ಅಸೈಗೋಳಿ; ಹಿಂದೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಸಂತೋಷ್ ಶೆಟ್ಟಿ ಅಸೈಗೋಳಿ ಮರಳಿ ಕಾಂಗ್ರೆಸ್ಸಿಗೆ ಬರುವ ಎಲ್ಲಾ ಲಕ್ಷಣಗಳು ಗೋಚರಿಸಿವೆ.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದುಕೊಂಡು ಕಾಂಗ್ರೆಸ್ಸಿನಲ್ಲಿ ಸಕ್ರಿಯವಾಗಿದ್ದ ಸಂತೋಷ್ ಶೆಟ್ಟಿ ಅಸೈಗೋಳಿ, ಬಳಿಕ ಕಾಂಗ್ರೆಸ್ಸನ್ನು ತೊರೆದು ಉಳ್ಳಾಲ ಶಾಸಕರ ವಿರುದ್ಧ ಮಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಆರೋಪಗಳ ಸುರಿಮಳೆಯನ್ನೇ ಗೈದಿದ್ದರು. ತದನಂತರ ಮಂಗಳೂರು ಮಂಡಲ ಬಿಜೆಪಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧಿಕೃತವಾಗಿ ಸೇರ್ಪಡೆಗೊಂಡು ಬಿಜೆಪಿಯಲ್ಲಿಯೂ ಪಕ್ಷದ ಜವಾಬ್ದಾರಿಯನ್ನು ಪಡೆದುಕೊಂಡಿದ್ದರು.

ಇದೀಗ ಪಟ್ಟೋರಿಯಲ್ಲಿ ನಡೆದ ವರ್ಷಾವಧಿ ಜಾತ್ರೆ ಪ್ರಯುಕ್ತ ವಿಧಾನಸಭಾಧ್ಯಕ್ಷರು ಯು.ಟಿ.ಖಾದರ್, ಸಹೋದರ ಯು.ಟಿ.ಇಫ್ತಿಕಾರ್ ಆಲಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಸಂತೋಷ್ ಶೆಟ್ಟಿ ಅಸೈಗೋಳಿ ಅವರ ಮನಗೆ ಭೇಟಿ ನೀಡಿದ್ದಾರೆ. ಇದರಿಂದ ಮತ್ತೊಮ್ಮೆ ಸಂತೋಷ್ ಶೆಟ್ಟಿ ಅಸೈಗೋಳಿ ಶಾಸಕರ ಜತೆಗಿದ್ದ ಮುನಿಸು ಮರೆತು ಕಾಂಗ್ರೆಸ್ಸಿನತ್ತ ವಾಲಿರುವುದು ಸ್ಪಷ್ಟ ಅನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಇನ್ನು ಮುನಿಸಿನ ಸಂದರ್ಭದಲ್ಲಿ ಇವರ ಜೊತೆಗೆ ಬಿಜೆಪಿ ಪಕ್ಷದಲ್ಲಿದ್ದವರ ನಡೆ ಏನೆಂಬುವುದು ಕುತೂಹಲ ಮೂಡಿಸಿದೆ.

