ಕೆ ಸೋಮೇಶ್ವರ ವ್ಯಾಪ್ತಿಯ ಶಾರದಾ ಮೈದಾನ ಕೊಲ್ಯ, ಕೋಟೆಕಾರು-ಮಾಡೂರು ನೀರಿನ ಟ್ಯಾಂಕ್ ಬಳಿ, ತಲಪಾಡಿ- ದೇವಿಪುರ ದೇವಸ್ಥಾನ, ಕೊಣಾಜೆ ಅಸೈಗೋಳಿ ಮೈದಾನ, ಕುರ್ನಾಡು ಕಾಯರ್ ಗೋಳಿ ಮೈದಾನ , ಅಂಬ್ಲಮೊಗರು ಆಡು ಬಾಕಿಮಾರ್ ಗದ್ದೆ, ಉಳ್ಳಾಲ ಐಸ್ ಫ್ಯಾಕ್ಟರಿ ಛೋಟಾ ಮಂಗಳೂರು ಪ್ರದೇಶಗಳಲ್ಲಿ ನಡೆಯಲಿದೆ.
ಸಮಿತಿ ಗೌರವಾಧ್ಯಕ್ಷರಾಗಿ ಸುದೇಶ್ ಮರೋಳಿ, ಅಧ್ಯಕ್ಷರಾಗಿ ಚಂದ್ರಹಾಸ್ ಪೂಂಜಾ, ಉಪಾಧ್ಯಕ್ಷರಾಗಿ ರಾಜೇಶ್ ಬಂಗೇರ, ಸಂಯೋಜಕರಾಗಿ ಪ್ರೇಮ್ ರಾಜ್ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಪದ್ಮನಾಭ ಪಾಣಾರ ಸೋಮೇಶ್ವರ, ರಾಜೇಶ್ ಬಂಗೇರ ಉಳ್ಳಾಲ, ಶ್ರೀಧರ್ ಪೆರಡೆ ಮಂಜನಾಡಿ, ಸತೀಶ್ ದೀಪಂ, ಪ್ರಸಾದ್ ಮಡ್ಯಾರ್ ಕೋಟೆಕಾರ್, ಜಯಂತ್ ಕೊಂಡಾಣ, ಶಿವಪ್ರಸಾದ್ ಅಡ್ಕ ಸೋಮೇಶ್ವರ, ಶೋಭಾ ಕೇಶವ ಕಜೆ ಕಿನ್ಯ, ಸೂರಜ್ ಮಡ್ಯಾರ್, ಜಗದೀಶ್ ನಾಯ್ಕ್ ತಲಪಾಡಿ, ಪ್ರವೀಣ್ ಕೃಷ್ಣ ಕೋಡಿ, ರಮೇಶ್ ಶೆಟ್ಟಿಗಾರ್ ಕೊಣಾಜೆ ಕಾರ್ಯದರ್ಶಿಯಾಗಿ ಸುಭಾಷ್ ಧರ್ಮನಗರ, ಪವಿತ್ರ ಕರೆಬೈಲ್, ದುಷ್ಯಂತ್ ಮುಡಿಪು, ಕೋಶಾಧಿಕಾರಿಯಾಗಿ ಪ್ರವೀಣ್ ಬಸ್ತಿ, ಸುದರ್ಶನ್ ಧರ್ಮನಗರ, ಮಹಿಳಾ ಸಂಚಾಲಕರಾಗಿ ಗಾಯತ್ರಿ ಕಿಶೋರ್, ಕುತ್ತಾರು, ಸಹಸಂಚಾಲಕಿಯಾಗಿ ತುಳಸಿ ನಿತಿನ್ ಗಟ್ಟಿ ಕುರ್ನಾಡ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಸಾಮಾಜಿಕ ಸೇವಾ ಸಹಕಾರ, ಸ್ವಾವಲಂಬನೆ ವೃದ್ಧಿಸುವ ಸಲುವಾಗಿ ಸಮಾಜದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಸೇವಾ, ಕ್ರೀಡಾ, ಕಲಾ, ಸಹಕಾರಿ ಇತ್ಯಾದಿ ಎಲ್ಲಾ ಪ್ರಕಾರದ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಕೌಟುಂಬಿಕ ಮೌಲ್ಯಗಳ ಪುನರುತ್ಥಾನ, ಸಾಮಾಜಿಕ ಸಾಮರಸ್ಯದ ಜಾಗರಣ, ಪರಿಸರ ಸಂರಕ್ಷಣೆಯ ಸಂಕಲ್ಪ, ಸ್ವಾವಲಂಬಿ ಹಾಗೂ ಸ್ವಾಭಿಮಾನಿ ಜೀವನ ಪದ್ಧತಿ ಮತ್ತು ನಾಗರೀಕ ಕರ್ತವ್ಯಗಳ ಪಾಲನೆಯ ಅನುಷ್ಠಾನದಂತಹ ಆದರ್ಶಗಳ ಅಡಿಯಲ್ಲಿ ಸಮಾಜಕ್ಕಾಗಿ ಸಂಘಟಿತವಾಗಿ ಸ್ಥಳೀಯ ಸಮಾಜವೇ ನಡೆಸುವ ಕಾರ್ಯಕ್ರಮಗಳಾಗಲಿವೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ



