ಮಂಜೇಶ್ವರ,ಜ.06: ತಲಪ್ಪಾಡಿಯಲ್ಲಿ ಕೆಎಸ್ಆರ್ಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಇದರಿಂದಾಗಿ ಬಸ್ಸಿನ ಗಾಜು ಒಡೆದಿದೆ. ಸೋಮವಾರ ರಾತ್ರಿ 9ಗಂಟೆ ಸುಮಾರಿಗೆ ತಲಪಾಡಿಯಲ್ಲಿ ಈ ಘಟನೆ ನಡೆದಿದೆ. ಬಸ್ ಮಂಗಳೂರಿನಿoದ ಕಾಸರಗೋಡಿಗೆ ಬರುತ್ತಿದ್ದ ಸಂದರ್ಭ ತಲಪಾಡಿಯಿಂದ ಹೊರಟ ತಕ್ಷಣ, ಯಾರೋ ಹಿಂದಿನಿoದ ಕಲ್ಲು ತೂರಾಟ ನಡೆಸಿದ್ದಾರೆಂದು ವರದಿಯಾಗಿದೆ. ಈ ಸಂದರ್ಭ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಮೇರೆಗೆ ಆಗಮಿಸಿದ ಮಂಜೇಶ್ವರ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.



