ಕೈರಂಗಳ; ರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಮಾಗದರ್ಶನದಲ್ಲಿ ಕೈರಂಗಳದ ಪುಣ್ಯಕೋಟಿ ನಗರದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ ಜ.14ರಿಂದ ಫೆ.12ರವರೆಗೆ ಗೋಸೇವಾ ಮಾಸಾಚರಣೆ ಆದ್ದೂರಿಯಾಗಿ ನಡೆಯಲಿದೆ.

ಸುಮಾರು ಒಂದು ತಿಂಗಳುಗಳ ಕಾಲ ನಡೆಯಲಿರುವ ಗೋ ಮಾಸಾಚರಣೆಯು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಸೇರಿದಂತೆ ವೈಭವಯುತ ಕಾರ್ಯಕ್ರಮಗಳೊಂದಿಗೆ ಮೇಳೈಸಲಿದೆ. ಜ.14ರಂದು ಸಂಜೆ 5ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಭಾಧ್ಯಕ್ಷತೆಯನ್ನು ಇನೋಳಿ ಶ್ರೀಸೋಮನಾಥ ದುರ್ಗಾಪರಮೇಶ್ವರೀ ದೇವಸ್ಥಾನ ದೇವಂದಬೆಟ್ಟು ಇದರ ಆಡಳಿ ಮೊಕ್ತೇಸರರಾದ ಚಂದ್ರಹಾಸ ಪೂಂಜ, ಕಿಲ್ಲೂರುಗುತ್ತು ವಹಿಸಲಿದ್ದಾರೆ.

ಉದ್ಘಾಟಕರಾಗಿ ಭಜನಾ ಸಂಕೀರ್ತನಕಾರರು ಹಾಗೂ ತರಬೇತುದಾರರಾದ ದೀನ್‌ರಾಜ್ ಕಳವಾರು ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಕಣಂತೂರಿನ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಪೊಯ್ಯತ್ತಾಯ, ಗಡಿ ಪ್ರಧಾನ ಪದ್ಮನಾಭ ರೈ ಯಾನೆ ಮಂಜು ಭಂಡಾರಿ ನಾರ್ಯಗುತ್ತು, ಮುಡಿಪು ಹವ್ಯಕ ವಲಯಾಧ್ಯಕ್ಷ ಪೆರಡೆ ತಿರುಮಲೇಶ್ವರ ಭಟ್ ನಚ್ಚ, ಡಾ.ಹರಿಕಿರಣ್ ಟಿ.ಬಂಗೇರ, ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಉಪಾಧ್ಯಕ್ಷ ಸುಭಾಷ್ ಧರ್ಮನಗರ, ಚಂದ್ರಹಾಸ ಕಣಂತೂರು, ವಿಶ್ವಕರ್ಮ ಸಂಘ ಅಧ್ಯಕ್ಷ ಸುರೇಶ್ ಆಚಾರ್ಯ, ನಿವೃತ್ತ ಯೋಧ ಪೂವಪ್ಪ ಕಡಂಬಾರು ಭಾಗಿಯಾಗಲಿದ್ದಾರೆ.

ಪ್ರತಿದಿನ ವಿವಿಧ ಭಜನಾ ತಂಡಗಳಿoದ ಭಜನಾ ಸಂಕೀರ್ತನೆ ಮೊಳಗಲಿದೆ. ಈ ಅಮೃಧಾರಾ ಗೋಶಾಲೆ ಪೂಜ್ಯನೀಯ ಎಂದು ಹಿಂದೂ ಸನಾತನಿಯವರು ನಂಬಿಕೊoಡು ಬಂದಿರುವ ಗೋಮಾತೆಯಂದಿರು ಇರುವ ತಾಣ. ಈ ಹಿನ್ನಲೆ ವಿಶೇಷವಾಗಿ ಗೋ ಮಾಸಾಚರಣೆ ಎಂಬ ಹೆಸರಿನಲ್ಲಿ ವಿನೂತನ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಸುಮಾರು ಒಂದು ತಿಂಗಳು ನಡೆಯುವ ಕಾರ್ಯಕ್ರಮ ಇಡೀ ಊರಿಗೆ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಿಕೊಡತ್ತೆ. ಚೆಂಡೆ, ವಾದ್ಯ, ನಾದಗಳ ನಿನಾದದ ಜೊತೆಗೆ ವೈಭವಯುತವಾಗಿ ಕಾರ್ಯಕ್ರಮ ಯಶಸ್ವಿಗೊಳ್ಳಲಿದೆ.




